Post Office Deposit Scheme : ಇಲ್ಲಿದೆ ನೋಡಿ, ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಯೋಜನೆ | ಊಹಿಸದಷ್ಟು ಬಡ್ಡಿ ದರ ಲಭ್ಯ!

ಮುಂದಿನ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕೀಮ್ಗಳಿವೆ . ಅಂಚೆ ಕಚೇರಿಯ ಯೋಜನೆ ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ. ಜನರಿಗೆ ಪೋಸ್ಟ್​ ಆಫೀಸ್​ ಠೇವಣಿ ಯೋಜನೆಯು ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿರುವ ಕಾರಣ ಈ ಠೇವಣಿ ಹೆಚ್ಚು ಸುರಕ್ಷಿತವಾಗಿದೆ. ಠೇವಣಿ ಇಟ್ಟ ಮೊತ್ತಕ್ಕೆ ಮತ್ತು ಬಡ್ಡಿಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಒಂದು ಹಂತದ ವರೆಗಿನ ಬಡ್ಡಿಯ ಮೊತ್ತಕ್ಕೆ ತೆರಿಗೆ ವಿನಾಯಿತಿಯೂ ಇದೆ ಎಂದು ಮಾಹಿತಿ ನೀಡಲಾಗಿದೆ.

ಹೌದು ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಸ್ಕೀಮ್ ಒಂದು ಸ್ಥಿರ ಠೇವಣಿ ಯೋಜನೆಯಾಗಿದ್ದು, ಬ್ಯಾಂಕ್​ ಎಫ್​ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ. ಜತೆಗೆ ತೆರಿಗೆ ವಿನಾಯಿತಿಯೂ ಪಡೆಯಬಹುದಾಗಿದೆ. ನಿರ್ದಿಷ್ಟ ಸಮಯಕ್ಕೆ ಪೂರ್ವನಿಗದಿತ ಬಡ್ಡಿ ದರಕ್ಕನುಗುಣವಾಗಿ ಠೇವಣಿ ಇಡಲು ಈ ಯೋಜನೆಯಡಿ ಅವಕಾಶವಿದೆ. ಉಳಿತಾಯ ಖಾತೆಯ ಬಡ್ಡಿ ದರಕ್ಕೆ ಹೋಲಿಸಿದರೆ ಅಂಚೆ ಇಲಾಖೆಯ ಈ ಯೋಜನೆ ಹೆಚ್ಚು ಬಡ್ಡಿ ತಂದುಕೊಡುವುದರ ಜತೆಗೆ ಸುರಕ್ಷಿತವೂ ಆಗಿದೆ. ಅದಲ್ಲದೆ ಇದು ಭಾರತ ಸರ್ಕಾರ ಬೆಂಬಲಿತ ಹೂಡಿಕೆ ಯೋಜನೆಯಾಗಿದೆ.

ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಕನಿಷ್ಠ 1 ವರ್ಷ ಹಾಗೂ ಗರಿಷ್ಠ 5 ವರ್ಷಗಳ ವರೆಗೆ ಠೇವಣಿ ಇಡಬಹುದು. 200 ರೂ. ಮತ್ತು ಇದರ ಮಲ್ಟಿಪಲ್​ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಮೀಪದ ಅಂಚೆ ಕಚೇರಿಗೆ ತೆರಳಿ ಅಥವಾ ಆನ್​ಲೈನ್ ಮೂಲಕ ಠೇವಣಿ ತೆರೆಯಬಹುದಾಗಿದೆ. ವೈಯಕ್ತಿಕವಾಗಿ ಮತ್ತು ಜಂಟಿ ಖಾತೆಗಳನ್ನು ತೆರೆಯಲೂ ಅವಕಾಶವಿದೆ. ಬಡ್ಡಿಯನ್ನು ತಿಂಗಳಿಗೊಮ್ಮೆ, ತ್ರೈಮಾಸಿಕ ಅವಧಿಗೊಮ್ಮೆ, ಅರ್ಧ ವಾರ್ಷಿಕ ಹಾಗೂ ಮೆಚ್ಯೂರಿಟಿಗೆ ಪಡೆಯಲು ಅವಕಾಶವಿದೆ. ಬ್ಯಾಂಕ್​ ಎಫ್​​ಡಿಗಿಂತ ಹೆಚ್ಚು ಬಡ್ಡಿ ಈ ಯೋಜನೆಯಲ್ಲಿ ದೊರೆಯುತ್ತದೆ.

ಅದಲ್ಲದೆ ನಿಗದಿತ ಮಿತಿಯ ಒಳಗಿನ ಬಡ್ಡಿಗೆ ತೆರಿಗೆ ಇಲ್ಲ
ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿರುವ ಕಾರಣ ಈ ಠೇವಣಿ ಹೆಚ್ಚು ಸುರಕ್ಷಿತವಾಗಿದೆ. ಠೇವಣಿ ಇಟ್ಟ ಮೊತ್ತಕ್ಕೆ ಮತ್ತು ಬಡ್ಡಿಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಒಂದು ಹಂತದ ವರೆಗಿನ ಬಡ್ಡಿಯ ಮೊತ್ತಕ್ಕೆ ತೆರಿಗೆ ವಿನಾಯಿತಿಯೂ ಇದೆ. ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಠೇವಣಿ ಆರಂಭಿಸುವುದು ಬಹು ಸುಲಭವಾಗಿದೆ. ಸಮೀಪದ ಅಥವಾ ನಮಗೆ ಅನುಕೂಲ ಎನಿಸುವ ಯಾವುದೇ ಅಂಚೆ ಕಚೇರಿಗೆ ತೆರಳಿ ಠೇವಣಿ ಖಾತೆ ತೆರೆಯಬಹುದಾಗಿದೆ. ಮನೆಯಲ್ಲೇ ಇದ್ದುಕೊಂಡು ಆನ್​ಲೈನ್ ಪೋರ್ಟಲ್ ಮೂಲಕ ಖಾತೆ ಆರಂಭಿಸಲೂ ಅವಕಾಶವಿದೆ.

ಬ್ಯಾಂಕ್​​ಗಳ ಎಫ್​ಡಿ ದರ ಸರಾಸರಿ ಶೇಕಡಾ 5.5ರಿಂದ 6.5ರ ವರೆಗೆ ಇದ್ದರೆ ಅಂಚೆ ಇಲಾಖೆ ಟೈಮ್ ಡಿಪಾಸಿಟ್ ಸ್ಕೀಮ್​ ಬಡ್ಡಿ ದರ ಸರಾಸರಿ ಶೇಕಡಾ 5.5ರಿಂದ 6.7ರ ವರಗೆ ಇದೆ. ಮುಖ್ಯವಾದ ಅಂಶವೆಂದರೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಇರುವುದಿಲ್ಲ. 6 ತಿಂಗಳ ನಂತರ ಅವಧಿಪೂರ್ವ ಹಿಂಪಡೆಯುವಿಕೆಗೆ ಅವಕಾಶವಿದೆ.

ಈ ರೀತಿಯಾಗಿ ಪೋಸ್ಟ್ ಆಫೀಸ್ ಮೂಲಕ ನೀವು ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ.

Leave A Reply

Your email address will not be published.