BSNL ನ ಈ ರೀಚಾರ್ಜ್ ಪ್ಲ್ಯಾನ್ ಹಾಕಿಸಿಕೊಂಡರೆ, ಅಬ್ಬಾ ಇಷ್ಟೊಂದು ಡೇಟಾ ಫ್ರೀ ಫ್ರೀ…

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡುತ್ತಿದ್ದು, ಅದರ ಜೊತೆಗೆ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ನೀಡುತ್ತಿರುವುದು ತಿಳಿದಿರುವ ಸಂಗತಿಯಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಲು ಮುಂದಾಗಿದೆ.

ಹೇಳಿ ಕೇಳಿ ಇದು ಡಿಜಿಟಲ್ ಯುಗ… ಮೊಬೈಲ್ ಎಂಬ ಮಾಯಾವಿಯ ಅನ್ವೇಷಣೆಯ ಬಳಿಕ ಎಲ್ಲೆಡೆ ಬಳಕೆಯ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಿ, ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುವುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ.

ಈ ನಡುವೆ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಹಾಗಾಗಿ, ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಸ ಯೋಜನೆಗಳನ್ನು ರೂಪಿಸಿದ್ದು ಕೈಗೆ ಎಟಕುವ ದರದಲ್ಲಿ ಆಫರ್ ನೀಡಲು ಮುಂದಾಗಿದೆ.

ನೀವು ಬಿಎಸ್​ಎನ್​ಎಲ್​ ಸಿಮ್ ಕಾರ್ಡ್ ಬಳಸುತ್ತಿದ್ದರೆ , ಈ ಮಾಹಿತಿ ನೀವು ಗಮನಿಸಲೇಬೇಕು. ನಿಮಗಾಗಿ ಉತ್ತಮ ಯೋಜನೆ ರೂಪಿಸಲಾಗಿದ್ದು, ದಿನಕ್ಕೆ ರೂ.5 ದರದಲ್ಲಿ ಇಡೀ ವರ್ಷಕ್ಕೆ ಅನಿಯಮಿತ ಕರೆಗಳು, ಹೆಚ್ಚಿನ ಡೇಟಾ ಮತ್ತು ಎಸ್​ಎಮ್​ಎಸ್​ ನಂತಹ ಆಫರ್ ನಂತೆ ಈ ಎಲ್ಲ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದು.

ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತನ್ನ ಗ್ರಾಹಕರಿಗಾಗಿ ಹಲವಾರು ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡುತ್ತಿದ್ದು, ಗ್ರಾಹಕರ ಮನ ಸೆಳೆಯಲು ಹರಸಾಹಸ ಪಡುತ್ತಿದೆ. ಇದೀಗ ಬಿಎಸ್​ಎನ್​ಎಲ್​ ವಾರ್ಷಿಕ ರೀಚಾರ್ಜ್ ಪ್ಲಾನ್​ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಒಂದೇ ರೀಚಾರ್ಜ್​ನಲ್ಲಿ ಗ್ರಾಹಕರು 600ಜಿಬಿ ವರೆಗೆ ಡೇಟಾ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಬಿಎಸ್​ಎನ್​ಎಲ್​ ಇದೀಗ ಹೊಸ ರೀಚಾರ್ಜ್​ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಬಿಎಸ್​ಎನ್​ಎಲ್ ರೂ. 1999 ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಬಿಎಸ್​ಎನ್​ಎಲ್ ನ ಈ ಯೋಜನೆಯಲ್ಲಿ ದೈನಂದಿನ ಡೇಟಾ ಮಿತಿ ಇರದು. 365 ದಿನಗಳವರೆಗೆ 600 GB ಡೇಟಾವನ್ನು ಕಂಪನಿ ನೀಡಲಿದ್ದು, ನೀವು ದಿನಕ್ಕೆ 100 ಎಸ್​ಎಮ್​ಎಸ್​ ಅನ್ನು ಉಚಿತವಾಗಿ ಪಡೆಯಬಹುದು. ಇದಲ್ಲದೆ ಅನಿಯಮಿತ ಕರೆ ಸೌಲಭ್ಯ ಕೂಡ ದೊರೆಯಲಿದೆ.

ಬಿಎಸ್​ಎನ್​ಎಲ್ ರೂ. 1999 ಯೋಜನೆಯ ವ್ಯಾಲಿಡಿಟಿ ಒಟ್ಟು 365 ದಿನಗಳು ಆಗಿದ್ದು, ಈ ಯೋಜನೆಯಿಂದ ಗ್ರಾಹಕರು 600ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ Eros Now ಚಂದಾದಾರಿಕೆ ಯೋಜನೆ ಕೂಡ ಈ ಯೋಜನೆಯ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ.

ಪ್ರತಿ ತಿಂಗಳು ರೀಚಾರ್ಜ್ ಮಾಡಲು ಬಯಸದವರು ಒಮ್ಮೆಯೇ ವರ್ಷದ ರೀಚಾರ್ಜ್ ಮಾಡಬಹುದು. ಇದು ವಾರ್ಷಿಕ ರೀಚಾರ್ಜ್ ಯೋಜನೆಯಾಗಿದ್ದು, ಗ್ರಾಹಕರು ಒಮ್ಮೆ ರೀಚಾರ್ಜ್ ಮಾಡಿದರೆ, ಇಡೀ ವರ್ಷಕ್ಕೆ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

ಇತ್ತೀಚೆಗೆ ಬಿಎಸ್ಎನ್ಎಲ್ ಮಾತ್ರವಲ್ಲದೆ ಇತರ ಕಂಪನಿಗಳು ಕೂಡ ವಾರ್ಷಿಕ ವ್ಯಾಲಿಡಿಟಿಯನ್ನು ಹೊಂದಿರುವ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ. ಈ ಯೋಜನೆಯಲ್ಲಿ ಮತ್ತೊಂದು ವಿಶೇಷ ಆಫರ್​ ಕೂಡ ಲಭ್ಯವಿದೆ.

ವಿಐ, Eros Now ಎಂಟರ್​​ಟೈನ್​ಮೆಂಟ್​ ಚಂದಾದಾರಿಕೆ ಕೂಡ ಉಚಿತವಾಗಿ ಲಭ್ಯವಿದ್ದು, ಆದರೆ ಈ ಪ್ರಯೋಜನ ಕೇವಲ 30 ದಿನಗಳವರೆಗೆ ಮಾತ್ರ ದೊರೆಯಲಿದೆ. ಈ ಯೋಜನೆಯಲ್ಲಿ 600 GB ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್​ ವೇಗವು 40 kbps ಗೆ ಕಡಿಮೆಯಾಗಲಿದೆ. ಆದರೆ ನಂತರ ನೀವು ಬಿಎಸ್​ಎನ್​ಎಲ್​ ಡೇಟಾ ವೋಚರ್ ಮೂಲಕ ರೀಚಾರ್ಜ್ ಮಾಡಬಹುದಾಗಿದ್ದು ಈ ಮೂಲಕ ಮತ್ತೆ ಡೇಟಾ ಪ್ರಯೋಜನವನ್ನು ಪಡೆಯಬಹುದು.

Leave A Reply

Your email address will not be published.