ಈ ಚಿತ್ರದಲ್ಲಿ ಹಲ್ಲಿ ಇದೆ ಹುಡುಕುವಿರಾ?
ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯ ದ ಬಗೆಗಿನ ಮೌಲ್ಯ ಮಾಪನ ಮಾಡುತ್ತದೆ. ಹೌದು ಹಾಗೆಯೇ ಇಲ್ಲಿ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ. ಹಾಗೆಯೇ ಇಲ್ಲೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ.
ಸದ್ಯ ವೈರಲ್ ಆಗಿರುವ ಫೋಟೋದ ಒಂದು ಭಾಗದಲ್ಲಿ ಒಂದು ಹಲ್ಲಿ ಇದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಹಲ್ಲಿಯ ಬಣ್ಣದ ಆ ಚಿತ್ರದ ಉಳಿದ ಭಾಗದೊಂದಿಗೆ ಬೆರೆತು ಹೋಗಿದೆ. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಹಲ್ಲಿ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ 10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿ ಹಲ್ಲಿಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿ ವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.
ಒಂದು ವೇಳೆ ಹಲ್ಲಿಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.