ಮುಚ್ಚಲಿದೆಯಾ ತಿರುಪತಿ ತಿಮ್ಮಪ್ಪನ ಗರ್ಭಗುಡಿ! ಇನ್ನುಮುಂದೆ ಭಕ್ತರಿಗೆ ದರ್ಶನ ನೀಡುವುದಿಲ್ವಾ ಬಾಲಾಜಿ?
ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯ ಎಂದು ಪ್ರಸಿದ್ಧವಾಗಿರುವ ದೇವಾಲಯ ಆಂಧ್ರಪದೇಶದ ತಿರುಪತಿ ದೇವಾಲಯ. ಪ್ರತಿದಿನ ಲಕ್ಷಾಂತರ ಭಕ್ತಾಭಿಮಾನಿಗಳು ಬಂದು ಬಾಲಾಜಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಾಲಯದ ಆದಾಯವೂ ಕೂಡ ಸಾವಿರಾರು ಕೋಟಿಗಿಂತಲೂ ಹೆಚ್ಚಿನದ್ದೆಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಈ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ಮುಚ್ಚಲಾಗುತ್ತಿದೆ. ಅರೆ ಹೌದಾ!. ಇನ್ನು ಬಾಲಾಜಿಯ ದರ್ಶನ ಯಾರಿಗೂ ಸಿಗುವುದಿಲ್ಲವೆ? ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ತಿಮ್ಮಪ್ಪನ ದೇವಾಲಯದ ಮುಖ್ಯ ಗರ್ಬಗುಡಿಯನ್ನು 2023 ರಲ್ಲಿ ಸುಮಾರು 6 ರಿಂದ 8 ತಿಂಗಳ ಕಾಲ ಮುಚ್ಚಲು ದೇವಾಲಯದ ಆಡಳಿತ ಮಂಡಳಿ(ಟಿಟಿಡಿ) ತೀರ್ಮಾನಿಸಿದೆ. ಹೌದು ದೇವಾಲಯದ ಮುಖ್ಯ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ವಿಮಾನವಾದ ‘ಆನಂದ ನಿಲಯಂ’ ನ ಚಿನ್ನದ ಲೇಪನವನ್ನು ಬದಲಾಯಿಸಲು ತೀರ್ಮಾನಿಸಿದ್ದು, ಇದರ ಹಿನ್ನೆಲೆಯಲ್ಲಿ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ಟಿಟಿಡಿ ಯು ಮಾಹಿತಿಯನ್ನು ನೀಡಿದೆ.
ಇದಕ್ಕೂ ಮುನ್ನ 1958 ರಲ್ಲಿ ಈ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸಲಾಗಿತ್ತು. ಆ ಸಮಯದಲ್ಲಿ ಬದಲಾವಣೆಯ ಕಾರ್ಯಕ್ಕಾಗಿ 8 ವರುಷಗಳು ತೆಗೆದುಕೊಂಡಿತ್ತು. ಆದರೆ ಇದೀಗ ತಂತ್ರಜ್ಞಾನಗಳ ಮೂಲಕ ಕಾರ್ಯಗಳು ನಡೆಯುವುದರಿಂದ ಅಷ್ಟು ಸಮಯ ಬೇಕಾಗಿಲ್ಲ, ಕೇವಲ ಆರೆಂಟು ತಿಂಗಳಲ್ಲಿ ಈ ಬದಲಾವಣೆಯ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ
ಹಾಗಾದರೆ ಈ ಸಮಯದಲ್ಲಿ ತಿಮ್ಮಪ್ಪನ ದರ್ಶನ ಸಿಗುವುದಿಲ್ಲವೇ ಎಂದು ಭಕ್ತರು ಕೇಳಬಹುದು. ಆದ್ದರಿಂದ ಬರುವ ಭಕ್ತಾದಿಗಳಿಗೆ ಮುಖ್ಯ ದೇವಾಲಯದ ಪಕ್ಕದಲ್ಲಿ ವೆಂಕಟೇಶ್ವರನ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಜೀವಕಳೆ ತುಂಬಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಈ ಮೂರ್ತಿಗೆ ಪ್ರತಿನಿತ್ಯವೂ ಗರ್ಭಗುಡಿಯ ಮೂಲ ಮೂರ್ತಿಗೆ ನಡೆಯುವಂತೆ ವಿಧಿವಿಧಾಗಳಲ್ಲಿ ಪೂಜೆಗಳು ನಡೆಯುತ್ತವೆ ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಲೇಪನ ಬದಲಾವಣೆ ಸಂದರ್ಭದಲ್ಲಿ ಮುಖ್ಯ ದೇವರ ಶಕ್ತಿಯನ್ನು ಬಲಾಯಾಲಂಗೆ ಕೊಂಡೊಯ್ಯುವ ಕಾರಣ ಭಕ್ತರು ದೇವಾಲಯ ಪ್ರವೇಶಿಸುದು ವ್ಯರ್ಥವಾಗುತ್ತದೆ. ಅಲ್ಲದೆ ಮೂಲ ಮೂರ್ತಿಗೆ ಯಾವುದೇ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ. ಮತ್ತು ರಿಪೇರಿ ನಡೆಯುವ ಸಮಯದಲ್ಲಿ ಸಾವಿರಾರು ಜನರು ದೇವಾಲಯ ಪ್ರವೇಶಿಸುವುದು ಸುರಕ್ಷತೆಯ ದೃಷ್ಟಿಯಿಂದ ಸರಿಯಾಗುವುದಿಲ್ಲ. ಹಾಗಾಗಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗದ ಕಾರಣ ಸದ್ಯದಲ್ಲಿಯೇ ಲೇಪನ ಬದಲಾವಣೆಯ ಕಾರ್ಯವು ಆರಂಭವಾಗುತ್ತದೆ.