ವಿವಾಹಿತ ಮಹಿಳೆಯರೇ ಈ ಮೇಕಪ್ ವಸ್ತುಗಳನ್ನು ಹಂಚಬೇಡಿ | ಯಾಕೆ ಗೊತ್ತಾ?

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮಲ್ಲಿರುವ ಮೇಕಪ್ ಐಟಂ, ಬಟ್ಟೆ ಇವೆಲ್ಲವನ್ನು ಗೆಳತಿಯರು ಅಥವಾ ಸಹೋದರಿಯರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ವಿವಾಹಿತ ಮಹಿಳೆಯರು ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಕೆಲವೊಂದು ಮೇಕಪ್ ವಸ್ತುಗಳನ್ನು ಹಂಚಿಕೊಳ್ಳಬಾರದು ಎನ್ನಲಾಗಿದೆ. ಒಂದು ವೇಳೆ ಹಂಚಿಕೊಂಡರೆ ಸಂಬಂಧದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇನ್ನೂ, ವಿವಾಹಿತ ಮಹಿಳೆಯರು ಯಾವೆಲ್ಲ ಮೇಕಪ್ ಐಟಂಗಳನ್ನು ಹಂಚಿಕೊಳ್ಳಬಾರದು ಎಂಬುದು ಇಲ್ಲಿದೆ.

ಸಿಂಧೂರ : ಹಣೆಗೆ ಇಡುವ ಸಿಂಧೂರಕ್ಕೆ ಅದರದೇ ಆದ ವಿಶೇಷ ಮಹತ್ವವಿದೆ. ವಿವಾಹಿತ ಮಹಿಳೆಯರಿಗೆ ಸಿಂಧೂರ ಅತಿ ಮುಖ್ಯವಾದದ್ದು, ಸಿಂಧೂರ ಅವರ ಗುರುತು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದರೆ ಮಹಿಳೆಯರೇ ನಿಮ್ಮ ಸಿಂಧೂರವನ್ನು ಇತರ ಮಹಿಳೆಯರಿಗೆ ನೀಡಬಾರದು. ಹಾಗೂ ವಿವಾಹಿತ ಮಹಿಳೆಯರು ಬೇರೆಯವರ ಮುಂದೆ ನಿಂತು ಸಿಂಧೂರವನ್ನು ಹಚ್ಚಿಕೊಳ್ಳಬಾರದು.

ಕಾಜಲ್ : ಹಲವರಿಗೆ ಕಾಜಲ್ ಇಲ್ಲದೆ ಮೇಕಪ್ ಪೂರ್ಣವಾಗೋದಿಲ್ಲ. ಇದು ಮಹಿಳೆಯರ ಪ್ರಮುಖ ಮೇಕಪ್ ಗಳಲ್ಲಿ ಒಂದಾಗಿದೆ. ಕಾಜಲ್ ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ವಿವಾಹಿತ ಮಹಿಳೆಯರು ತಮ್ಮ ಮಸ್ಕರಾವನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎನ್ನಲಾಗುತ್ತದೆ. ನೀವೇನಾದರೂ ಹಂಚಿಕೊಂಡರೆ ನಿಮ್ಮ ಮೇಲೆ ಗಂಡನ ಪ್ರೀತಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಬಿಂದಿ : ಬಿಂದಿಯನ್ನು ತಿಲಕ, ಹಣೆಬೊಟ್ಟು ಎಂದೂ ಕೂಡ ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರು ತನ್ನ ಬಿಂದಿಯನ್ನು ಬೇರೆ ಹೆಣ್ಣಿನ ಜೊತೆಗೆ ಹಂಚಿಕೊಳ್ಳಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದು ಪತಿಯೊಂದಿಗೆ ಪ್ರತ್ಯೇಕತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ, ತನಗೆ ತಂದಿಟ್ಟುಕೊಂಡ ಬಿಂದಿಯನ್ನು ಬೇರೆ ಮಹಿಳೆಯರೊಂದಿಗೆ ಹಂಚಿಕೊಳ್ಳಬಾರದು.

