Tech Tips : ರೈಲು ಎಲ್ಲಿದೆ ಎಂದು ಪೇಟಿಯಂ ಆ್ಯಪ್ ಮೂಲಕ ಟ್ರ್ಯಾಕ್ ಮಾಡುವ ಕ್ರಮ!

ರೈಲು ಸಂಚಾರ ಮಾಡಬೇಕೆಂದರೆ ಅರ್ಧ ಗಂಟೆ ಮೊದಲೇ ಪ್ಲಾಟ್‌ಫಾರ್ಮ್‌ಗೆ ಹೋಗಿ ಕಾಯಬೇಕಿತ್ತು. ಮತ್ತು ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಇನ್ನು ಮುಂದೆ ಪೇಟಿಯಂ ಆ್ಯಪ್​ ಮೂಲಕ ನೀವು ಹತ್ತುವ ರೈಲು ಎಷ್ಟು ಹೊತ್ತಿಗೆ, ಎಲ್ಲಿಗೆ ಬರುತ್ತದೆ ಎಂದು ತಿಳಿಯಬಹುದಾಗಿದೆ.

ರೈಲಿನಲ್ಲಿ ಪ್ರಯಾಣ ಬೆಳೆಸುವುದೆಂದರೆ ಬಹಳ ಕಷ್ಟದ ಸಂಗತಿಯಾಗಿತ್ತು. ಏಕೆಂದರೆ ರೈಲಿನಲ್ಲಿ ಟಿಕೆಟ್ ದರ ಕಡಿಮೆ ಇರುವುದರಿಂದ ರೈಲುಗಳನ್ನೇ ಹೆಚ್ಚು ಅವಲಂಬಿಸುತ್ತಿದ್ದರು. ಆದ್ದರಿಂದ ಕೆಲವೊಂದು ಬಾರಿ ರೈಲ್ವೇ ಸ್ಟೇಶನ್​​ಗಳಲ್ಲಿ ಎಲ್ಲಿದೆ ಎಂದು ಹುಡುಕಲು ಕಷ್ಟವಾಗುತ್ತಿತ್ತು. ಇನ್ನು ಮುಂದೆ ಸುಲಭ ದಾರಿ ಇಲ್ಲಿದೆ.

ಹೌದು ಸ್ಮಾರ್ಟ್‌ಫೋನ್‌ನಲ್ಲಿ ರೈಲು ಲೈವ್ ಸ್ಥಳವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚೆಗೆ ರೈಲು ಎಲ್ಲಿದೆ ಎಂಬುದನ್ನು ತಿಳಿಸುವ ಹಲವಾರು ಆ್ಯಪ್‌ಗಳಿವೆ.
ಒಂದಾನೊಂದು ಕಾಲದಲ್ಲಿ ಪ್ರಯಾಣಿಕರು ತಾವು ಹತ್ತಲು ಬಯಸುವ ರೈಲು ಯಾವಾಗ ಪ್ಲಾಟ್‌ಫಾರ್ಮ್‌ಗೆ ತಲುಪುತ್ತದೆ ಎಂದು ತಿಳಿಯಲು ರೈಲು ಪ್ರಕಟಣೆಗಾಗಿ ಕಾಯಬೇಕಾಗಿತ್ತು. ಆದರೆ ತಂತ್ರಜ್ಞಾನದ ಮುಂದುವರಿದ ನಂತರ, ಅವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ರೈಲು ಲೈವ್ ಸ್ಥಳವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಈಗಾಗಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು Paytm ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸ್ವಯಂಚಾಲಿತ ಮಾರಾಟ ಯಂತ್ರದ ಮೂಲಕ ಪ್ರಯಾಣಿಕರ ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಸುಲಭ ಮತ್ತು ತ್ವರಿತ ಮಾರ್ಗವನ್ನು ಒದಗಿಸುತ್ತಿದೆ. Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ UPI ಆಯ್ಕೆಗಳ ಮೂಲಕ ಪ್ರಯಾಣಿಕರು ಪಾವತಿಸಿ ಸುಲಭವಾಗಿ ಹಾಗೂ ತ್ವರಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಇದರ ಜೊತೆಗೆ ರೈಲು ಎಲ್ಲಿದೆ?, ಪಿಎನ್​ಆರ್​ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾದ ಆಯ್ಕೆಯನ್ನು ಕೂಡ ಪೇಟಿಯಂ ನೀಡಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಪೇಟಿಯಂ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದ್ದು, ಅಪ್ಡೇಟ್ ಮಾಡಿದ ತಕ್ಷಣ ಸಿಗಲಿದೆ. ರೈಲು ಲೈವ್ ಟ್ರ್ಯಾಕ್ ಮಾಡಲು ಮತ್ತು ಪಿಎನ್​ಆರ್​ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಸೂತ್ರ ಅನುಸರಿಸಿ.

