ಮಂಗಳೂರು : ಕೆಎಸ್ ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗದಿಂದ ಹಲವು ದೇವಸ್ಥಾನ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಟೂರ್‌ ಪ್ಯಾಕೇಜ್‌ ಕಲ್ಪಿಸಿದೆ. ಈ ಪ್ರವಾಸ ಮಂಗಳೂರಿನಿಂದ ಹೊರಟು ಕೇರಳ ಮತ್ತು ಮಡಿಕೇರಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದಾಗಿದೆ. ಇದು ಡಿ. 31 ರವರೆಗೆ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ನಡೆಯಲಿದೆ. ಪ್ರವಾಸ ಕೈಗೊಳ್ಳುವವರಿಗೆ ಇದು ಉತ್ತಮ ಅವಕಾಶವಾಗಿದೆ.

 

ಕೇರಳ ಪ್ಯಾಕೇಜ್‌ ನ ವಿವರ ಹೀಗಿದೆ, ಮಂಗಳೂರಿನಿಂದ ಹೊರಟು ಬೆಳಗ್ಗೆ 8ಗಂಟೆಯಿಂದ 10ರವರೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನಂತರ ಬೆಳಗ್ಗೆ 10.15 ರಿಂದ 11ರವರೆಗೆ ಕುಂಬ್ಳೆ ಶ್ರೀ ಅನಂತಪದ್ಮನಾಭ ದೇವಸ್ಥಾನ. ಹಾಗೇ 11.15 ರಿಂದ 12 ರವರೆಗೆ ಮಧೂರು ಶ್ರೀ ಮದನಂತೇಶ್ವರ ಮತ್ತು ಗಣಪತಿ ದೇವಸ್ಥಾನಕ್ಕೆ ತೆರಳಿ ನಂತರ 12.30ರಿಂದ 1.30ರ ವರೆಗೆ ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ. ಊಟ, ವಿಶ್ರಾಂತಿಯ ನಂತರ ಮತ್ತೆ ಮಧ್ಯಾಹ್ನ 3 ರಿಂದ 4ರ ವರೆಗೆ ಕಾಂಞಗಾಡ್‌ ನಿತ್ಯಾನಂದ ಆಶ್ರಮಕ್ಕೆ. ಕೊನೆಗೆ 4.15ರಿಂದ ಸಂಜೆ 6ರ ವರೆಗೆ ಬೇಕಲ್‌ ಫೋರ್ಟ್‌ ಬೀಚ್‌ ಗೆ ತೆರಳಿ, ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಮಂಗಳೂರಿಗೆ ತಲುಪಲಿದೆ.

ಪ್ರತಿಯೊಬ್ಬ ಪ್ರಯಾಣಿಕರಿಗೆ ಪ್ರಯಾಣದರ ಅದರಲ್ಲಿ ಊಟದ ವೆಚ್ಚವನ್ನು ಹೊರತುಪಡಿಸಿ, ವಯಸ್ಕರಿಗೆ 750 ರೂ. ಆಗಿರುತ್ತದೆ. ಹಾಗೂ 6 ವರ್ಷದಿಂದ 12 ವರ್ಷದವರೆಗಿನ ಮಕ್ಕಳಿಗೆ 700 ರೂ.ಗಳು ಎಂದು ಹೇಳಲಾಗಿದೆ.

ಇನ್ನೂ,ಮಡಿಕೇರಿ ಪ್ಯಾಕೇಜ್‌ ಬಗ್ಗೆ ಹೇಳಬೇಕಾದರೆ, ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ ಸುಮಾರು 7 ಗಂಟೆಗೆ ಹೊರಟರೆ ಮಡಿಕೇರಿ ರಾಜಾಸೀಟ್‌ ಗೆ ಬೆಳಗ್ಗೆ 11ಕ್ಕೆ ತಲುಪಿ. ನಂತರ ಮಧ್ಯಾಹ್ನ 2.30 ರಿಂದ 3.15ರ ವರೆಗೆ ಅಬ್ಬಿಫಾಲ್ಸ್‌ ಗೆ ಭೇಟಿ ನೀಡಿ. ಬಳಿಕ ನಿಸರ್ಗಧಾಮಕ್ಕೆ ಸಂಜೆ 4.30 ರಿಂದ 4.45ರ ಹೊತ್ತಿಗೆ ಹೋದರೆ, ಸಂಜೆ 5.15 ರಿಂದ 5.30ರ ವರೆಗೆ ಗೋಲ್ಡನ್‌ ಟೆಂಪಲ್‌ ಹಾಗೂ ಹಾರಂಗಿ ಡ್ಯಾಮ್‌ ಗೆ ಹೋಗಿ, ಎಲ್ಲಾ ಸ್ಥಳಕ್ಕೂ ಭೇಟಿಯಾಗಿ ನಂತರ ಸಂಜೆ 6.15ಕ್ಕೆ ಹಾರಂಗಿ ಡ್ಯಾಮ್‌ನಿಂದ ಹೊರಟು ವಾಪಾಸ್ಸು ರಾತ್ರಿ 10.30ಕ್ಕೆ ಮಂಗಳೂರು ಬಸ್ ನಿಲ್ದಾಣಕ್ಕೆ ತಲುಪಲಿದೆ.

ಇಲ್ಲಿ ಕೂಡ ಪ್ರತಿಯೊಬ್ಬ ಪ್ರಯಾಣಿಕರಿಗೆ ಊಟ, ತಿಂಡಿಗಳ ವೆಚ್ಚ ಹೊರತುಪಡಿಸಿ ಒಟ್ಟು ಪ್ರಯಾಣ ದರ, ವಯಸ್ಕರಿಗೆ 500 ರೂ.ಗಳು ಆಗಿದೆ. ಹಾಗೇ 6 ವರ್ಷದಿಂದ 12 ವರ್ಷದವರೆಗಿನ ಮಕ್ಕಳಿಗೆ 450 ರೂ.ಗಳು ಆಗಿದೆ. ನೀವೇನಾದರೂ ಪ್ರವಾಸ ಕೈಗೊಳ್ಳುವವರಿದ್ದರೆ ನಿಮಗಾಗಿ ಪ್ಯಾಕೇಜ್‌ ಪ್ರವಾಸಕ್ಕೆ www.ksrtc.in ಡಿಡಿಡಿ.ks್ಟಠ್ಚಿ.ಜ್ಞಿ ಅಲ್ಲಿ ಮುಂಗಡ ಬುಕ್ಕಿಂಗ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.