ಹೆಚ್ಚಾದ ಚಳಿ, ಶಾಲಾ ಸಮಯ ಬದಲಾವಣೆ ಮಾಡಿಸಿ ಆದೇಶ ಹೊರಡಿಸಿದ‌ ಶಿಕ್ಷಣ ಇಲಾಖೆ!

ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಹವಾಮಾನ (Weather) ವೈಪರಿತ್ಯ ಉಂಟಾಗುತ್ತಿರುವ ಹಿನ್ನೆಲೆ ಜನಸಾಮಾನ್ಯರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ. ಚಳಿಯ (Cold) ಜೊತೆಗೆ ತುಂತುರು ಮಳೆಯಿಂದ ಹೆಚ್ಚಿನವರ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಶಾಲಾ ಮಕ್ಕಳ (School students) ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಹೀಗಾಗಿ, ಉತ್ತರ ಪ್ರದೇಶದ ಶಾಲೆಗಳಲ್ಲಿ (School) ಕೆಲವು ಮಹತ್ತರ ಬದಲಾವಣೆ ತರಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣವು ಇನ್ನೂ 2 ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಮತ್ತು ನಗರದ ತಾಪಮಾನವು 6 ರಿಂದ 7 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆ ಇರಲಿದೆ ಎನ್ನಲಾಗಿದೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪಾಲಕರು ಜೊತೆಗೆ ಇನ್ನಿತರ ಉದ್ಯಮಗಳಿಗೂ ಸಮಸ್ಯೆ ತಲೆದೋರಿದೆ. ಶಾಲಾ ಸಮಯ ಬದಲಿಸಿರುವುದು ಸ್ವಲ್ಪ ಮಟ್ಟಿನಲ್ಲಿ ಎಲ್ಲರಿಗೂ ಪ್ರಯೋಜನವಾಗಿದೆ.

ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ, ಶೀತ ಹವಾಮಾನ ಮತ್ತು ದಟ್ಟ ಮಂಜಿನಿಂದಾಗಿ ಡಿಸೆಂಬರ್ 31 ರವರೆಗೆ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಶಾಲಾ ಸಮಯದಲ್ಲಿ ಬದಲಾವಣೆ ತರಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಶಾಲಾ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬದಲಾಯಿಸಲಾಗಿದೆ. ಲಕ್ನೋ, ಘಾಜಿಯಾಬಾದ್ ಮತ್ತು ಇತರ ನಗರಗಳ ಜಿಲ್ಲಾಡಳಿತ ಸಮಯ ಬದಲಾವಣೆ ಮಾಡಲಾಗಿದೆ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಟ್ಟವಾದ ಮಂಜು ಆವರಿಸಿದ್ದು, 10 ಮೀಟರ್‌ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುಗಳು ಕಣ್ಣಿಗೆ ಕಾಣಿಸದಷ್ಟು ಮಂಜು ಮುಸುಕಿದ್ದು ದಾರಿಯು ಅಸ್ಪಷ್ಟವಾಗಿ ಕಾಣುತ್ತದೆ. ಈ ಪ್ರದೇಶದಲ್ಲಿ ಯಾವುದೇ ವಸ್ತುಗಳು ಗೋಚರಿಸುವುದಿಲ್ಲ. ಹೀಗಾಗಿ, ವಾಹನ ಚಲಾಯಿಸುವುದು ಕೂಡ ತ್ರಾಸದಾಯಕವಾಗಿದೆ.

ನಿತ್ಯ ಬೇರೆ ಬೇರೆ ತರಗತಿಗಳಿಗೆ ಮತ್ತು ಕೋಚಿಂಗ್‌ಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ದಟ್ಟವಾದ ಮಂಜಿನ ಜೊತೆಗೆ ಚಳಿಯ ಹಿನ್ನೆಲೆಯಲ್ಲಿ ಜಿಲ್ಲೆಯ 1 ರಿಂದ 8 ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:30 ರವರೆಗೆ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ಬೆಳಿಗ್ಗೆ ತುಂಬಾ ಚಳಿ ಇರಲಿದ್ದು, ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮಂಜು ದಟ್ಟವಾಗಿದ್ದು 8-10 ಮೀಟರ್ ಆಚೆ ಏನೂ ಕಾಣಿಸುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದೂ ಕಷ್ಟವಾಗಿದೆ. ಇದರ ಜೊತೆಗೆ ತೆಂಡುವಾ ಟೋಲ್ ಪ್ಲಾಜಾ ಬಳಿ ಹಲವು ವಾಹನಗಳು ಅಪಘಾತ ಆಗುತ್ತಿದ್ದು ಇದಕ್ಕೆ ಅಲ್ಲಿರುವ ಮಂಜು ಮುಸುಕಿರುವುದೇ ಕಾರಣ ಎನ್ನಲಾಗಿದೆ.

ಈ ವಾತಾವರಣದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಈ ವಾತಾವರಣದಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆ ಮತ್ತು ಕಡಿಮೆ ವಾಹನ ಚಲಾಯಿಸದಂತೆ ಉತ್ತರ ಪ್ರದೇಶದ ಸರ್ಕಾರ ಸೂಚಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯಂತೆ ಗುರುವಾರ ಬೆಳಿಗ್ಗೆ ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಹರಿಯಾಣದಾದ್ಯಂತ ಪೂರ್ವ ಉತ್ತರ ಪ್ರದೇಶದವರೆಗೆ ದಟ್ಟವಾದ ಮಂಜು ಮುಂದುವರೆದಿದೆ.

Leave A Reply

Your email address will not be published.