ಸೌತ್ ಸಿನಿಮಾಗಳ ಹಾಡಿಗಿಂತ ಬಾಲಿವುಡ್ ಸಾಂಗ್ಸ್ ‘ದಿ ಬೆಸ್ಟ್’ – ಕಿರಿಕ್ ರಾಣಿಯ ಕಿರಿಕ್ ಹೇಳಿಕೆ
ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಇತ್ತೀಚೆಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಸೌತ್ ಇಂಡಸ್ಟ್ರಿಗಿಂತ ಬಾಲಿವುಡ್ ಸಾಂಗ್ಸ್ ಬೆಸ್ಟ್ ಎಂದು ಹೇಳಿಕೆ ನೀಡಿ ಮತ್ತೆ ರಶ್ಮಿಕಾ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು , ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದರಿಂದ ಕನ್ನಡಿಗರ ಕೋಪಕ್ಕೆ ತುತ್ತಾಗಿ ನೆಟ್ಟಿಗರ ಟ್ರೊಲಿಂಗ್ ವಿಚಾರವಾಗಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಮೇಲೆ ಸಾಲು ಸಾಲು ವಿವಾದಗಳು ಕೇಳಿಬರುತ್ತಿದ್ದು, ಅವರ ಹೇಳಿಕೆಗಳು ನೆಟ್ಟಿಗರ ಕೋಪಕ್ಕೆ ಕಾರಣವಾಗುತ್ತಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ ನಿರ್ಮಾಣ ಸಂಸ್ಥೆಯ ಹೆಸರನ್ನೂ ಬಳಸದೆ ವ್ಯಂಗ್ಯ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರೊಂದಿಗೆ ರಶ್ಮಿಕಾ ಅವರನ್ನು ಕನ್ನಡದಲ್ಲಿ ಬ್ಯಾನ್ ಮಾಡುವ ವಿಚಾರ ಕೂಡ ಕೇಳಿ ಬರುತ್ತಿತ್ತು. ಕೊನೆಗೆ ರಶ್ಮಿಕಾ ಈ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಕೂಡ ಮಾಡಿದ್ದರು. ಇದೀಗ, ರಶ್ಮಿಕಾ ಬಾಲಿವುಡ್ ಹಾಡುಗಳು ಮತ್ತು ಸೌತ್ ಹಾಡುಗಳ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಇದು ಸೌತ್ ಸಿನಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಸೌತ್ ಹಾಗೂ ಬಾಲಿವುಡ್ ನಲ್ಲಿ ನಟಿಸಿ ಸೈ ಎನಿಸಿಕೊಂಡ ನ್ಯಾಶನಲ್ ಕ್ವೀನ್ ರಶ್ಮಿಕಾ ಸದ್ಯ ಹಿಂದಿ ಸಿನಿಮಾದ ಪ್ರಚಾರದಲ್ಲಿ ಬಿಝಿ ಆಗಿದ್ದಾರೆ.ಮಿಷನ್ ಮಜ್ನು ಸಿನಿಮಾ ಮೂಲಕ ಪುಷ್ಪ ನಟಿ ಬಾಲಿವುಡ್‌ಗೆ ಎಂಟ್ರಿ ನೀಡಿದ್ದು, ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ಹೀರೋಯಿನ್ ಆಗಿ ತೆರೆ ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ರಶ್ಮಿಕಾ ಮೊದಲ ಹಿಂದಿ ಸಿನಿಮಾ ‘ಗುಡ್‌ಬೈ’ ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಇದೀಗ ಮಿಷನ್ ಮಜ್ನು ಸಿನಿಮಾ ಮೂಲಕ ಮತ್ತೆ ಹಿಂದಿ ಅಭಿಮಾನಿಗಳ ಮುಂದೆ ಬರಲಿದೆ. ಇತ್ತೀಚಿಗಷ್ಟೆ ಮಿಷನ್ ಮಜ್ನು ಸಿನಿಮಾದ ಹಾಡು ರಿಲೀಸ್ ಆಗಿ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ನಡೆದ ನಡೆದ ಈವೆಂಟ್ ನಲ್ಲಿ ಸೌತ್ ಮತ್ತು ಬಾಲಿವುಡ್ ನಡುವಿನ ವ್ಯತ್ಯಾಸದ ಬಗ್ಗೆ ರಶ್ಮಿಕಾ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಈ ವೇಳೆ, ‘ಬಾಲಿವುಡ್ ಹಾಡುಗಳು ಹೆಚ್ಚು ರೊಮ್ಯಾಂಟಿಕ್ ಆಗಿ ಇರುತ್ತವೆ. ಸೌತ್‌ನಲ್ಲಿ ಹೆಚ್ಚು ಮಾಸ್, ಮಸಾಲ ಹಾಗೂ ಐಟಂ ಹಾಡುಗಳು ಇರುತ್ತವೆ’ ಎಂದು ಹೇಳಿಕೆ ನೀಡಿದ್ದು ಇದೀಗ ಟ್ರೊಲಿಂಗ್ ವಿಚಾರವಾಗಿ ಮಾರ್ಪಟ್ಟಿದೆ.
ಕನ್ನಡದಿಂದ ಸೌತ್‌ಗೆ ಬಂದ ಮೇಲೆ.. ಕನ್ನಡವನ್ನು ಕೀಳಾಗಿ ಮಾತನಾಡುತ್ತಿದ್ದೀರಿ. ಈಗ ದಕ್ಷಿಣದಿಂದ ಉತ್ತರಕ್ಕೆ ಹೋದ ಮೇಲೆ ಸೌತ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಿರಾ??.. ಸೌತ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹಾಡುಗಳು ಇಲ್ಲವೇ?? ಅವರು ಅದನ್ನು ಇಲ್ಲಿ ಪ್ರದರ್ಶನ ನೀಡಲು ಆಗುವುದಿಲ್ಲವೇ? ಈಗ ಎಲ್ಲವೂ ದಕ್ಷಿಣದತ್ತ ತೆರಳುತ್ತಿದೆ. ನಿಮಗೆ ಬಾಲಿವುಡ್ ಎಂದರೆ ಅಷ್ಟು ಇಷ್ಟವೇ!!! ಎಂದು ನೆಟ್ಟಿಗರು ರಶ್ಮಿಕಾ ಅವರ ಮೇಲೆ ಕುಪಿತರಾಗಿದ್ದು, ಅವರ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.