ಇನ್ಸ್ಟಾಗ್ರಾಂ ಮೂಲಕ ಪ್ರೀತಿ, ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾದ ಹಿಂದೂ ಯುವತಿ
ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಎಗ್ಗಿಲ್ಲದೆ ನಡೆಯತ್ತಿದೆ. ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯ ನ್ನು ದಾಟಿ, ಅದೆಷ್ಟೊ ಮಂದಿ ಅಂತರ್ಜಾತಿ ವಿವಾಹವಾದ ಪ್ರಕರಣಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ಉದಾಹರಣೆ ಕೂಡ ಇದೆ.
ಇದರ ನಡುವೆ ಎಲ್ಲ ಅಡೆತಡೆಗಳ ಮೆಟ್ಟಿ ನಿಂತು ಸುಂದರ ಜೀವನ ರೂಪಿಸಿಕೊಂಡ ಜೋಡಿಗಳು ಕೂಡ ಇದ್ದಾರೆ ಎಂಬುದು ಅಷ್ಟೆ ಸತ್ಯ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು, ಅಂತರ್ಜಾತೀಯ ವಿವಾಹ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇದೀಗ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹಿಂದು ಯುವತಿ ಮುಸ್ಲಿಂ ಯುವಕನೊಬ್ಬನನ್ನು ಇನ್ಸ್ಟಾಗ್ರಾಂ (Love Marriage) ಮೂಲಕ ಪರಿಚಯವಾಗಿ ಲವ್ ಜಿಹಾದ್ ನಡೆದಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಹಿಂದೂ (Hindu) ಯುವತಿ ಮುಸ್ಲಿಂ (Muslim) ಯುವಕ ನಡುವೆ ಪ್ರೇಮಾಂಕುರವಾಗಿದೆ (Love Marriage). ಎನ್ನಲಾಗಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಈ ಇನ್ಸ್ಟೆಂಟ್ ಇನ್ಸ್ಟಾಗ್ರಾಂ ಲವ್ ಪ್ರಕರಣ ವರದಿಯಾಗಿದ್ದು, ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ (Kushtagi) ಪಟ್ಟಣದ ಇಂದಿರಾನಗರದ ಯುವತಿ ಮದುವೆಯಾದ ಜೋಡಿ ಎಂಬ ಮಾಹಿತಿ ಕೆಲ ಮಾಧ್ಯಮ ಮೂಲಕ ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಈ ಜೋಡಿ ಪರಿಚಯವಾಗಿ ಸ್ನೇಹ ಬೆಳೆದು ಮತ್ತೆ ಈ ಬಂಧ ಪ್ರೀತಿಯ ಅನುರಾಗಕ್ಕೆ ಮುನ್ನುಡಿ ಬರೆದಿದೆ. ಈ ಬಳಿಕ ಯುವತಿ ಮನೆ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಪ್ರೀತಿಸಿ ಮುಸ್ಲಿಂ ಸಾಂಪ್ರದಾಯದಂತೆ ಯುವತಿ ಹಸೆಮಣೆ ಏರಿ ಮದುವೆಯಾಗಿದ್ದಾರೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣ (Love Jihad) ನಡೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆ ಇಬ್ಬರೂ ಪ್ರೇಮಿಗಳನ್ನು ಹುಡುಕುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದ ಕುರಿತು ಪೋಲಿಸ್ ಪಡೆ ತನಿಖೆ ನಡೆಸಿದ್ದು, ಯುವತಿ ಬಲವಂತ ದಿಂದ ಮದುವೆ ಆಗಿರಬಹುದೇ ?? ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಬಲವಂತದ ಮತಾಂತರದ ಕುರಿತು ಸಹ ಪೊಲೀಸರು ತನಿಖೆ ನಡೆಸಿದ ಸಂದರ್ಭ ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.