ಹುಂಜದ ಗುಣಗಳಲ್ಲಿ ಅಡಗಿರುವ ಈ ನಾಲ್ಕು ನೀತಿಗಳನ್ನು ಅನುಸರಿಸಿದರೆ ನಿಮಗೆ ಅದೃಷ್ಟ ಖಂಡಿತ ಒಲಿಯುತ್ತೆ
ಚಾಣಕ್ಯನ ನೀತಿಗಳು ಮಕ್ಕಳು, ಹಿರಿಯರು, ಯುವಕರು ಮತ್ತು ಮಹಿಳೆಯರಿಗೆ ತನ್ನ ಮಾರ್ಗದರ್ಶನವನ್ನು ನೀಡುತ್ತಿವೆ. ಯಾವಾಗಲೂ ಧನಾತ್ಮಕವಾಗಿ ಆಲೋಚಿಸಿದರೆ ಉತ್ತಮ ಎಂದು ಚಾಣಕ್ಯನ ನೀತಿ. ಹಾಗಾಗಿ ಯಾರ ಆಲೋಚನೆಗಳು ಧನಾತ್ಮಕವಾಗಿರುತ್ತವೆ, ಅವರು ಎಂತಹ ಕಷ್ಟಕರವಾದ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಪಡೆಯುತ್ತಾರೆ. ಚಾಣಕ್ಯನ ಪ್ರಕಾರ ಯಶಸ್ಸನ್ನು ಪಡೆಯಲು ಹುಂಜದ ನಾಲ್ಕು ಪ್ರಮುಖ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮ. ಯಶಸ್ಸು ನಿಮ್ಮ ಬೆನ್ನಹಿಂದೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅದ್ಯಾವುದೆಂದು ಈ ಕೆಳಗೆ ನೀಡಲಾಗಿದೆ. ಬನ್ನಿ ತಿಳಿಯೋಣ.
ಸೂರ್ಯೋದಯಕ್ಕೆ ಮೊದಲು ಏಳುವುದು : ಬ್ರಹ್ಮ ಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಗುರಿ ತಲುಪಲು ಸಹಾಯ ಮಾಡುತ್ತದೆ. ಮುಂಜಾನೆ ಬೇಗ ಏಳುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ. ಇದು ಮನುಷ್ಯ ದಿನವಿಡೀ ಚೈತನ್ಯದಿಂದ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ.
ನೀವು ಕೂಡ ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ, ಯಾವಾಗಲೂ ಜಾಗರೂಕರಾಗಿರಿ ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ ಎಂದು ಚಾಣಕ್ಯ ಹೇಳುತ್ತಾರೆ. ಅವುಗಳನ್ನು ಜಯಿಸಲು, ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೃಢವಾಗಿ ಎದುರಿಸಿ. ಹುಂಜ ಸದಾ ಎಚ್ಚರದಿಂದಿರುತ್ತದೆ ಮತ್ತು ಶತ್ರುವನ್ನು ಗ್ರಹಿಸಿದಾಗ ಯುದ್ಧಕ್ಕೆ ಸಿದ್ಧವಾಗುತ್ತದೆ ಮತ್ತು ನಂತರ ಯುದ್ಧದಲ್ಲಿ ಹಿಂದೆ ಸರಿಯುವುದಿಲ್ಲ, ಇದೆ ರೀತಿ ಯಾವುದೇ ರೀತಿಯ ತೊಂದರೆಗೆ ಹೆದರಬೇಡಿ. ಬಿಕ್ಕಟ್ಟು ಬಂದಾಗ ಅದನ್ನು ದೃಢವಾಗಿ ಎದುರಿಸುವ ವ್ಯಕ್ತಿ ಯಶಸ್ವಿಯಾಗುತ್ತಾನೆ.
ಜೀವನದಲ್ಲಿ ಕಷ್ಟಪಟ್ಟು ಸಿಗುವ ಹಣ್ಣಿನ ರುಚಿ ಅದೃಷ್ಟದಿಂದ ಸಿಗುವ ಹಣ್ಣಿನ ರುಚಿಗಿಂತ ಸಿಹಿಯಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ. ಪ್ರಾಮಾಣಿಕತೆ ಮತ್ತು ಶ್ರಮದಿಂದ ಸಿಗುವ ಹಣದಿಂದ ತೃಪ್ತರಾಗಬೇಕು. ಹುಂಜಗಳು ಹೊಟ್ಟೆ ತುಂಬಿಸಿಕೊಳ್ಳಲು ಯಾವಾಗಲು ಕಷ್ಟಪಡುತ್ತವೆ. ಹಾಗಾಗಿ ಪರಿಶ್ರಮ ಪಟ್ಟು ಸಿಗುವ ದುಡ್ಡಿನಿಂದ ಉಣ್ಣೋ ಎರಡೊತ್ತಿನ ಊಟ ನಿಜಕ್ಕೂ ನೆಮ್ಮದಿ ಕೊಡುತ್ತದೆ.
ದುರಾಸೆಯನ್ನು ಬಿಡುವುದು. ತಾನು ದುಡಿದ ಹಣ, ತನ್ನ ಪಾಲಿಗೆ ಬಂದ ಹಣದಿಂದ ಕುಟುಂಬ ಮತ್ತು ಬಂಧುಗಳಿಗೆ ಸಂತೋಷದಿಂದ ನೀಡುತ್ತಾನೋ ಅವರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ. ಇದು ಚಾಣಕ್ಯನ ನೀತಿ ಜೊತೆ ಹುಂಜದ ನಾಲ್ಕನೇ ಗುಣ. ಹೌದು, ಏಕೆಂದರೆ, ಹುಂಜ ಯಾವಾಗಲೂ ತನ್ನ ಆಹಾರವನ್ನು ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಹಂಚಿಕೊಂಡು ತಿನ್ನುತ್ತದೆ. ಹಾಗಾಗಿ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಬದುಕುವುದು ಉತ್ತಮ ಎಂದು ಚಾಣಕ್ಯ ಹೇಳುತ್ತಾನೆ.