BEL Recruitment: ಬಿಇಎಲ್ ನಿಂದ ಉದ್ಯೋಗವಕಾಶ | ಮಾಸಿಕ ವೇತನ ರೂ.40,000
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಸೂಚನೆಯನ್ನು ಹೊರಡಿಸಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನ ಜನವರಿ 15, 2023 ಎಂದು ನಿಗದಿಪಡಿಸಲಾಗಿದೆ.
ಸಂಸ್ಥೆ : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಒಟ್ಟು ಹುದ್ದೆಗಳು : 13
ಟ್ರೈನಿ ಇಂಜಿನಿಯರ್ : 4 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್ : 9 ಹುದ್ದೆ
ವಿದ್ಯಾರ್ಹತೆ : ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್, BE
ವೇತನ : 30 ಸಾವಿರ ಹಾಗೂ 40 ಸಾವಿರ ರೂ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 15-01-2023
ಅರ್ಜಿ ಸಲ್ಲಿಕೆ ವಿಧಾನ : ಆನ್ ಲೈನ್
ವಿದ್ಯಾರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ BE/B.Tech ಪದವಿ ಪಡೆದಿರಬೇಕು. ಸಾಮಾನ್ಯ, EWS, OBC ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಪಾಸ್ ಆಗಿರಬೇಕು. SC, ST, PwBD ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ಟ್ರೈನಿ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳಿಗೆ 30,000 ರೂ.ವೇತನ ನೀಡಲಾಗುವುದು. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ 40000 ರೂ. ವೇತನ ನೀಡಲಾಗುವುದು.
ಅರ್ಜಿ ಶುಲ್ಕ : ಟ್ರೈನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಶುಲ್ಕ: 150 ರೂ. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಶುಲ್ಕ: 450 ರೂ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