ಮನೆಯಿಂದ ಹೊರಬಂದ ಯುವಕ ಇನ್ನೊಂದು ಕಟ್ಟಡದಿಂದ ಜಿಗಿದ | BBA ವಿದ್ಯಾರ್ಥಿಯ ಈ ನಿರ್ಧಾರಕ್ಕೆ ಕಾರಣವೇನು?

ಇತ್ತೀಚಿಗೆ ಯುವಕ ಯುವತಿಯರು ಮನನೊಂದು ಆತ್ಮಹತ್ಯೆ ಮಾಡುವುದು ಹೆಚ್ಚಾಗಿದೆ. ಬಾಳಿ ಬದುಕಬೇಕಾದ ಜೀವಗಳು ಯಾವುದೋ ಕ್ಷುಲ್ಲಕ ಕಾರಣಗಳಿಗೆ ತಮ್ಮ ಜೀವ ಮತ್ತು ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಹೌದು ಇಲ್ಲೊಬ್ಬ ಯುವಕ
ಮನೆಯಿಂದ ಹೊರ ಬಂದು ಬೇರೆ ಕಟ್ಟಡದಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

 

ಹೆಗ್ಗನಹಳ್ಳಿ ನಿವಾಸಿ ಪವನ್ 21 ವರ್ಷದ ಯುವಕನೋರ್ವ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬಿಬಿಎ ಅಂತಿಮ ವರ್ಷದ ಓದುತ್ತಿದ್ದು, ಬುಧವಾರ ರಾತ್ರಿ ಸುಮಾರು 10.30ರ ವೇಳೆಗೆ ಸುಬ್ರಮಣ್ಯ ನಗರದ ಮಿಲ್ಕ್ ಕಾಲೋನಿಯಲ್ಲಿರುವ ಕಟ್ಟಡದಿಂದ ಪವನ್ ಜಿಗಿದಿದ್ದಾನೆ.

ಪೊಲೀಸ್ ಮಾಹಿತಿ ಪ್ರಕಾರ ಎಎಸ್​ಸಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡ್ತಿದ್ದ ಪವನ್ ನಿನ್ನೆ ಸಂಜೆ ಹೆಗ್ಗನಹಳ್ಳಿಯ ಮನೆಗೆ ಬಂದಿದ್ದಾನೆ. ಬಳಿಕ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಮಣ್ಯನಗರ ಮಿಲ್ಕ್ ಕಾಲೋನಿ ಬಳಿ ಬಂದಿದ್ದು ಮಿಲ್ಕ್ ಕಾಲೋನಿ ಮೈದಾನ ಸಮೀಪದ ಕಟ್ಟಡವೊಂದರಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕಟ್ಟಡದೊಳಗೆ ಪವನ್ ಹೇಗೆ ಬಂದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.