ತಾಯಿಯನ್ನು ರಕ್ಷಿಸಿದ ಪುಟ್ಟ ಪೋರನ‌ ಆಘಾತಕಾರಿ ವಿಡಿಯೋ ವೈರಲ್

Share the Article

ಗಂಭೀರ ಅಪಘಾತದಿಂದ ತಾಯಿಯನ್ನು ರಕ್ಷಿಸಿದ ಪುಟ್ಟ ಪೋರನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಎಂಬವರು ಹಂಚಿಕೊಂಡಿದ್ದಾರೆ.

ತಾಯಿ ಟೆರೀಸ್‌ನಲ್ಲಿರುವ ಬಾಗಿಲನ್ನು ರಿಪೇರಿ ಮಾಡುತ್ತಿದ್ದಾಗ ಅವಳ ಏಣಿ ಏಕಾಏಕಿ ಬಿದ್ದಿದ್ದು, ಆಗ ತಾಯಿ ಕಿರುಚಿಕೊಂಡಿದ್ದಾಳೆ. ತಾಯಿ ನೇತಾಡುತ್ತಿರುವುದನ್ನು ನೋಡಿ, ಧೈರ್ಯಶಾಲಿ ಬಾಲಕ ಕೂಡಲೇ ಸಹಾಯಕ್ಕೆ ಧಾವಿಸಿ ಏಣಿಯನ್ನು ಮೇಲೆತ್ತಿ ತನ್ನ ತಾಯಿಯ ಬಳಿ ಇರಿಸಿದನು, ನಂತರ ಅವಳು ತನ್ನ ಕಾಲುಗಳಿಂದ ಏಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಲ್ಲದೆ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ವಿಡಿಯೋ ಇದಾಗಿದೆ.

ಈಗಾಗಲೇ ಈ ವಿಡಿಯೋವನ್ನು 95,000 ಕ್ಕೂ ಹೆಚ್ಚು ವೀಕ್ಷಣೆಗಳನ್ನುಹೊಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪುಟ್ಟ ಪೋರನ್ನು ಹೀರೋ’ ಎಂದು ಕರೆದಿದ್ದಾರೆ.

Leave A Reply