ಬಸ್ ಪ್ರಯಾಣಿಕರೇ ಗಮನಿಸಿ : ಉಚಿತವಾಗಿ 45ಕಿಮೀ ದೂರ ಬಸ್ಸಿನಲ್ಲಿ ಪ್ರಯಾಣ ಮಾಡಬೇಕೇ ? ಹಾಗಾದರೆ ಈ ರೀತಿ ಮಾಡಿ

ಈಗಾಗಲೇ ಕೇಂದ್ರ ಸರ್ಕಾರವು ಪ್ರಸ್ತುತ ದುಡಿಯುವ ವರ್ಗಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಪ್ರಸ್ತುತ ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಬೆಳೆಸುವ ಅವಕಾಶವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿಕೊಡುತ್ತಿದೆ.

ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರು ಇದರ ಲಾಭವನ್ನು ಪಡೆಯಬಹುದಾಗಿದೆ. ಈ ಮೂಲಕ ಬಸ್ ಪಾಸ್ ನೊಂದಿಗೆ ದಿನಂಪ್ರತಿ ಕೆಲಸ, ಕಾರ್ಯಗಳಿಗೆ ತೆರಳಬಹುದಾಗಿದೆ. ಸದ್ಯ ಆಸಕ್ತ ಕಾರ್ಮಿಕರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಅರ್ಜಿದಾರರು ಕಡ್ಡಾಯವಾಗಿ ಸರ್ಕಾರಿ ನೋಂದಾಯಿತ ಕಟ್ಟಡ ಕಾರ್ಮಿಕ ಸದಸ್ಯತ್ವ ಹೊಂದಿರಬೇಕಾಗುತ್ತದೆ.

ನೋಂದಾಯಿತ ಕಟ್ಟಡ ಕಾರ್ಮಿಕರು ಬಸ್ ಪಾಸ್ ಪಡೆಯುವ ಕ್ರಮ ಮತ್ತು ಪ್ರಯೋಜನ :

  • ಆಸಕ್ತರು ಸ್ಥಳೀಯ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
  • ನೋಂದಾಯಿತ ಕಟ್ಟಡ ಕಾರ್ಮಿಕರು ಬಸ್ ಪಾಸ್ ಪಡೆದಲ್ಲಿ ತಮ್ಮ ವಾಸಸ್ಥಳದಿಂದ 45 ಕಿ.ಮೀ. ವರೆಗೆ ಉಚಿತವಾಗಿ ಪಯಣಿಸಬಹುದಾಗಿದೆ.
  • ಪ್ರತಿ ಬಸ್ ಪಾಸ್ ನ ದರ ಮಾಸಿಕ 1400 ಆಗಿರುತ್ತದೆ. ಮತ್ತು ಈ ಪಾಸ್ ಅವಧಿಯು 3 ತಿಂಗಳಾಗಿರುತ್ತದೆ.

ಆಸಕ್ತರು ಸ್ಥಳೀಯ ಕರ್ನಾಟಕ ವನ್ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

Leave A Reply

Your email address will not be published.