viral video : ತನ್ನ ಮದುವೆ ದಿನ ಫುಲ್ ಜೋಶ್‌ನಲ್ಲಿ ಚೆಂಡೆ ಬಾರಿಸುತ್ತಾ ಎಂಟ್ರಿ ಕೊಟ್ಟ ಮದುಮಗಳು | ಅಬ್ಬಾ ಏನು ಟ್ಯಾಲೆಂಟ್ರೀ…ವೀಡಿಯೋ ವೈರಲ್
ಮದುವೆ ಸಮಾರಂಭದಲ್ಲಿ ವಧು ವರರನ್ನು ವಿಶೇಷವಾಗಿ ಮಂಟಪಕ್ಕೆ ಕರೆದೊಯ್ಯುವುದು, ಮಂಟಪದಲ್ಲಿ ಬೇಕು ಬೇಕಾದಂತೆ ಕುಣಿಯುವುದು, ವಧು ವರನಿಗೆ ಹಾಸ್ಯ ಮಯ ಉಡುಗೊರೆ ನೀಡುವುದು ಮುಂತಾದ ರೀತಿಯ ಮದುವೆಯ ಅನೇಕ ರೀತಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ ಈ ರೀತಿಯ ವೀಡಿಯೊವನ್ನು ನೀವು ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಈ ವೀಡಿಯೋದಲ್ಲಿ ಮದುಮಗಳು ಖುಷಿ ಖುಷಿಯಿಂದ ಭರ್ಜರಿಯಾಗಿ ಚಂಡೆ ಬಾರಿಸಿದ್ದಾಳೆ.
ಹೌದು, ಕೇರಳದ ವಧು ತನ್ನ ಮದುವೆಯ ದಿನದಂದು ವೇದಿಕೆಗೆ ಏರುವ ಮೊದಲು ಶಿಂಕಾರಿ ಮೇಳಂ ಕಲಾವಿದರೊಂದಿಗೆ ಚೆಂಡೆ ಬಾರಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಕೇರಳದ ಸಾಂಪ್ರದಾಯಿಕ ಆರ್ಕೆಸ್ಟ್ರಾ ಎಂದೇ ಕರೆಯಲ್ಪಡುವ ಚೆಂಡ ಮೇಳವನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ಅದ್ಧೂರಿ ವಿವಾಹಗಳಲ್ಲಿ ಕಾಣಬಹುದು. ಆದರೆ ತನ್ನ ಮದುವೆಯಲ್ಲಿ ಸ್ವತಃ ಚೆಂಡೆ ನುಡಿಸುವ ಮೂಲಕ ವಧು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಮದುವೆ ದಿನ ಫುಲ್ ಜೋಶ್‍ನಲ್ಲಿ ಕಂಡುಬಂದ ವಧು ತನ್ನ ಕೊರಳಿಗೆ ಚೆಂಡೆವಾದ್ಯವನ್ನು ಹಾಕಿಕೊಂಡು ಖುಷಿ ಖುಷಿಯಿಂದಲೇ ಭರ್ಜರಿಯಾಗಿ ಚೆಂಡೆ ಬಾರಿಸಿದ್ದಾಳೆ. ಕೆಂಪು ಸೀರೆ ಧರಿಸಿರುವ ವಧು ಇತರ ಕಲಾವಿದರ ಮಧ್ಯದಲ್ಲಿ ನಿಂತು ಚೆಂಡೆ ನುಡಿಸಿದ್ದಾಳೆ. ಮದುವೆಗೆ ಬಂದಿದ್ದ ಸಂಬಂಧಿಕರು ಮತ್ತು ಸ್ನೇಹಿತರು ಈ ದೃಶ್ಯವನ್ನು ಹರ್ಷಚಿತ್ತದಿಂದ ನೋಡುತ್ತಾ ವಧುವಿನ ಉತ್ಸಾಹಕ್ಕೆ ತಲೆದೂಗಿದ್ದಾರೆ. ಈ ವೇಳೆ ವಧುವಿಗೆ ಆಕೆಯ ತಂದೆ ಮತ್ತು ವರ ಸಾಥ್ ನೀಡಿದ್ದಾರೆ.
ಚೆಂಡೆ ನುಡಿಸಿದ ವಧುವಿನ ಹೆಸರು ಶಿಲ್ಪಾ ಪ್ರಸ್ತುತ ಈಕೆ ತರಬೇತಿ ಪಡೆದ ಚೆಂಡೆ ಕಲಾವಿದೆಯಂತೆ. ಕಣ್ಣೂರಿನ ವರ ದೇವಾನಂದ್ ಜೊತೆಗೆ ಶಿಲ್ಪಾರ ಮದುವೆ ತ್ರಿಶೂರಿನ ಗುರುವಾಯೂರು ದೇವಸ್ಥಾನದಲ್ಲಿ ನಡೆಯಿತು. ಶಿಲ್ಪಾ ಳೆದ 8 ವರ್ಷಗಳಿಂದ ಪಾಂಡಿ ಮೇಳಂ, ಪಂಚರಿ ಮೇಳಂ ಮತ್ತು ಶಿಂಕಾರಿ ಮೇಳಂನಲ್ಲಿ ತರಬೇತಿ ಪಡೆದಿದ್ದಾರೆ. ಇದಲ್ಲದೆ ಅವರು ಯುಎಇಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಸಹ ನೀಡಿದ್ದಾರಂತೆ.
ಸದ್ಯ ವಧು ಚೆಂಡೆ ಬಾರಿಸುವ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಆಕೆಯ ಉತ್ಸಾಹ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತು ವಧುವಿಗೆ ಶುಭ ಹಾರೈಸಿದ್ದಾರೆ. ಅಂತೂ ಮದುವೆಯಲ್ಲಿ ಚೆಂಡೆ ಬಾರಿಸುವ ಜೊತೆಗೆ ವಧು ಮಿಂಚಿದ್ದಾಳೆ.
Muchas gracias. ?Como puedo iniciar sesion?