ನೀವು ಏರ್ ಟೆಲ್ ಗ್ರಾಹಕರೇ? ಇಲ್ಲೊಂದು ಸೂಪರ್ ಪ್ಲ್ಯಾನ್ ಇದೆ |ಆದರೆ ನೀವು ರೀಚಾರ್ಜ್ ಮಾಡ್ತೀರಾ ಇಲ್ವಾ ಅನ್ನೋದೇ ಡೌಟು?!

Share the Article

ಜನಪ್ರಿಯ ಟೆಲಿಕಾಂ ಸಂಸ್ಥೆಗಳಲ್ಲಿ ಏರ್‌ಟೆಲ್ ಕೂಡ ಒಂದಾಗಿದೆ. ಇದು ಸೂಪರ್ ಪ್ಲ್ಯಾನ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಹಾಗೇ ಇದೀಗ ಏರ್‌ಟೆಲ್ ಟೆಲಿಕಾಂ ಅಲ್ಪಾವಧಿಯ ಯೋಜನೆಗಳೊಂದಿಗೆ ಕೆಲವು ಅದ್ಭುತವಾದ ದೀರ್ಘಾವಧಿಯ ಪ್ರೀಪೇಯ್ಡ್ ಪ್ಲ್ಯಾನ್ಗಳ ಆಯ್ಕೆಯನ್ನು ಪಡೆದಿದೆ. ಇನ್ನೂ, ಈ ಸೂಪರ್ ಪ್ಲ್ಯಾನ್ ಏನು? ಹಾಗೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಏರ್ ಟೆಲ್ ಸಂಸ್ಥೆ ಈ ಬಾರಿ ಅತ್ಯುತ್ತಮ ಯೋಜನೆಗಳನ್ನ ಗ್ರಾಹಕರ ಮುಂದಿಟ್ಟಿದೆ. ಆದರೆ ನೀವು ಈ ಯೋಜನೆಗಳಲ್ಲಿ ರೀಚಾರ್ಜ್ ಮಾಡ್ತೀರಾ ಇಲ್ವಾ ಅನ್ನೋದೇ ಡೌಟು?! ಹಾಗಾದ್ರೆ ಈ ಪ್ರೀಪೇಯ್ಡ್ ಪ್ಲ್ಯಾನ್ ನ ಪ್ರಯೋಜನಗಳೇನು? ಈ ಯೋಜನೆಯಲ್ಲಿ ಏನೆಲ್ಲಾ ಸೇವೆಗಳು ಲಭ್ಯವಾಗಲಿದೆ ಎಂದು ನೋಡೋಣ.

3359 ರೂಪಾಯಿಯ ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು :

ಈ ಪ್ರೀಪೇಯ್ಡ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 365 ದಿನಗಳಲ್ಲಿ ಬಳಕೆದಾರರು ಪ್ರತಿದಿನ 2.5 GB ಡೇಟಾವನ್ನು ಬಳಸಬಹುದು. ಜೊತೆಗೆ ಈ ರೀಚಾರ್ಜ್ ಪ್ಲಾನ್‌ನಲ್ಲಿ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡಬಹುದಾಗಿದೆ. ಅಲ್ಲದೆ, ಪ್ರತೀದಿನ 100 ಎಸ್ಎಮ್‌ಎಸ್ ಅನ್ನು ಫ್ರೀಯಾಗಿ ಮಾಡುವ ಅವಕಾಶವಿದೆ. ಈ ಯೋಜನೆಯು ಗ್ರಾಹಕರಿಗೆ ಒಟ್ಟಾರೆಯಾಗಿ 912.5GB ಡೇಟಾವನ್ನು ನೀಡಲಿದೆ. ಹಾಗೇ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಕೂಡ ಲಭ್ಯವಾಗಲಿದೆ.

2999 ರೂಪಾಯಿಯ ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು :

ಈ ಪ್ರೀಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಳಕೆದಾರರು ಪ್ರತಿದಿನ 2 GB ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಹಾಗೂ ಪ್ರತಿದಿನ 100 ಎಸ್ಎಮ್‌ಎಸ್ ಸೌಲಭ್ಯ ಇದೆ. ಅಲ್ಲದೆ, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಕೂಡ ಇವೆ.

838 ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು :

ಈ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, FUP ಲಿಮಿಟ್ ಇಲ್ಲದೇ ಅನ್ಲಿಮಿಟೆಡ್ ಉಚಿತವಾಗಿ ಕರೆ ಸೌಲಭ್ಯ ಇದ್ದು, ಬಳಕೆದಾರರು ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ. ಅಲ್ಲದೆ, ಪ್ರತಿದಿನ 100 ಉಚಿತ ಎಸ್ಎಮ್ಎಸ್ ಅವಕಾಶ ಕೂಡ ಇದೆ. ಹಾಗೇ ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಸದಸ್ಯತ್ವ ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಂ, ಪಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೌಲಭ್ಯ ಕೂಡ ಲಭ್ಯವಾಗಲಿದೆ.

699ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು :

699ರೂ. ಯ ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, FUP ಲಿಮಿಟ್ ಇಲ್ಲದೇ ಅನಿಯಮಿತ ಕರೆಗಳಿಗೆ ಅವಕಾಶ ಲಭ್ಯವಾಗಲಿದೆ. ಜೊತೆಗೆ ಪ್ರತಿದಿನ 3GB ಡೇಟಾ ಹಾಗೂ 100 ಉಚಿತ ಎಸ್ಎಮ್‌ಎಸ್ ನ ಪ್ರಯೋಜನ ಪಡೆಯಬಹುದಾಗಿದೆ. ಇದಿಷ್ಟೇ ಅಲ್ಲದೆ, ಅಮೆಜಾನ್ ಪ್ರೈಮ್ ಸದಸ್ಯತ್ವ ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಂ, ವಿಂಚ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ಗಳಂತಹ ಸೇವೆಗಳು ಕೂಡ ಇದೆ.

Leave A Reply