19 ರ ಯುವತಿಯ ಆತ್ಮಹತ್ಯೆ | ಡೆತ್‌ನೋಟ್‌ ನಾಪತ್ತೆ, ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಮನೆಯಲ್ಲೇ ಇದ್ದ | ಆತನಾರು? ಶಾಕಿಂಗ್‌ ಮಾಹಿತಿ ಬಯಲು

Share the Article

ಹದಿಹರೆಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ ನೋಟ್‌ನಲ್ಲಿದ್ದ ಆಕೆ ಬರೆದ ವಿಷಯ ನಿಜಕ್ಕೂ ದಂಗಾಗಿಸುತ್ತೆ. ಬಾಲ್ಯದಿಂದಲೇ ತನ್ನನ್ನು ಎತ್ತಿ ಆಡಿಸಿದ ವ್ಯಕ್ತಿಯಿಂದಲೇ ಲೈಂಗಿಕ ಶೋಷಣೆಗೊಳಗಾಗಿ, ಯಾರಲ್ಲಿಯೂ ಹೇಳಿಕೊಳ್ಳಲಾಗದೇ, ಬಾಳಿ ಬದುಕಬೇಕಾಗಿದ್ದ ಮುಗ್ಧ ಯುವತಿ ಇದೀಗ ಸಾವಿನ ಕದ ತಟ್ಟಿದ್ದು ನಿಜಕ್ಕೂ ದುಃಖಕರ. ಈ ಘಟನೆ ನಡೆದಿರುವುದು ಕೇರಳದಲ್ಲಿ.

19 ವರ್ಷದ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈ ಪ್ರಕರಣದಲ್ಲಿ ಆಕೆಯ 62ವರ್ಷದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಈ ವಿಷಯವನ್ನು ಆಕೆ ತನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಪ್ರಾಥಮಿಕ ಅಂಶದ ಮೂಲಕ ತಿಳಿದಿದೆ. ಹಾಗಾಗಿ ಆಕೆಯ ಡೆತ್‌ನೋಟ್‌ನಲ್ಲಿದ್ದ ವಿಷಯದ ಆಧಾರದ ಮೇಲೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಇಲ್ಲೂ ಈ ಅಜ್ಜ ಡೆತ್‌ ನೋಟನ್ನು ಬಚ್ಚಿಟ್ಟಿದ್ದು, ನಂತರ ಅದನ್ನು ಪೊಲೀಸರು ಪತ್ತೆ ಹಚ್ಚಿದ್ದು ಅದರಲ್ಲಿ ಬರೆದ ವಿಷಯದ ಆಧಾರದ ಮೇಲೆ ಈಗ ಈ ಕಾಮಿ ಅಜ್ಜನನ್ನು ವಶಕ್ಕೆ ಪಡೆದಿದ್ದಾರೆ,

ಕೇರಳದ ಕೊಚಿಕೋಡ್‌ನಲ್ಲಿ ಈ ಪ್ರಕರಣ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ಡೆತ್ ನೋಟ್ ಸೋಮವಾರ ಪತ್ತೆಯಾಗಿದ್ದು, ಅದರಲ್ಲಿನ ಅಂಶದ ಮೇರೆಗೆ ಪೊಲೀಸರು ಈ ಕಾನೂನು ಕ್ರಮ ಜರುಗಿಸಿದ್ದಾರೆ. ಅಜ್ಜನೇ ಲೈಂಗಿಕ ಶೋಷಣೆ ನಡೆಸುತ್ತಿದ್ದ ಎಂಬುದನ್ನು ಮೊಮ್ಮಗಳು ಡೆತ್‌ನೋಟ್‌ನಲ್ಲಿ ಬರೆದಿದ್ದಳು.

ಕಾಲೇಜು ವ್ಯಾಸಂಗ ಮಾಡುತ್ತಿದ್ದ ಮೊಮ್ಮಗಳು ಡಿ. 17ರಂದು ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು. ಅವಳು ಏಳನೇ ಕ್ಲಾಸ್‌ನಲ್ಲಿ ಇದ್ದಾಗಿನಿಂದಲೇ ಅವಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿತ್ತು ಎಂಬುದು ಆರಂಭಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಡೆತ್ ನೋಟ್‌ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಬರೆದಿದ್ದು, ಆದರೆ ಆರೋಪಿ ಅಜ್ಜ ಅದನ್ನು ಮುಚ್ಚಿಟ್ಟಿದ್ದು, ಇದೀಗ ಪೊಲೀಸರು ಅದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

Leave A Reply