ಎಲ್ಲಾ ರೋಗಕ್ಕೂ ಮದ್ದು ಈ ವಸ್ತು ; ಭಾರತದಲ್ಲಿ ಸಿಗುವ ಈ ವಸ್ತುವಿಗೆ ಚೀನಾದಲ್ಲೂ ಡಿಮ್ಯಾಂಡ್!
ಎಲ್ಲಾ ಕಾಯಿಲೆಗೂ ಒಂದೇ ಮದ್ದು ಇದ್ದರೆ ಅದೆಷ್ಟು ಚಂದ ಇತ್ತು ಅನ್ನುವುದು ಸಾಮಾನ್ಯವಾದ ಮನುಷ್ಯರ ಮಾತು. ಯಾಕಂದ್ರೆ, ಪ್ರತಿಯೊಂದು ಕಾಯಿಲೆಗೂ ಔಷಧಿ ಮಾಡಿ ಮಾಡಿ ಸುಸ್ತಾಗಿ ಹೋಗಿರುತ್ತಾರೆ. ಆದ್ರೆ, ಎಲ್ಲಾ ಕಾಯಿಲೆಗೂ ಒಂದೇ ಮದ್ದುವಿನ ಮೂಲಕ ಗುಣ ಮಾಡುವ ಶಕ್ತಿ ಇದೆ ಎಂಬುದು ನಿಮಗೆ ಗೊತ್ತಿದೆಯೇ? ಅದರಲ್ಲೂ ಆ ಔಷಧಿ ಭಾರತದಲ್ಲೇ ಇದೆ ಎಂಬುದು ಅರಿವಿದೆಯೇ?
ಹೌದು. ಕಾರ್ಡಿಸೆಪ್ಸ್ ಎಂಬ ಈ ಬೂಸ್ಟ್ ಯೇ ಸರ್ವರೋಗಕ್ಕೂ ಮದ್ದು. ಅದರಲ್ಲೂ ಕಾರ್ಡಿಸೆಪ್ಸ್ ಗಾಗಿಯೇ ಚೀನಾದವರು ಹಲವು ಸಲ ಭಾರತದೊಳಕ್ಕೆ ನುಗ್ಗಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಕಾರ್ಡಿಸೆಪ್ಸ್ ಎಂಬ ಈ ಬೂಸ್ಟ್ ಚಿನ್ನಕ್ಕಿಂತಲೂ ಬೆಲೆಬಾಳುವುದಾಗಿದ್ದು, ಭಾರತದ ಹಿಮಾಲಯ ಮತ್ತು ನೈಋತ್ಯ ಚೀನಾದ ಖಿಂಘಾಯ್-ಟಿಬೇಟಿಯನ್ ಪ್ರಾಂತ್ಯದಲ್ಲಿ ಸಿಗುತ್ತದೆ.
ಈ ಅಂಶವನ್ನು ಇಂಡೋ-ಫೆಸಿಪಿಕ್ ಸೆಂಟರ್ ಫಾರ್ ಸ್ಟ್ರ್ಯಾಟೆಜಿಕ್ ಕಮ್ಯುನಿಕೇಷನ್ಸ್ (ಐಪಿಸಿಎಸ್ಸಿ) ವರದಿ ಬಯಲಾಗಿಸಿದೆ. ಕಾರ್ಡಿಸೆಪ್ಸ್ ಕೀಟಗಳ ಲಾರ್ವಾದ ಮೇಲೆ ಬೆಳೆಯುತ್ತದೆ. ಕೀಟದ ದೇಹಕ್ಕೆ ಕಾರ್ಡಿಸೆಪ್ಸ್ ತಗುಲಿದ ಬಳಿಕ ಅಂಥ ಕೀಟವನ್ನು ತೆಗೆದುಕೊಂಡು ಅದನ್ನು ಸಾಯಿಸಿ ಈ ಬೂಸ್ಟ್ ಪಡೆಯಲಾಗುತ್ತದೆ. ಹಿಮಾಲಯದ ದೈತ್ಯಪತಂಗಗಳ ಮೇಲೆ ಕಾರ್ಡಿಸೆಪ್ಸ್ ಸೈನೆನ್ಸಿಸ್ ಕಾಣಸಿಗುತ್ತಿದ್ದು, ಅವುಗಳ ಮೂಲಕ ಕಾರ್ಡಿಸೆಪ್ಸ್ ಪಡೆಯಲಾಗುತ್ತದೆ ಎಂಬೆಲ್ಲ ವಿವರಗಳು ಈ ವರದಿಯಲ್ಲಿವೆ.
ಹತ್ತು ಗ್ರಾಮ್ ಚಿನ್ನದ ಬೆಲೆ 500 ಅಮೆರಿಕನ್ ಡಾಲರ್ ಆಗಿದ್ದು, ಅದೇ ಹತ್ತು ಗ್ರಾಮ್ಗಳಷ್ಟು ಕಾರ್ಡಿಸೆಪ್ಸ್ ಚಿಲ್ಲರೆ ಮಾರಾಟದಲ್ಲಿ 700 ಅಮೆರಿಕನ್ ಡಾಲರ್ಗೆ ಮಾರಾಟವಾಗುತ್ತದೆ. ಪ್ರಯೋಗಾಲಯದಲ್ಲಿ ಕಾರ್ಡಿಸೆಪ್ಸ್ ಪಡೆಯುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಹೀಗೆ ಸಹಜವಾಗಿ ಸಿಗುವ ಕಾರ್ಡಿಸೆಪ್ಸ್ ಪಡೆಯಲಾಗುತ್ತಿದ್ದು, ಇದಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುವುದೂ ವರದಿಯಲ್ಲಿದೆ.
ಮಾತ್ರವಲ್ಲ, ಕಾರ್ಡಿಸೆಪ್ಸ್ ಬೂಸ್ಟ್ ಅತ್ಯಧಿಕವಾಗಿ ಉತ್ಪಾದಿಸುವುದು ಮತ್ತು ರಫ್ತು ಮಾಡುವುದು ಕೂಡ ಚೀನಾವೇ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿ ಇದರ ಇಳುವರಿ ಇಳಿದಿದ್ದು, ಆ ಕೊರತೆಯ ನಡುವೆಯೂ ಬೇಡಿಕೆಯನ್ನು ಪೂರೈಸಿಕೊಳ್ಳಲು ಚೀನಾ ಇದಕ್ಕಾಗಿ ಭಾರತದೊಳಕ್ಕೆ ನುಗ್ಗುತ್ತಿದೆ ಎಂದು ಈ ವರದಿ ವಿವರಿಸಿದೆ. ಚೀನಾದ ಜನರು ಇದನ್ನು ನಪುಂಸಕತೆಯಿಂದ ಹಿಡಿದು ಅಜೀರ್ಣದವರೆಗೆ ಬಹುತೇಕ ಎಲ್ಲ ರೋಗಗಳಿಗೆ ಮದ್ದು ಎಂದು ಪರಿಗಣಿಸುತ್ತಿದ್ದಾರೆ.