  • Paytm ಅಪ್ಲಿಕೇಶನ್‌ಗೆ ಹೋಗಿ ಮತ್ತು ಟ್ರೈನ್ ಸ್ಟೇಟಸ್ ಆಯ್ಕೆಯನ್ನು ಸರ್ಚ್ ಮಾಡಿ.
  • ಈಗ Paytm ಟ್ರಾವೆಲ್ ವಿಭಾಗವು ತೆರೆಯುತ್ತದೆ ಮತ್ತು ಇಲ್ಲಿ ನಿಮಗೆ ರೈಲು, ಬಸ್, ವಿಮಾನಗಳು ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ಅವಕಾಶ ಮಾಡಿಕೊಡುತ್ತದೆ.
  • ನೀವು “ರೈಲುಗಳು” ಆಯ್ಕೆಯನ್ನು ಆರಿಸಬೇಕು. ಇಲ್ಲಿ PNR ಸ್ಥಿತಿ, ಲೈವ್ ರೈಲು ಸ್ಥಿತಿ, ರೈಲು ಕ್ಯಾಲೆಂಡರ್ ಮತ್ತು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಆಯ್ಕೆ ಕಾಣುತ್ತೀರಿ.
  • ಇಲ್ಲಿ ನೀವು ರೈಲು ಸಂಖ್ಯೆಯನ್ನು ನಮೂದಿಸಬಹುದು ಮತ್ತು ಸರ್ಚ್ ಬಟನ್ ಅನ್ನು ಟ್ಯಾಪ್ ಮಾಡಬಹುದು.
    ಒಮ್ಮೆ ನೀವು ಮಾಹಿತಿಯನ್ನು ಹಾಕಿದರೆ, ಮುಂಬರುವ ನಿಲ್ದಾಣ, ಕೊನೆಯದಾಗಿ ಕಳೆದ ನಿಲ್ದಾಣ, ಪ್ರಯಾಣಕ್ಕೆ ಉಳಿದಿರುವ ಸಮಯ, ಪ್ಲಾಟ್‌ಫಾರ್ಮ್ ವಿವರಗಳು, ಆಗಮನ ಮತ್ತು ನಿರ್ಗಮನ ಸಮಯಗಳು, ನಿರೀಕ್ಷಿತ ಆಗಮನದ ಸಮಯಗಳು ಸೇರಿದಂತೆ ಎಲ್ಲಾ ಪ್ರಯಾಣದ ವಿವರಗಳನ್ನು ಅಪ್ಲಿಕೇಶನ್ ತೋರಿಸುತ್ತದೆ.
    ಅಂತೆಯೇ, ನಿಮ್ಮ ಟಿಕೆಟ್ ಬುಕಿಂಗ್ ಸ್ಥಿತಿಯನ್ನು ಪರಿಶೀಲಿಸಲು ನೀವು ನಿಮ್ಮ PNR ಸಂಖ್ಯೆಯನ್ನು ನಮೂದಿಸಬಹುದು.

ಅದಲ್ಲದೆ ರೈಲು ಕ್ಯಾಲೆಂಡರ್ ಅನ್ನು ಸಹ ಪರಿಶೀಲಿಸಬಹುದು ಮುಂದಿನ ಒಂದು ವಾರದ ಬಗೆಗಿನ ಮಾಹಿತಿ, ಸೀಟುಗಳ ಲಭ್ಯತೆಯನ್ನು ನೋಡಲು ಸಾಧ್ಯವಾಗುತ್ತದೆ.

ATVM ಗಳ ಮೂಲಕ IRCTC ಟಿಕೆಟ್ ಬುಕ್ ಮಾಡುವ ಕ್ರಮ :

  • ನಿಮ್ಮ ಹತ್ತಿರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಮತ್ತು ATVM ಅನ್ನು ಗಮನಿಸಿ.
  • ATVM ನಲ್ಲಿ ನಿಮ್ಮ ಆದ್ಯತೆಯ ಮಾರ್ಗವನ್ನು ಆಯ್ಕೆಮಾಡಿ.
  • ಈಗ, Paytm UPI ಅನ್ನು ನಿಮ್ಮ ಪಾವತಿ ಆಯ್ಕೆಯಾಗಿ ಆಯ್ಕೆಮಾಡಿ.
  • ಪರದೆಯ ಮೇಲೆ ಲಭ್ಯವಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  • ವಹಿವಾಟು ಪೂರ್ಣಗೊಂಡ ನಂತರ ನೀವು ATVM ನಿಂದ ಭೌತಿಕ ಟಿಕೆಟ್ ಪಡೆಯಬಹುದು .

Leave A Reply

Your email address will not be published.