ಜೇಮ್ಸ್ ಕ್ಯಾಮರೂನ್ ನ ಅವತಾರ್ – 2 ಚಿತ್ರದಿಂದ ಅಕ್ಷರಶಃ: ಹಣ ಕೊಳ್ಳೆ, ಈವರೆಗಿನ ಗಳಿಕೆ 4000 ಕೋಟಿ !
ಎಂಟನೇ ದಿನಕ್ಕೆ ಕಾಲಿಟ್ಟ ನಂತರವೂ, ಅವತಾರ್: ದಿ ವೇ ಆಫ್ ವಾಟರ್ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಈ ವಾರದ ಆರಂಭದಲ್ಲಿ ಸ್ವಲ್ಪ ಕುಸಿತವನ್ನು ಕಂಡ ಜೇಮ್ಸ್ ಕ್ಯಾಮರೂನ್ ಅವರ ಚಲನಚಿತ್ರವು ಕ್ರಿಸ್ಮಸ್ ಮತ್ತು ಹೊಸ ವರ್ಷದ ವಾರಾಂತ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ದುಡ್ಡು ಗಳಿಸುವ ನಿರೀಕ್ಷೆಯಿದೆ. ಈ ಚಿತ್ರವು ಡಿಸೆಂಬರ್ 23 ರಂದು ಬಿಡುಗಡೆಯಾದ ರಣವೀರ್ ಸಿಂಗ್ ಅವರ ಸರ್ಕಸ್ ಅನ್ನು ಮೀರಿಸಿದೆ.
ಜೇಮ್ಸ್ ಕ್ಯಾಮರೂನ್ ಅವರ ಅವತಾರ್: ದಿ ವೇ ಆಫ್ ವಾಟರ್ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಪ್ರವಾಹದಂತೆ ಸೆಳೆಯುವುದನ್ನು ಮುಂದುವರೆಸಿದೆ ಮತ್ತು ಇದೀಗ, ಇತ್ತೀಚಿನ ವರದಿಗಳ ಪ್ರಕಾರ ಇದರ ಭಾರತದ ಗಳಿಕೆ 200 ಕೋಟಿ ರೂಪಾಯಿಗಳನ್ನು ದಾಟಿದೆ.
ಜಗತ್ತಿನಲ್ಲಿ ಅದರ ಗಳಿಕೆಯ ಬಗ್ಗೆ ನೋಡಿದರೆ, ಈ ಚಿತ್ರವು ಎರಡು ದಿನಗಳ ಹಿಂದೆಯೇ 3500 ಕೋಟಿಗಳನ್ನು ಸೃಷ್ಟಿಸಿಕೊಂಡು ತಿಜೋರಿ ಉಬ್ಬಿಸಿಕೊಂಡು ಓಡುತ್ತಿತ್ತು. ಇದೀಗ ಅವತಾರ್ – 2 ಚಿತ್ರವು 4000 ಕೋಟಿ ರೂಪಾಯಿಗಳ ಗಡಿಯನ್ನು ಉಲ್ಲಂಘಿಸಿ ಮುನ್ನುಗ್ಗುತ್ತಿದೆ.
ಜಗತ್ತಿನ ಅಗ್ರಗಣ್ಯ ಕಲೆಕ್ಷನ್ ಮಾಡಿದ ಸಿನಿಮಾ ಎಂದರೆ ಅದು ಈಗಿನ ಅವತಾರ್ 2 ರ ಹಿಂದಿನ ಸಂಚಿಕೆ ಅವತಾರ್ ! ಅದು ಜಾಗತಿಕವಾಗಿ 2,41,95,91,44,920 ರೂಪಾಯಿಗಳನ್ನು ಗಳಿಸಿತ್ತು. ಅಂದರೆ ಭಾರತದ ಬರೋಬ್ಬರಿ 2,41,96 ಕೋಟಿ ರೂಪಾಯಿಗಳಾಗುತ್ತದೆ. ಅವತಾರ್ 2 ತನ್ನ ಹಳೆಯ ದಾಖಲೆಯನ್ನು ಸುಲಭವಾಗಿ ಮುರಿದು ಮುಂದಕ್ಕೆ ಹೋಗಲಿದೆ ಎನ್ನುವುದು ಖಚಿತ ಆಗಲಿದೆ.
ಈ ಚಿತ್ರವು ತನ್ನ ಎರಡನೇ ಶುಕ್ರವಾರದಂದು 13.5 ಕೋಟಿ ಮತ್ತು 14.5 ಕೋಟಿ ರೂ.ಗಳ ನಡುವೆ ಹಣ ಸಂಪಾದಿಸಿತು. ಅದರ ಒಟ್ಟು ಕಲೆಕ್ಷನ್ 200 ಕೋಟಿ ಮಾರ್ಕ್ ಅನ್ನು ಮೀರಿದೆ. ಈ ಚಿತ್ರವು ಭಾರತದಲ್ಲಿ ಕೇವಲ ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿಗಳ ಗಡಿ ದಾಟಿದೆ.
ದಿ ವೇ ಆಫ್ ವಾಟರ್ ಸೋಮವಾರ 18.5 ಕೋಟಿ, ಮಂಗಳವಾರ 16.5 ಕೋಟಿ, ಬುಧವಾರ 15 ಕೋಟಿ, ಗುರುವಾರ 13.5 ಕೋಟಿ ಸಂಗ್ರಹಿಸಿದೆ. ಅವತಾರ್ 2 ಬಿಡುಗಡೆಯಾದ ಮೊದಲ ದಿನವೇ 42 ಕೋಟಿ ರೂಪಾಯಿ ಗಳಿಸಿದ ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಹಾಲಿವುಡ್ ಓಪನರ್ ಆಯಿತು.
ಸರಿ, ಜೇಮ್ಸ್ ಕ್ಯಾಮರೂನ್ ಅವರ ನಿರ್ದೇಶನವು ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ವಾರಾಂತ್ಯದಲ್ಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಇನ್ನಷ್ಟು ಮಿಂಟ್ ಮಾಡಲು ಸಿದ್ಧವಾಗಿದೆ. ಈ ವಾರಾಂತ್ಯದಲ್ಲಿ ಚಿತ್ರ ಕನಿಷ್ಠ 55 ಕೋಟಿ ರೂ. ಲೂಟಿ ಬೀಳುವುದು ಪಕ್ಕಾ.
ಅವತಾರ್: ದಿ ವೇ ಆಫ್ ವಾಟರ್ ಬ್ಲಾಕ್ಬಸ್ಟರ್ ಹಿಟ್ ಚಿತ್ರ 2009 ರಲ್ಲಿ ತೆರೆಕಂಡು ಯಶ ಕಂಡಿದ್ದ ಅವತಾರ್ ನ ಉತ್ತರ ಭಾಗವಾಗಿದೆ. ಚಿತ್ರದಲ್ಲಿ ಸ್ಯಾಮ್ ವರ್ತಿಂಗ್ಟನ್, ಜೊಯಿ ಸಲ್ಡಾನಾ, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ. ಸ್ಯಾಮ್ ಮತ್ತು ಜೊಯಿ ತಮ್ಮ ಪಾತ್ರಗಳನ್ನು ಜೇಕ್ ಸುಲ್ಲಿ ಮತ್ತು ನೆಯ್ಟಿರಿಯಾಗಿ ನಟಿಸಿದ್ದಾರೆ.