Google Pay Loan: ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿ ಯೆ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಇಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿ ಕೊಟ್ಟಿವೆ. ಈಗ ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್ ಕಾದಿದ್ದು, ಕ್ಷಣಮಾತ್ರದಲ್ಲಿ 8 ಲಕ್ಷ ಸಾಲಕ್ಕೆ ಅರ್ಜಿ ಹಾಕಬಹುದಾಗಿದೆ.

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಮುಂಚಿನ ಹಾಗೆ ವ್ಯಾಲೆಟ್ ನಲ್ಲಿ ನಗದಿನ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭದ್ರ ಪಡಿಸಿಕೊಂಡು ಬಿಟ್ಟಿದೆ. ನೀವು ಕೂಡ Google Pay ಬಳಸು ತ್ತಿದ್ದರೆ ನಿಮಗೆ ಸಿಹಿ ಸುದ್ದಿಯೊಂದು ಕಾದಿದೆ. ನೀವು ಕ್ಷಣಗಳಲ್ಲಿ ಸುಲಭವಾಗಿ ಸಾಲ ಪಡೆಯಬಹುದಾಗಿದ್ದು ಬರೋಬ್ಬರಿ 8 ಲಕ್ಷದವರೆಗೂ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನೀವು ಹಣ ಮುಗ್ಗಟ್ಟಿನ ಸಮಸ್ಯೆ ಎದುರಿಸುತ್ತಿದ್ದರೆ, ಸಾಲ ಪಡೆಯುವ ಯೋಜನೆ ಹಾಕಿಕೊಂಡಿದ್ದರೆ ಮುಖ್ಯ ಮಾಹಿತಿ ಇಲ್ಲಿದೆ.
ಎನ್‌ಬಿಎಫ್‌ಸಿಗಳು ಮತ್ತು ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಲಭವಾಗಿ ಸಾಲವನ್ನು ಪಡೆಯಬಹುದು. ನೀವು ಆನ್‌ಲೈನ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಇದಲ್ಲದೇ ಥರ್ಡ್ ಪಾರ್ಟಿ ಆ್ಯಪ್ ಮುಖಾಂತರ ಸಾಲ ಪಡೆಯಬಹುದಾಗಿದೆ. ಇದೀಗ, ನೀವು Google Pay ಮೂಲಕ ಕೂಡ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ , ನೀವು Google Pay ಮೂಲಕ ಸಾಲ ಪಡೆಯಬಹುದಾಗಿದ್ದು, ಆದರೆ ಇಲ್ಲಿ ಗೂಗಲ್ ಪೇ ನೇರ ಸಾಲ ನೀಡದು. ಹಣಕಾಸು ಕಂಪನಿಗಳು Google Pay ಜೊತೆಗೆ ಪಾಲುದಾರಿಕೆ ಹೊಂದಿದ್ದು,ಈ ಪಾಲುದಾರಿಕೆ ಮೂಲಕ ಸಾಲಗಳನ್ನು ನೀಡುತ್ತದೆ. ಅದಕ್ಕಾಗಿ, ನೀವು Google Pay ಅಪ್ಲಿಕೇಶನ್‌ಗೆ ಹೋಗಿ ಅಲ್ಲಿ ಲಭ್ಯವಿರುವ ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್ ಮುಖಾಂತರ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Google Pay ಸಾಲಗಳಿಗೂ ಇದರೊಂದಿಗೆ ಯಾವುದೇ ಸಂಬಂಧ ಇರುವುದಿಲ್ಲ. ಮಧ್ಯವರ್ತಿ ಮಾದರಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. ಸಾಲದ ಮೇಲಿನ ಬಡ್ಡಿ ದರವು 15 ಪ್ರತಿಶತದಿಂದ ಶುರುವಾಗಲಿದೆ. ಕನಿಷ್ಠ 10,000 ರೂ.ಸಾಲ ಹಾಗೂ ಗರಿಷ್ಠ ರೂ. 8 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ನಿಮ್ಮ ಸಾಲದ ಅರ್ಹತೆಯ ಆಧಾರದ ಮೇಲೆ ನಿಮ್ಮ ಲೋನ್ ಮೊತ್ತವನ್ನು ತೀರ್ಮಾನ ಕೈಗೊಳ್ಳಲಾಗುತ್ತದೆ.

ಈ ಸಾಲವನ್ನು ಪಡೆಯಲು ಎಲ್ಲಿಯೂ ಹೋಗಬೇಕಾದ ಅನಿವಾರ್ಯತೆ ಇಲ್ಲ. ಬದಲಿಗೆ ಈ ಎಲ್ಲ ಕಾರ್ಯಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಹೀಗಾಗಿ, ನೀವು ತ್ವರಿತ ಸಾಲ ಪಡೆಯಬಹುದಾಗಿದ್ದು,ಪೇಪರ್ ವರ್ಕ್ ಕೂಡ ಇರುವುದಿಲ್ಲ. Insta Money, Money View, Money Tap, Cash ಕೂಡ Google Pay ಮೂಲಕ ಸಾಲವನ್ನು ನೀಡಲಾಗುತ್ತದೆ.

ಸಾಲ ಪಡೆಯಲು ಬಯಸುವವರು ಮೊದಲು Google Pay ಅಪ್ಲಿಕೇಶನ್‌ಗೆ ಹೋಗಬೇಕು. ಅಲ್ಲಿ ನೀವು ಮ್ಯಾನೇಜ್ ಮನಿ ಎಂಬ ಆಯ್ಕೆಯನ್ನು ನೋಡಬಹುದು. ಇದರಲ್ಲಿ ನೀವು ಕ್ರೆಡಿಟ್ ಕಾರ್ಡ್, ಸಾಲಗಳು, ಚಿನ್ನದ ಆಯ್ಕೆಗಳನ್ನು ನೋಡಬಹುದಾಗಿದೆ. ಲೋನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡಾಗ ಹೊಸ ಪುಟ ತೆರೆದುಕೊಳ್ಳುತ್ತದೆ.

ಈಗ ಲೋನ್ ಆಫರ್‌ಗಳ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಲಭ್ಯವಿರುವ ಆಯ್ಕೆಗಳನ್ನು ನೋಡಬಹುದು. ನೀವು ಇಷ್ಟವಾದದ್ದನ್ನು ಆಯ್ಕೆ ಮಾಡಬಹುದು. DMI ಫೈನಾನ್ಸ್ ಲೋನ್ ಆಯ್ಕೆಯು ಕಾಣಿಸುತ್ತದೆ. ಸ್ಟಾರ್ಟ್ ಲೋನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ, ಅಗತ್ಯವಿರುವ ದಾಖಲೆಗಳು ಪ್ಯಾನ್ ಕಾರ್ಡ್ ವಿವರಗಳು, ವಿಳಾಸ, ಆಧಾರ್ ಮತ್ತು ಇತರ ಮಾಹಿತಿಯನ್ನು ಒದಗಿಸಬೇಕು. ಈ ಸಾಲ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರೆಯಲಿದೆ.

Leave A Reply

Your email address will not be published.