ಬಳೆಗಳು : ಮಹಿಳೆಯರು ತಮ್ಮ ಶೃಂಗಾರ ಮತ್ತು ಅಲಂಕಾರಿಕ ವಸ್ತುವಾಗಿ ಬಳೆಗಳನ್ನು ಧರಿಸುತ್ತಾರೆ. ವಿವಾಹಿತ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುವುದು ಅವರ ವೈವಾಹಿಕತೆಯ ಪ್ರತಿಬಿಂಬವಾಗಿದೆ. ಸಿಂಧೂರದಂತೆ ವಿವಾಹಿತ ಮಹಿಳೆಯರಿಗೆ ಬಳೆ ಕೂಡ ತುಂಬಾ ಮುಖ್ಯವಾಗಿದೆ. ಹಾಗೇ ನಿಮ್ಮ ಕೈಯಲ್ಲಿ ಧರಿಸಿರುವ ಬಳೆಗಳನ್ನು ಇತರ ಮಹಿಳೆಯರಿಗೆ ನೀಡಬಾರದು. ಯಾಕಂದ್ರೆ ಇದು ನಿಮ್ಮ ಅದೃಷ್ಟವನ್ನು ದುರ್ಬಲಗೊಳಿಸುತ್ತದೆ. ಒಂದು ವೇಳೆ ಬಳೆ ಕೊಡುವುದಾದರೆ ಹೊಸ ಬಳೆಗಳನ್ನು ಕೊಡಬಹುದು. ಅಲ್ಲದೆ, ನಿಮ್ಮ ಕಾಲಿನ ಗೆಜ್ಜೆಯನ್ನು ಕೂಡಾ ಇತರ ಮಹಿಳೆಯರಿಗೆ ನೀಡಬಾರದು.

ಮದುವೆಯ ಉಡುಗೆ : ವಿವಾಹಿತರಿಗೆ ಮದುವೆ ದಿನದ ಬಟ್ಟೆಗಳು ತುಂಬಾ ವಿಶೇಷವಾಗಿರುತ್ತದೆ. ಹಲವರು ಅದನ್ನು ತುಂಬಾ ಜೋಪಾನ ಕೂಡ ಮಾಡುತ್ತಾರೆ. ಈ ಮದುವೆ ಉಡುಗೆಗಳನ್ನು ವಿವಾಹಿತ ಮಹಿಳೆಯರು ಇತರರಿಗೆ ನೀಡಬಾರದು. ಇದು ನಿಮ್ಮ ಅದೃಷ್ಟವನ್ನು ಹಾಳು ಮಾಡುತ್ತದೆ.

ಮೆಹಂದಿ : ಇದು ನಿಮ್ಮ ಗಂಡನ ದೀರ್ಘಾಯುಷ್ಯದ ಸೂಚಕವಾಗಿದೆ. ಮೆಹಂದಿ ಹೆಚ್ಚು ಕೆಂಪಾಗಿದ್ದರೆ, ಆಕೆಯನ್ನು ಗಂಡ ತುಂಬಾ ಪ್ರೀತಿಸುತ್ತಾನೆ ಎಂಬ ಮಾತು ಇದೆ. ಹಾಗಿರುವಾಗ ವಿವಾಹಿತ ಮಹಿಳೆಯರು ಮೆಹಂದಿಯನ್ನು ಇತರರೊಂದಿಗೆ ಹಂಚಿಕೊಂಡರೆ ಗಂಡನ ಪ್ರೀತಿಯೂ ಹಂಚಿಹೋಗುತ್ತದೆ. ಹಾಗಾಗಿ ನಿಮ್ಮ ಕೈಗೆ ಹಚ್ಚಿ, ಉಳಿದ ಮೆಹಂದಿಯನ್ನು ಇನ್ನೊಬ್ಬ ಮಹಿಳೆಗೆ ನೀಡಬಾರದು ಎಂದು ಹೇಳಲಾಗುತ್ತದೆ.

Leave A Reply

Your email address will not be published.