ಜಿಯೋನ 200 ರೂ.ಒಳಗಿನ ಬೆಸ್ಟ್ ಪ್ಲ್ಯಾನ್ ರೀಚಾರ್ಜ್ ಇದು | ನಿಮಗ್ಯಾವುದು ಇಷ್ಟ ?
ಭಾರತದ ಟೆಲಿಕಾಂ ಕಂಪನಿಯಲ್ಲಿ ರಿಲಯನ್ಸ್ ಜಿಯೋ ಹೆಚ್ಚಿನ ಜನಪ್ರಿತೆ ಪಡೆದಿದ್ದೂ, ನಂಬರ್ 1 ಸ್ಥಾನದಲ್ಲಿ ಭದ್ರವಾಗಿ ನಿಂತಿದೆ. ಅಗ್ಗದ ರೀಚಾರ್ಜ್ ಪ್ಲಾನ್ ಆದರೂ, ಹಲವಾರು ಪ್ರಯೋಜನಗಳನ್ನು ಹೊಂದಿದೆ. ಜನ ಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಯೋಜನೆಯನ್ನು ಬಿಡುಗಡೆ ಮಾಡುವ ಮೂಲಕವೇ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ಜಿಯೋದಲ್ಲಿ ಬಿಡುಗಡೆಯಾದಂತಹ ಪ್ಲಾನ್ಗಳಲ್ಲಿ ಒಂದಾದ 200 ರೂಪಾಯಿ ಒಳಗಿನ ರೀಚಾರ್ಜ್ನಲ್ಲಿ ನಾಲ್ಕು ಬೆಸ್ಟ್ ಯೋಜನೆಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ಜಿಯೋ ರೂ.119 ಪ್ಲಾನ್:- ಕಡಿಮೆ ವೆಚ್ಚದ ಯೋಜನೆಯನ್ನು ಹುಡುಕುತ್ತಿರುವ ಜಿಯೋ ಗ್ರಾಹಕರಿಗೆ ಇದೊಂದು ಬೆಸ್ಟ್ ಆಪ್ಶನ್ ಅಂದರೆ ತಪ್ಪಾಗಲಾರದು. ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದೂ , 1.5 GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಇದರ ಜೊತೆಗೆ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವಂತಹ ಅವಕಾಶವನ್ನು ಒದಗಿಸುತ್ತದೆ. ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಲ್ಲೂ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಜಿಯೋ ರೂ.149 ಯೋಜನೆ:- ಹಿಂದಿನ ಯೋಜನೆಗೆ ಹೋಲಿಸಿದರೆ ಈ ಯೋಜನೆಯ ವ್ಯಾಲಿಡಿಟಿ ಸ್ವಲ್ಪ ಹೆಚ್ಚು ದಿನಗಳವರೆಗೆ ಇರುತ್ತದೆ. ಈ ಯೋಜನೆ ಒಟ್ಟು 20 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 20 ದಿನಗಳಲ್ಲಿ ಪ್ರತಿದಿನ ಬಳಕೆದಾರರು 1ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಉಚಿತ ಕಾಲ್ ಸೇವೆಗಳು ಇದೆ. ಪ್ರತಿದಿನ 100 ಎಸ್ಎಮ್ಎಸ್ ಫ್ರೀ ಆಗಿ ಮಾಡುವ ಅವಕಾಶವಿದೆ. ಅದಲ್ಲದೇ, ಜಿಯೋ ನ ಇತರ ಪ್ರೀ ಪೇಯ್ಡ್ ಯೋಜನೆಗಳಂತೆಯೇ ಈ ಯೊಜನೆಯಲ್ಲಿ ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಲ್ಲಿ ಉಚಿತ ಚಂದಾದಾರಿಕೆ ಪಡೆಯಬಹುದು.
ಜಿಯೋ ರೂ.155 ಪ್ಲಾನ್:- ಹೆಚ್ಚು ಡೇಟಾ ಬಳಸದವರಿಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯೊಂದಿಗೆ ನಿಮಗೆ ಲಭ್ಯವಿದೆ. ಪ್ರತಿದಿನ ಬಳಕೆದಾರರು ಒಟ್ಟಾಗಿ 2ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವ ಪ್ರಯೋಜನವನ್ನು ಸಹ ಪಡೆಯುತ್ತಾರೆ.
ಜಿಯೋ ರೂ.179 ಯೋಜನೆ: ಈ ಯೋಜನೆ ಒಟ್ಟು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 24 ದಿನಗಳಲ್ಲಿ ಪ್ರತಿದಿನ ಬಳಕೆದಾರರು 1ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಉಚಿತ ಕಾಲ್ ಸೇವೆಗಳು ಇದೆ. ಪ್ರತಿದಿನ 100 ಎಸ್ಎಮ್ಎಸ್ ಫ್ರೀ ಆಗಿ ಮಾಡುವ ಅವಕಾಶವಿದೆ. ಅದಲ್ಲದೇ ಹೆಚ್ಚುವರಿ ಪ್ರಯೋಜನವಾಗಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಲ್ಲಿ ಉಚಿತ ಚಂದಾದಾರಿಕೆ ಪಡೆಯಬಹುದು.