ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ | ಜನವರಿಯಿಂದ ರೇಷನ್ ಜೊತೆಗೆ ಸಿಗಲಿದೆ 1000 ರೂಪಾಯಿ!
ಪಡಿತರ ಚೀಟಿದಾರರಿಗೆ ಈವರೆಗೆ ಅಕ್ಕಿ, ಸಕ್ಕರೆ, ಹೀಗೆ ಬಡತನ ರೇಖೆಕ್ಕಿಂತ ಕಡಿಮೆ ಇರುವವರಿಗೆ ನೀಡಲಾಗುತ್ತಿತ್ತು. ಆದ್ರೆ, ಇನ್ಮುಂದೆ ಪಡಿತರ ಚೀಟಿ ಇದ್ದರೆ ಸರ್ಕಾರದಿಂದ 1000 ರೂ. ರೂಪಾಯಿ ಕೂಡ ನೀಡಲಾಗುತ್ತದೆ.
ಹೌದು. ಇಂತಹದೊಂದು ನಿರ್ಧಾರವನ್ನು ತಮಿಳುನಾಡು ಸರ್ಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದು, ಸರ್ಕಾರದ ಹೇಳಿಕೆ ಪ್ರಕಾರ, 1000 ರೂಪಾಯಿ ನೀಡುವುದರ ಜೊತೆಗೆ, ಫಲಾನುಭವಿಗಳಿಗೆ ಒಂದು ಕೆಜಿ ಅಕ್ಕಿ ಮತ್ತು ಒಂದು ಕೆಜಿ ಸಕ್ಕರೆಯನ್ನು ಸಹ ನೀಡಲಾಗುತ್ತದೆ.
ಮುಂದಿನ ತಿಂಗಳು ಪೊಂಗಲ್ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ 1000 ರೂಪಾಯಿ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರ ಪೊಂಗಲ್ ಹಬ್ಬದಂದು ಬಡವರಿಗೆ ಪ್ರತಿ ವರ್ಷ ಒಂದಷ್ಟು ಮೊತ್ತವನ್ನು ನೀಡುತ್ತದೆ. ಇದರೊಂದಿಗೆ ಅಕ್ಕಿ, ಸಕ್ಕರೆ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಜನವರಿ 2 ರಂದು ಸ್ಟಾಲಿನ್ ಪೊಂಗಲ್ ಉಡುಗೊರೆ ಯೋಜನೆಗೆ ಚಾಲನೆ ನೀಡಲಿದ್ದು, ಜನವರಿ 15 ರಂದು ಹಬ್ಬ ಆಚರಿಸಲಾಗುವುದು. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 2.19 ಕೋಟಿ ಕಾರ್ಡ್‌ದಾರರು ಪ್ರಯೋಜನ ಪಡೆಯಲಿದ್ದಾರೆ. ಬೊಕ್ಕಸಕ್ಕೆ ಸುಮಾರು 2356.67 ಕೋಟಿ ರೂ. ಹೊರೆ ಬೀಳಲಿದೆ.