ಮಹಿಳೆಯರೇ ರೈಲ್ವೇ ಇಲಾಖೆ ನೀಡಿದೆ ನಿಮಗೊಂದು ಗುಡ್‌ನ್ಯೂಸ್
ಮಹಿಳೆಯರೇ ನಿಮಗೊಂದು ಗುಡ್‌ನ್ಯೂಸ್. ಅದರಲ್ಲೂ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗಂತೂ ಸೂಪರ್ ಗುಡ್‌ನ್ಯೂಸ್. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಿಗೆ, ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಹೊಸ ಮಾರ್ಗಸೂಚಿಯಿಂದ ನಿಜಕ್ಕೂ ಮಹಿಳೆಯರಿಗೆ ಅನೇಕ ಲಾಭವಿದೆ.
ಮಹಿಳಾ ಬೋಗಿಗಳ ಮೇಲೆ ತೀವ್ರ ನಿಗಾ ಇರಿಸಲು ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದರೊಂದಿಗೆ ಇತರ ಬೋಗಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಸಂಪೂರ್ಣ ಗಮನ ಹರಿಸಲಾಗುವುದು ಎನ್ನಲಾಗಿದೆ. ಶಂಕಿತರ ಮೇಲೆ ನಿಗಾ ಇಡುವುದು ಮತ್ತು ಇದರೊಂದಿಗೆ ಆಗಾಗ್ಗೆ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡುವುದು ಕೂಡ ಇವುಗಳಲ್ಲಿ ಶಾಮೀಲಾಗಿವೆ.
ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ರೈಲ್ವೆ ಇಲಾಖೆ ಕಾಲಕಾಲಕ್ಕೆ ಹೊಸ ಹೊಸ ನಿಯಮಗಳನ್ನು ರೂಪಿಸುತ್ತದೆ. ಭಾರತೀಯ ರೈಲ್ವೇ ಕಳೆದ ವರ್ಷದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಘಟನೆಗಳ ಡೇಟಾಬೇಸ್ ರಚಿಸಲು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.
ಯಾರ್ಡ್‌ಗಳು ಅಥವಾ ನಿಲ್ದಾಣಗಳ ಹೊಂಡಗಳು ಅಥವಾ ಪಕ್ಕದ ರೈಲ್ವೆ ಪ್ರದೇಶವನ್ನು ಅನಗತ್ಯ ಕಸದಿಂದ ಮುಕ್ತಗೊಳಿಸಬೇಕು, ಇವು ಆಂಟಿ ಸೋಸಿಯಲ್ ಎಲಿಮೆಂಟ್ಸ್ ಗಳಿಗೆ ರಕ್ಷಣೆ ನೀಡುತ್ತವೆ. ಇದಲ್ಲದೇ ಕಂಟ್ರೋಲ್ ರೂಂನಲ್ಲಿ ಸಿಸಿಟಿವಿ ಫೀಡಿಂಗ್ ಮೇಲೆ ಸದಾ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಉದ್ಯೋಗಿ, ಗುರುತಿನ ಚೀಟಿ ಇಲ್ಲದೆ ರೈಲುಗಳು ಮತ್ತು ರೈಲ್ವೆ ಆವರಣಗಳನ್ನು ಪ್ರವೇಶಿಸಲು ಅನುಮತಿಸಬಾರದು. ಉಚಿತ ವೈಫೈ ಇಂಟರ್‌ನೆಟ್ ಸೇವೆಗಳ ಮೂಲಕ ಪೋರ್ನ್ ನೋಡುವವರ ಮೇಲೆ ತೀವ್ರ ನಿಗಾ ಇರಿಸುವಂತೆ ಆದೇಶ ನೀಡಲಾಗಿದೆ.