ಗೆಳೆಯನಿಗೋಸ್ಕರ ಪರೀಕ್ಷೆ ಬರೆದಳು LOVER : ಈ ತ್ಯಾಗಕ್ಕೆ ದೊರೆಯಿತು ಭಾರೀ ದೊಡ್ಡ ಶಿಕ್ಷೆ!

ಪ್ರೀತಿಗೆ ಕಣ್ಣಿಲ್ಲ ಅಂತಾ ಎಲ್ಲರೂ ಹೇಳ್ತಾರೆ. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ ಆದರೆ ಇಲ್ಲೊಬ್ಬಳು ಗೆಳೆಯನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆಯನ್ನು ಬರೆದಿದ್ದಾಳೆ.

ತನ್ನ ಗೆಳೆಯನಿಗೆ ಬೇರೆ ಕೆಲಸವಿದೆ ಎಂಬ ಕಾರಣಕ್ಕೆ ಆತನ ಬದಲಿಗೆ ಗೆಳತಿಯೇ ಪರೀಕ್ಷೆಗೆ ಅಟೆಂಡ್ ಆಗಿ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾಳೆ. ಹೌದು ಉತ್ತರಾಖಂಡದಲ್ಲಿ ವಿಹಾರಕ್ಕೆ ಬಂದಿದ್ದ ತನ್ನ ಗೆಳೆಯನಿಗೆ ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಅವಳು ತನ್ನ ಗೆಳೆಯನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆಯನ್ನು ಬರೆದಿದ್ದಳು.

ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ವೀರ್ ನರ್ಮದ್ ನಲ್ಲಿ ವಿಎನ್‌ಎಸ್‌ಜಿಯು ಕಾಲೇಜಿ ನಲ್ಲಿ ಈ ಘಟನೆ ನಡೆದಿದ್ದು, ಗೆಳೆಯನ ಪರವಾಗಿ ಪರೀಕ್ಷೆಗೆ ಹಾಜರ್ ಆಗಿರುವ ಯುವತಿ ಈಗ ಮುಂದಿನ ಮೂರು ವರ್ಷಗಳ ಪರೀಕ್ಷೆಗಳಿಂದ ಡಿಬಾರ್ ಆಗುವ ಸಾಧ್ಯತೆಯಿದೆ. ಆ ಮೂಲಕ ಗೆಳೆಯನಿಗೆ ಸಹಾಯ ಮಾಡುವುದಕ್ಕೆ ಹೋದ ಮಹಿಳೆಯು ಇದೀಗ ತನ್ನ ಪದವಿಯನ್ನೇ ಕಳೆದುಕೊಳ್ಳುವ ಅಪಾಯವನ್ನು ಎದುರಿಸುವಂತಾಗಿದೆ.

FACT ಸಮಿತಿಯ ಸಂಚಾಲಕ ಸ್ನೇಹಲ್ ಜೋಶಿ ಪ್ರಕಾರ “ಸಾಮಾನ್ಯವಾಗಿ ಡಮ್ಮಿ ಅಭ್ಯರ್ಥಿಗೆ ಕಠಿಣ ಶಿಕ್ಷೆ ಎಂದರೆ ಅವರ ಸ್ವಂತ ಪದವಿಯನ್ನು ರದ್ದುಗೊಳಿಸುವುದೇ ಆಗಿದೆ. ಈ ಗರಿಷ್ಠ ಶಿಕ್ಷೆಯನ್ನು ನೀಡಿದರೆ, ನಿಜವಾದ ವಿದ್ಯಾರ್ಥಿಯ ಹಿಂದಿನ ಫಲಿತಾಂಶಗಳನ್ನು ಮುಂದಿನ ಮೂರು ವರ್ಷಗಳವರೆಗೆ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಡಿಬಾರ್ ಮಾಡಬಹುದು,”ಎಂದು ತಿಳಿಸಿದ್ದಾರೆ.

ಪ್ರೀತಿ ವ್ಯಾಮೋಹದಿಂದ ಈಕೆ ತನ್ನನು ತಾನೇ ಪೇಚಿಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಕೊನೆಗೆ ಪರೀಕ್ಷೆ ತನಗೂ ಇಲ್ಲ, ಗೆಳೆಯನಿಗೂ ಇಲ್ಲದ ಪರಿಸ್ಥಿತಿ ಆಗಿದೆ.

Leave A Reply

Your email address will not be published.