Reliance scholorship | ಪದವಿ ಪೂರ್ವ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ; ವಾಟ್ಸಪ್ ನಲ್ಲಿ ಜಸ್ಟ್ ‘Hi’ ಮಾಡಿ ಪಡೆಯಿರಿ ಸ್ಕಾಲರ್ಷಿಪ್

ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ರಿಲಯನ್ಸ್ ಸ್ಕಾಲರ್ಷಿಪ್ ನೀಡುತ್ತಲೇ ಬಂದಿದ್ದು, ಈ ಬಾರಿಯೂ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸುತ್ತಿದೆ. ಸ್ಕಾಲರ್​ಶಿಪ್​ (1) ಪದವಿ ಪೂರ್ವ ವಿದ್ಯಾರ್ಥಿ ವೇತನ ಹಾಗೂ ಸ್ಕಾಲರ್​ಶಿಪ್​ (2) ಸ್ನಾತಕೋತ್ತರ ವಿದ್ಯಾರ್ಥಿ ವೇತನವನ್ನು ರಿಲಯನ್ಸ್ ಸಂಸ್ಥೆ ನೀಡುತ್ತಿದೆ. ವಾಟ್ಸಪ್ಪ್ ನಲ್ಲಿ “ಹಾಯ್” ಎಂದು 7977100100 ಗೆ ಒಂದು ಮೆಸೆಜ್ ಮಾಡಿದರೆ ಸಾಕು. ಅಭ್ಯರ್ಥಿಗಳು ಸ್ಕಾಲರ್ಷಿಪ್ ಪಡೆಯಬಹುದು.

ಈ ಸ್ಕಾಲರ್ಷಿಪ್ ಗೆ ಆಯ್ಕೆಯಾಗಲು ಆಪ್ಟಿಟ್ಯೂಡ್ ಟೆಸ್ಟ್ ಪಾಸ್ ಆಗಿರಬೇಕು. ಎಲ್ಲಾ ಅರ್ಜಿದಾರರು ಆನ್‌ಲೈನ್ ಆಪ್ಟಿಟ್ಯೂಡ್ ಪರೀಕ್ಷೆಗೆ ಉತ್ತರಿಸಲು ಪರೀಕ್ಷೆಯ ಅವಧಿಯು 60 ನಿಮಿಷಗಳು ಮತ್ತು 60 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯು ಮೌಖಿಕ ಸಾಮರ್ಥ್ಯ, ವಿಶ್ಲೇಷಣಾತ್ಮಕ ಮತ್ತು ಲಾಂಗ್ ಆನ್ಸ್​ರ್ ಪ್ರಕಾರವನ್ನು ಒಳಗೊಂಡಿರುತ್ತದೆ.

ಅಗತ್ಯ ದಾಖಲೆಗಳು:
1. ವೈಯಕ್ತಿಕ ಮತ್ತು ಸಂಪರ್ಕ ಮಾಹಿತಿ
2. ಶೈಕ್ಷಣಿಕ ಮಾಹಿತಿ
3. ಸಾಧನೆಗಳು ಮತ್ತು ಪ್ರಶಸ್ತಿಗಳು
4. ಪೋಷಕ ದಾಖಲೆಗಳು

ಅರ್ಜಿ ಸಲ್ಲಿಸಲು ಅರ್ಹ ಇರುವ ಅಭ್ಯರ್ಥಿಗಳು:
*ಪದವಿ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಈ ಸ್ಕಾಲರ್​ಶಿಪ್​ಗೆ ಅಪ್ಲೈ ಮಾಡಬಹುದು.
*ನೀವು ಈ ಹಿಂದೆ ಅಪ್ಲೈ ಮಾಡಿದ್ದರೂ ಸಹ ಮತ್ತೆ ಈ ಬಾರಿ ಅಪ್ಲೈ ಮಾಡಬಹುದು.
*ಅಪ್ಲಿಕೇಶನ್ ತಪ್ಪಾಗಿ ತುಂಬಿದ್ದರೆ ಮತ್ತೊಮ್ಮೆ ನೀವು ಪುನಃ ಅರ್ಜಿ ತುಂಬ ಬಹುದು.
*ಭಾರತ ದೇಶದ ಎಲ್ಲಾ ವಿದ್ಯಾರ್ಥಿಗಳೂ ಸಹ ಅಪ್ಲೈ ಮಾಡಬಹುದು.
*25 ವರ್ಷದೊಳಗಿನ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು.
*ನಿಮ್ಮ ಕುಟುಂಬದ ಆದಾಯದ ಮೇಲೆ ನಿಮ್ಮ ವಿದ್ಯಾರ್ಥಿ ವೇತನದ ಮೊತ್ತ ನಿರ್ದಾರವಾಗುತ್ತದೆ. 2 ರಿಂದ 6 ಲಕ್ಷದವರೆಗೆ ನೀವು ವಿದ್ಯಾರ್ಥಿ ವೇತನ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ :
*ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮುಖಪುಟ ತೆರೆಯಿರಿ
*ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳಿ
*ಸರಿಯಾದ ಸಂಪರ್ಕ ಸಂಖ್ಯೆ ನೀಡಿ
*ಇ-ಮೇಲ್​ ಐಡಿ ಸರಿಯಾಗಿ ನಮೂದಿಸಿ
*ಕ್ಯಾಪ್ಚಾ ಸರಿಯಾಗಿ ತುಂಬಿ
*ಕೊನೆಯದಾಗಿ ಸಬ್ಮೀಟ್​ ಕೊಡಿ, ಸೇವ್​ ಮಾಡಿ ಹಾರ್ಡ್​ ಕಾಫಿ ತೆಗೆದುಕೊಳ್ಳಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11:59 ಫೆಬ್ರುವರಿ 14 2023

Leave A Reply

Your email address will not be published.