ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ; ಸ್ವರ್ಗ ದ್ವಾರದ ಮೂಲಕ ಗೋವಿಂದನ ದರ್ಶನಕ್ಕೆ ಆನ್ಲೈನ್ ಟಿಕೆಟ್ ಮಾರಾಟ ಪ್ರಾರಂಭ..!
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಪ್ರತಿ ಹಬ್ಬದ ಆಚರಣೆ ಕೂಡ ಧರ್ಮದ ಕ್ರಮ ಪ್ರಕಾರ ನಡೆಸಲಾಗುತ್ತದೆ.
ಪ್ರತಿಯೊಂದು ಹಬ್ಬದ ಆಚರಣೆಗೂ ಕೂಡ ಅದರದ್ದೇ ಆದ ವಿಶಿಷ್ಟತೆಯನ್ನು ಹೊಂದಿದೆ. ವೈಕುಂಠ ಏಕಾದಶಿಯ ಹಿನ್ನೆಲೆ ತಿರುಪತಿ ಸ್ವರ್ಗ ದ್ವಾರದ ದರ್ಶನಕ್ಕೆ ಆನ್ಲೈನ್ ಟಿಕೆಟ್ ಮಾರಾಟ ಪ್ರಾರಂಭವಾಗಿದೆ.ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿಯನ್ನು ವಿಶೇಷ ದಿನವಾಗಿ ಪರಿಗಣಿಸಲಾಗುತ್ತದೆ.
ಈ ತಿಂಗಳಲ್ಲಿ 20 ದಿನಗಳ ಕಾಲ ಶ್ರೀನಿವಾಸನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪೂಜೆ ನಡೆಯಲಿದ್ದು, ಎರಡು ದಿನಗಳ ಹಿಂದೆ ಎಲ್ಲಾ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಈ ಪೂಜೆ ಆರಂಭವಾಗುತ್ತವೆ. ವೈಕುಂಠ ಏಕಾದಶಿಯನ್ನು ವಿಶೇಷವಾಗಿ ತಿರುಪತಿಯಲ್ಲಿ ಆಚರಿಸಲಾಗುತ್ತದೆ.
ಈ ಪುಣ್ಯ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ವೈಕುಂಠ ಏಕಾದಶಿಯ ವೇಳೆ, ತಿರುಪತಿ ತಿರುಮಲ ದೇವಸ್ಥಾನದಲ್ಲಿ ಜನವರಿ 2 ರಂದು ಸ್ವರ್ಗದ ಬಾಗಿಲು ತೆರೆಯಲಿದ್ದು, 10 ದಿನಗಳ ಕಾಲ ಭಕ್ತರಿಗೆ ಸ್ವರ್ಗದ ದ್ವಾರದ ಮೂಲಕ ಗೋವಿಂದನ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ.
ಸುಮಾರು 2.50 ಲಕ್ಷ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರತಿದಿನ 25 ಸಾವಿರ ಭಕ್ತರು ಈ ವಿಶೇಷ ದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ದರ್ಶನ ಲಭ್ಯ ಪಡೆಯಲು 300 ರೂ. ಶುಲ್ಕದಲ್ಲಿ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಅನಗತ್ಯ ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ದರ್ಶನ ಟೋಕನ್ ಹೊಂದಿರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುತ್ತದೆ. . ದಿನಕ್ಕೆ 50,000 ಟೋಕನ್ಗಳ ಆಧಾರದ ಮೇಲೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. 300 ಶುಲ್ಕದಲ್ಲಿ 2.50 ಲಕ್ಷ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ತಿರುಪತಿಯಲ್ಲಿ ಮಾತ್ರ ಸರ್ವ ದರ್ಶನದ ಟೋಕನ್ ಪಡೆಯಬಹುದು ಎಂದು ಘೋಷಿಸಲಾಗಿದೆ. ಭಕ್ತರಿಗೆ ಅನ್ನ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.ಉಚಿತ ದರ್ಶನಕ್ಕೆ ಮಾತ್ರ 5 ಲಕ್ಷ ದರ್ಶನ ಟೋಕನ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.