ಬೆಳ್ಳಂಬೆಳಗ್ಗೆ ಹಾಲು ಕುಡಿಯಿರಿ, ಈ ಎಲ್ಲಾ ಸಮಸ್ಯೆಗಳಿಂದ ದೂರ ಇರಿ
ಆರೋಗ್ಯ ಎನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಹಾಗಾಗಿ ನೀವು ಉತ್ತಮ ಆರೋಗ್ಯ ದೇಹವನ್ನು ಬಯಸಿದರೆ ನಿಮಗೆ ಹಾಲು ಸಹಾಯ ಮಾಡುತ್ತದೆ. ಹೌದು ಪ್ರೋಟೀನ್ ಭರಿತವಾದ ಹಾಲು ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ.
ಇತ್ತೀಚಿಗೆ ಮಧುಮೇಹ ಸಕ್ಕರೆ ಕಾಯಿಲೆ ಅನ್ನೋದು ಹೆಚ್ಚಿನವರಿಗೆ ಕಾಡುತ್ತಿದೆ ಆದರೆ ಸಂಶೋಧಕರು ಹೇಳುವಂತೆ ಮುಕ್ಕಾಲು ಭಾಗ ಕಾಯಿಲೆ ಆವರಿಸಿಕೊಳ್ಳುವುದು ಜನರ ಕೆಟ್ಟ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಕಾರಣದಿಂದ ಎನ್ನುತ್ತಾರೆ.
ಆದರೆ ಇದಕ್ಕೆಲ್ಲ ಪರಿಹಾರ ಏನೆಂದರೆ ಪ್ರೋಟೀನ್ ಭರಿತವಾದ ಹಾಲು. ಹೌದು ಹಾಲು ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಹ ಉತ್ತಮವಾಗಿ ನಿರ್ವಹಣೆ ಮಾಡುತ್ತದೆ. ಹಾಲನ್ನು ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಕುಡಿದರೆ ಲಾಭ ಜಾಸ್ತಿ ಎಂದು ವೈದ್ಯರು ಹೇಳುತ್ತಾರೆ.
ವೈದ್ಯರು ಪ್ರಕಾರ ಬೆಳಗ್ಗೆ ತಿಂಡಿ ತಿನ್ನುವ ಸಂದರ್ಭದಲ್ಲಿ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಷ್ಟಾಗಿ ಏರಿಕೆ ಕಾಣುವುದಿಲ್ಲ ಎಂಬುದು ವೈದ್ಯರ ಹೇಳಿಕೆ . ಪ್ರತಿದಿನದ ಅಗತ್ಯತೆಯಂತೆ ಪ್ರೋಟೀನ್ ಕೂಡ ನಮ್ಮ ದೇಹಕ್ಕೆ ಸಿಗುತ್ತದೆ. ಜೊತೆಗೆ ಹೊಟ್ಟೆ ಹಸಿವು ಕೂಡ ನಿಯಂತ್ರಣ ವಾಗುತ್ತದೆ.
ಆರೋಗ್ಯ ಸಂಸ್ಥೆಯ ಪ್ರಕಾರ ಮೆಟಬೋಲಿಕ್ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಾಗುತ್ತಿದೆ. ಇದು ಟೈಪ್ 2 ಮಧುಮೇಹ ಮತ್ತು ಬೊಜ್ಜು ಸಮಸ್ಯೆಗೆ ಕಾರಣವಾಗಿದೆ. ಮುಖ್ಯವಾಗಿ ಬೊಜ್ಜು ಮತ್ತು ಮಧುಮೇಹವನ್ನು ನಿರ್ವಹಿಸಿಕೊಂಡರೆ ಆರೋಗ್ಯಕರವಾದ ಜೀವನ ನಡೆಸಬಹುದು ಎಂದು ಅಮೆರಿಕಾದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯೊಂದು ಅಭಿಪ್ರಾಯ ಪಟ್ಟಿದೆ.
ಸಂಶೋಧನೆ ಹೇಳುವ ಪ್ರಕಾರ ಬೆಳಗಿನ ಸಮಯದಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕಾರ್ಬೋ ಹೈಡ್ರೇಟ್ ಸೇವನೆ ಮಾಡಿ ಮಧ್ಯಾಹ್ನದ ಸಮಯದಲ್ಲಿ ಹಗುರ ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಸುಲಭವಾಗಿ ಕಂಟ್ರೋಲ್ ಮಾಡಿಕೊಳ್ಳಬಹುದಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸೇವನೆ ಮಾಡಿದ ನಂತರದಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗುವುದು ಈ ಒಂದು ಲೋಟ ಹಾಲು ಕುಡಿಯುವ ಅಭ್ಯಾಸದಿಂದ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿರುತ್ತದೆ. ಆದ್ದರಿಂದ ದಿನಾ ಒಂದು ಲೋಟ ಹಾಲು ಕುಡಿಯಲು ಮರೆಯದಿರಿ.