ಇನ್ಸ್ಟಾಗ್ರಾಂನಲ್ಲಿ ಯುವತಿ ಮಾಡಿದ್ಳು ಚಾಟಿಂಗ್‌ | ನಂತರ ನಡೆದೋಯ್ತು ಸೈಕೋನ ಬೆದರಿಕೆ| ಖತರ್ನಾಕ್‌ ಪ್ರೇಮಿ ಮಾಡ್ಬಿಟ್ಟ ಈ ಕೃತ್ಯ

ಪ್ರೀತಿ ಅನ್ನೋದು ಇತ್ತೀಚಿಗೆ ಪ್ರೇಮಿಗಳ ತಾಳ್ಮೆ ಕೆಡಿಸುತ್ತಿದೆ. ಒಬ್ಬರಿಗೊಬ್ಬರು ಹುಡುಗ ಹುಡುಗಿಯರು ಒಡನಾಟ ಅಥವಾ ಸ್ನೇಹ ಬೆಳೆಸಿಕೊಳ್ಳುವುದೇನು ತಪ್ಪಲ್ಲ ಆದರೆ ನಿಮ್ಮ ಸ್ನೇಹ ಸಂಬಂಧದ ಒಡನಾಟಗಳು ಎಲ್ಲಿ ಹೋಗಿ ಯಾವ ಸ್ಥಿತಿಗೆ ತಲುಪಬಹುದು ಎಂಬ ಮುಂದಾಲೋಚನೆ ಮಾಡುವುದು ಉತ್ತಮ. ಹಾಗೆಯೇ ಪ್ರೀತಿಸಲು ನಿರಾಕರಿಸಿದಳೆಂದು ಯುವಕನೊಬ್ಬ ಆಕೆಯ ಕತ್ತನ್ನೇ ಸೀಳಿ ಹತ್ಯೆ ಮಾಡಲು ಯತ್ನಿಸಿರುವುದು ಹೊಸಕೋಟೆ ತಾಲೂಕು ಉಪ್ಪಾರಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

 

ನಾಲ್ಕು ತಿಂಗಳ ಹಿಂದೆ ಇನ್ಸ್‌ಟಾಗ್ರಾಂನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ಮಂಜುನಾಥ್‌ ಎಂಬಾತ ಪರಿಚಯವಾಗಿದ್ದು, ಪರಸ್ಪರ ಚಾಟಿಂಗ್‌ ಮಾಡಿದ್ದಾರೆ. ಇದಾದ ನಂತರ ಮಂಜುನಾಥ್‌ ಯುವತಿಯನ್ನು ನೋಡಲೆಂದು ಆಕೆಯನ್ನು ಚಿಂತಾಮಣೆ ಬಸ್‌ ನಿಲ್ದಾಣಕ್ಕೆ ಕರೆಯಿಸಿಕೊಂಡು ನಿನ್ನ ಲವ್‌ ಮಾಡುತ್ತೀನಿ. ನೀನು ಲವ್‌ ಮಾಡು ಎಂದು ಹೇಳಿದ್ದನಂತೆ . ಈ ಮಾತಿಗೆ ಯುವತಿ ನೀನು ಪ್ರೇಂಡ್‌ ಅಷ್ಟೇ. ನಾನು ಲವ್‌ ಮಾಡುವುದಿಲ್ಲ ಎಂದು ಉತ್ತರ ನೀಡಿದ್ದಾಳೆ.

ಆದರೆ ನೀನು ಲವ್‌ ಮಾಡದಿದ್ದರೆ ನಿನ್ನ ಬಿಡುವುದಿಲ್ಲ ಎಂದು ಬೆದರಿಸಿ ಮಂಜುನಾಥ್‌ ಅಲ್ಲಿಂದ ಹೋಗಿದ್ದ. ಈ ವಿಚಾರ ಯುವತಿ ತನ್ನ ತಾಯಿ ಬಳಿ ಹೇಳಿದ ಮೇಲೆ ಮನೆಯಲ್ಲಿ ಯುವತಿ ಹತ್ತಿರವಿದ್ದ ಮೊಬೈಲ್‌ ಕಸಿದುಕೊಂಡಿದ್ದಾರೆ. ಇದಾದ ಮೇಲೆ ಎರಡು ತಿಂಗಳ ಹಿಂದೆ ಗಂಜಿಗೊಂಟೆ ಗ್ರಾಮದ ಬ್ಯಾಂಕಿಗೆ ಯುವತಿ ಬರುವ ವಿಚಾರ ತಿಳಿದ ಮಂಜುನಾಥ್‌ ಮೊಬೈಲ್‌ ಒಂದನ್ನು ಆಕೆ ಕೈಗೆ ಕೊಟ್ಟು ಇದು ನಿನ್ನ ಬಳಿ ಇರಲಿ ಇಲ್ಲ ಅಂದರೆ ಸತ್ತು ಹೋಗುತ್ತೇನೆ ಎಂದು ಬಲವಂತ ಪಡಿಸಿದನೆಂದು ಎಂದು ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಮಂಜುನಾಥ್‌ ಮೊಬೈಲ್‌ ಕೊಟ್ಟ ವಿಚಾರ ಮನೆಯಲ್ಲಿ ಗೊತ್ತಾಗಿ ನನ್ನನ್ನು ಹೊಸಕೋಟೆ ಬಳಿಯಿರುವ ಉಪ್ಪಾರಹಳ್ಳಿಗೆ ಕಳುಹಿಸಿದ್ದು, ಡಿ.22 ರಂದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಂದ ಮಂಜುನಾಥ್‌ ನೀನು ಲವ್‌ ಮಾಡದಿದ್ದರೆ ನಿನ್ನನ್ನು ಮರ್ಡರ್‌ ಮಾಡಿ ನಾನು ಕತ್ತು ಕೊಯ್ದುಕೊಳ್ಳುತ್ತೇನೆ ಎಂದು ಬೆದರಿಸಿ ತಾನು ತಂದಿದ್ದ ಬ್ಲೇಡ್‌ನಿಂದ ಕತ್ತಿನ ಎರಡು ಕಡೆ ಕೊಯ್ದನು. ನಾನು ತಪ್ಪಿಸಿಕೊಳ್ಳುವಷ್ಟರಲ್ಲಿ ತಾನು ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡನು. ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಈ ಹೇಳಿಕೆ ಆಧಾರದ ಮೇಲೆ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸದ್ಯ ಇಬ್ಬರು ಹೊಸಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.