2nd ಪಿಯು ವಿದ್ಯಾರ್ಥಿಗಳ ಗಮನಕ್ಕೆ : ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿರಲಿವೆ ಹಲವು ಬದಲಾವಣೆ | ಹೇಗಿರಲಿವೆ ಈ ಬಾರಿಯ ಪ್ರಶ್ನೆ ಪತ್ರಿಕೆ ?

2023ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಗೆ ತಯಾರಿ ನಡೆಯುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಈಗಾಗಲೇ ಸಕಲ ಸಿದ್ಧತೆಯನ್ನು ನಡೆಸಿದೆ. ಕೊರೊನಾ ಹಾವಳಿ ಈಗಾಗಲೇ ಶುರುವಾಗಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೋ ಇಲ್ಲವೋ ಎನ್ನುವ ಗೊಂದಲ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡಿದ್ದರೂ ಕೂಡಾ ಪರೀಕ್ಷೆ ಖಂಡಿತವಾಗಿ ನಡೆಯುತ್ತೆ ಎಂಬ ಮಾಹಿತಿ ಇದೆ.

ಈ ಬಾರಿ ಹೇಗಿರಲಿದೆ ಗೊತ್ತಾ ಪ್ರಶ್ನೆ ಪತ್ರಿಕೆ ?
ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಈ ಬಾರಿ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿದೆ. ಒಟ್ಟಾರೆ 100 ಅಂಕಗಳ ಪ್ರಶ್ನೆಪತ್ರಿಯಾಗಿದ್ದು, 10 ಅಂಕಗಳಿಗೆ ಎಂಸಿಕ್ಯು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬಿರಿ ನೀಡಲಾಗಿದೆ. ಒಟ್ಟು 20 ಅಂಕಗಳಿಗೆ ಸುಲಭ ಪ್ರಶ್ನೆಗಳು ಇರಲಿದ್ದು, ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಈ ಮಾದರಿ ಸಹಕಾರಿಯಾಗಲಿ ಎನ್ನುವುದು ಮಂಡಲಿಯ ಮುಖ್ಯ ಉದ್ದೇಶವಾಗಿದೆ.

ಇನ್ನೂ, 80 ಅಂಕಗಳಿಗೆ ವಾಕ್ಯ ರಚನೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಲಾಗುತ್ತದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, ಹಾಗು 5 ಅಂಕದ ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗುತ್ತದೆ. 80 ಅಂಕಗಳ ಪ್ರಶ್ನೆಗಳಲ್ಲಿ ಸಂದಂರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಾಗುತ್ತದೆ.

ಇಲ್ಲಿ ಬದಲಾವಣೆ ತರುವ ಮೂಲ ಉದ್ದೇಶ ಫಲಿತಾಂಶ ಹೆಚ್ಚಳ ಮಾಡುವುದು. ಇತ್ತೀಚಿನ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡರೆ ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಕೆ ಮಾಡಿದಾಗ, ಈ ಪ್ರಮಾಣ ಕಡಿಮೆಯಾಗಿ ಕಾಣುತ್ತಿದೆ. ಹಾಗಾಗಿ ಇದನ್ನು ಹೆಚ್ಚಸುವ ಅನಿವಾರ್ಯತೆ ಇದೆ.

Leave A Reply

Your email address will not be published.