Viral Video : ಜುಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡ, ಪ್ರಿನ್ಸಿಪಾಲ್-ಟೀಚರ್
ಶಿಕ್ಷಕರು ಮಕ್ಕಳಿಗೆ ದಾರಿ ದೀಪ ಆಗಬೇಕು. ಮಾರ್ಗದರ್ಶಕರಾಗಿ ಇರಬೇಕು. ಇನ್ನು ಶಿಕ್ಷಕರನ್ನು ನೋಡುತ್ತಾ, ಅವರನ್ನೇ ಪಾಲಿಸುತ್ತಾ ಮಕ್ಕಳು ಬೆಳೆಯುತ್ತಾರೆ. ಇದೀಗ ಅಂತಹ ಶಿಕ್ಷಕರೇ ಮಕ್ಕಳೆದುರು ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ವೀಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಪಕ್ಕದಲ್ಲೇ ನಿಂತಿದ್ದ ಮಕ್ಕಳು ಅಳುತ್ತಾ ಕಾಪಾಡಿ.. ಕಾಪಾಡಿ.. ಎಂದು ಕೂಗುತ್ತಿದ್ದಾರೆ.
ಈ ಗಲಾಟೆ ಯಾವ ಕಾರಣಕ್ಕೆ ನಡೆದಿದೆ, ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ವಿಡಿಯೋದಲ್ಲಿ ಕಂಡುಬರುವಂತೆ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಇವರಿಬ್ಬರ ಗಲಾಟೆ ಕಂಡು ಇತರ ಇಬ್ಬರು ಮಹಿಳೆಯರು ಬಂದು ಅವರನ್ನು ತಡೆಯಲು ಮುಂದಾಗುತ್ತಾರೆ. ಆದರೆ ಒಬ್ಬರಿಗೊಬ್ಬರು ಮತ್ತಷ್ಟು ಜೋರಾಗಿ ಗಲಾಟೆ ಮಾಡಿದ್ದಲ್ಲದೆ, ಒಬ್ಬ ಶಿಕ್ಷಕಿ ಕಾಲಿಂದ ಚಪ್ಪಲಿ ತೆಗೆದುಕೊಂಡು, ಹೊಡೆಯಲು ಪ್ರಾರಂಭಿಸುತ್ತಾಳೆ.
ಸದ್ಯ ಈ ವಿಡಿಯೋ ಕಂಡ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಇದರಿಂದ ನಮ್ಮ ಎಲ್ಲ ಮಕ್ಕಳ ಭವಿಷ್ಯ ಹಾಳಾಗುತ್ತದೆ” ಎಂದು ಗಂಭೀರವಾಗಿ ಹೇಳಿಕೆ ನೀಡಿದ್ದಾರೆ. ಕೆಲವರು ಈ ವೀಡಿಯೋ ನೋಡಿ ಆಕ್ರೋಶ ಗೊಂಡು ಅವರನ್ನು ವೃತ್ತಿಯಿಂದ ಅಮಾನಾತು ಗೊಳಿಸಬೇಕು ಎಂದು ಹೇಳಿದ್ದಾರೆ.
ಕನಿಷ್ಠ ಪಕ್ಷ ತಾವು ಎಲ್ಲಿ ಹೇಗೆ ವರ್ತನೆ ಮಾಡುತ್ತಿದ್ದೇವೆ ಅನ್ನುವ ಅರಿವು ಇಲ್ಲದ ಇಂತಹ ಶಿಕ್ಷಕರ ಜೊತೆ ಮಕ್ಕಳನ್ನು ಬಿಟ್ಟರೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.