MRI ಸ್ಕ್ಯಾನ್‌ನೊಳಗೆ ಜೋಡಿಯ ಪಲ್ಲಂಗದಾಟ | ಭಾರೀ ವೈರಲ್‌ ಆದ ಸ್ಕ್ಯಾನ್‌ಚಿತ್ರಗಳು

ವೈದ್ಯಕೀಯ ಲೋಕದಲ್ಲಿ ಹಲವು ಅಧ್ಯಯನಗಳು ನಡೆಯುತ್ತದೆ. ಈ ಪ್ರಯತ್ನಗಳು ಸಾಕಷ್ಟು ಆಸಕ್ತಿದಾಯಕ ವಿಷಯಗಳನ್ನೊಳಗೊಂಡಿರುತ್ತದೆ. ಹಲವು ವರ್ಷಗಳ ಹಿಂದೆ ಸಾಕಷ್ಟು ರೋಚಕತೆ ಮೂಡಿಸಿದ ಇಂತಹುದೇ ಒಂದು ಘಟನೆಯ ಕುರಿತು ಇತ್ತೀಚಿನ ದಿನಗಳಲ್ಲಿ ಹಲವೆಡೆ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಹೌದು, ಇಲ್ಲಿ ದಂಪತಿಗಳು ಪ್ರಣಯದಲ್ಲಿ ತೊಡಗಿರುವಾಗ ಅವರ ದೇಹದ ಆಂತರಿಕ ಭಾಗಗಳು ಯಾವ ರೀತಿಯಲ್ಲಿ ಕಾಣಿಸುತ್ತದೆ, ಚಲನೆ ಹೊಂದಿರುತ್ತದೆ ಎಂಬುದನ್ನು ಸೆರೆಹಿಡಿಯಲು ಎಂಆರ್ಐ ಮಶೀನ್ ಬಳಸಲಾಗಿತ್ತು ಮತ್ತು ಅದರಲ್ಲಿ ಎಲ್ಲವನ್ನು ಕೂಡ ಸೆರೆಹಿಡಿಯಲಾಗಿತ್ತು.

ಹಾಗೆ ನೋಡಿದರೆ ಇದು ಒಂದು ರೀತಿಯ ಅಧ್ಯಯನವಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅದರ ಫಲಿತಾಂಶವನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲ, ಈ ಅಧ್ಯಯನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಆ ಸಮಯದಲ್ಲಿ ಪ್ರಕಟಿಸಲಾಗಿದೆ. ಸರಳವಾಗಿ ಹೇಳುವುದಾದರೆ, MRI ಒಳಗೆ ಜೋಡಿಗಳ ಪ್ರಣಯ ಚಿತ್ರಗಳು ಮತ್ತು ವೀಡಿಯೊಗಳನ್ನು ತೋರಿಸಲಾಗಿದೆ.

ಅಂದ ಹಾಗೇ ಈ ಅಧ್ಯಯನವು 1991 ಮತ್ತು 1999 ರ ನಡುವೆ ಹಲವಾರು ಬಾರಿ ನಡೆಸಲಾಗಿದೆ. ಇದರಲ್ಲಿ ಇಡಾ ಸಬೆಲ್ಲಿಸ್ ಮತ್ತು ಅವಳ ಪಾರ್ಟ್ನರ್ ಜುಪ್ ಶಾಮೀಲಾಗಿದ್ದಾರೆ. ಪ್ರಯೋಗಕ್ಕಾಗಿ, ದಂಪತಿಗಳು MRI ಯಂತ್ರದಲ್ಲಿ ಪ್ರಣಯ ನಡೆಸಿದ್ದರು. ಹಲವು ವರದಿಗಳಲ್ಲಿ ಈ ಅಧ್ಯಯನವು ದೀರ್ಘಕಾಲದವರೆಗೆ ನಡೆದಿದೆ ಎಂದು ಹೇಳಲಾಗಿದೆ, ಅಂದ ಹಾಗೆ ಈ ಎಂಆರ್‌ಐ ಸ್ಕ್ಯಾನಿಂಗ್‌ ಪ್ರಣಯದಾಟದ ಸೆರೆ ಹಿಡಿಯುವಲ್ಲಿ ಪಾಲ್ಗೊಂಡಿದ್ದ ಇಬ್ಬರನ್ನು ಹೊರತುಪಡಿಸಿ ಅನೇಕ ತಜ್ಞರು ಸಹ ಇದರಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.