ಕ್ರಿಸ್ಮಸ್ ಟ್ರೀ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ವರ್ಷದ ಕೊನೆಯ ದಿನಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು, ಹೊಸ ಹುರುಪಿನಿಂದ ಹೊಸ ಆಲೋಚನೆಗಳ ಜೊತೆಗೆ ಹೊಸ ವರುಷವನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ಸಂಭ್ರಮದ ಭರಾಟೆಯ ನಡುವೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಎಲ್ಲೆಡೆ ಭರ್ಜರಿ ತಯಾರಿ ನಡೆಯುತ್ತಿದೆ.

 

ಕ್ರಿಸ್ಮಸ್ ಎಂದ ತಕ್ಷಣ ನೆನಪಿಗೆ ಬರುವುದೇ ಜಿಂಗಲ್ ಬೆಲ್..ಜಿಂಗಲ್ ಬೆಲ್..ಎಂದು ಉಡುಗೊರೆಯ ಜೊತೆಗೆ ಮನೆಯವರ, ಮಕ್ಕಳ ಪಾಲಿಗೆ ಖುಷಿಯ ಬುಗ್ಗೆ ಹಂಚುವ ಸಾಂತಾ ಕ್ಲಾಸ್, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಕ್ರಿಸ್ಮಸ್ ಹಬ್ಬದ ಅಲಂಕಾರ, ಮನೆಯ ಸುತ್ತ ಮುತ್ತ ಮಿಂಚುವ ಲೈಟುಗಳ ನಡುವೆ ವಿಶೇಷವಾಗಿ ಕಂಗೊಳಿಸುವ ಕ್ರಿಸ್ಮಸ್ ಟ್ರೀ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸಂಭ್ರಮದ ಕ್ಷಣಗಳಲ್ಲಿ ಭಾಗಿಯಾಗುತ್ತಾರೆ.

ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯುವುದು ಸಾಮಾನ್ಯ ಸಂಗತಿ. ಕ್ರೈಸ್ತ ಧರ್ಮದ ಪ್ರಕಾರ ಯೇಸು ಕ್ರಿಸ್ತನ ಜನ್ಮದಿನವನ್ನು ಕ್ರಿಸ್ಮಸ್ ಎಂದು ಆಚರಿಸಲಾಗುತ್ತದೆ. ಕ್ರೈಸ್ತ ಸಮುದಾಯದ ಪಾಲಿಗೆ ಇದು ಅತ್ಯಂತ ಸಂಭ್ರಮದ ದಿನವಾಗಿದೆ. ಆದರೆ, ಈ ದಿನ ಮನೆಯನ್ನು ಅಲಂಕಾರ ಮಾಡುವುದಲ್ಲದೆ, ಕ್ರಿಸ್ಮಸ್ ಟ್ರೀ ಅಲಂಕಾರ ಹೆಚ್ಚಾಗಿ ಎಲ್ಲರ ಮನಸೆಳೆಯುತ್ತದೆ.

ಆದರೆ, ಈ ದಿನ ಆ ಟ್ರೀ ಇಡಲು ಕಾರಣವೇನು ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ನಿಮಗೆ ತಿಳಿದಿದೆಯೇ??

ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಕ್ರಿಸ್ಮಸ್ ಟ್ರೀ ಯನ್ನೂ ಬಣ್ಣದ ಬಣ್ಣದ ಉಡುಗೊರೆ, ಚಾಕ್ಲೇಟ್, ವಿಭಿನ್ನವಾಗಿ ಅಲಂಕರಿಸಿ ಬಹುತೇಕ ಮನೆಗಳಲ್ಲಿ ಕಂಗೊಳಿಸುತ್ತಿರುತ್ತದೆ. ಇದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ??

ಹೌದು!!..ಯೇಸು ಕ್ರಿಸ್ತ ಹುಟ್ಟುವ ಸಮಯದಲ್ಲಿ ಒಂದು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಮರವನ್ನು ಅಲ್ಲಿ ಸಿಂಗಾರ ಮಾಡಿ ಇಡಲಾಗಿತ್ತು ಎಂಬ ನಂಬಿಕೆ ಇದೆ. ಹೀಗಾಗಿ, ಆ ಮರವನ್ನು ಕ್ರಿಸ್ಮಸ್ ಟ್ರೀ ಎಂದು ಕರೆಯಲಾಗುತ್ತದೆ. ಈ ವಿಶೇಷ ದಿನದಂದು ಮರವನ್ನು ಅಲಂಕರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ವೇಳೆ ಈ ಮರವನ್ನು ಚಾಕೊಲೇಟ್, ಗಿಫ್ಟ್ ಡಬ್ಬಗಳು, ಬಣ್ಣದ ದೀಪಗಳ ಮೂಲಕ ಅಲಂಕರಿಸಲಾಗುತ್ತದೆ.

ಕ್ರಿಸ್​ಮಸ್​ ಟ್ರೀ ಅಲಂಕಾರ ಮಾಡುವ ಸಡಗರದಲ್ಲಿ ಮಕ್ಕಳು ಹೆಚ್ಚು ಉತ್ಸಾಹದಿಂದ ಪಾಲ್ಗೊಂಡು ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗುತ್ತಾರೆ. ಬಣ್ಣ ಬಣ್ಣದ ದೀಪಗಳ ಮಧ್ಯೆ ಜಗಮಗಿಸುವ ಗಿಫ್ಟ್ ಗಳು, ಕ್ರಿಸ್ಮಸ್ ಟ್ರೀ ಯ ಅಲಂಕಾರ ಕಣ್ಣಿಗೆ ಒಂದು ರೀತಿಯ ಹಬ್ಬ ಎಂದರೆ ತಪ್ಪಾಗದು.

700 ನೇ ವರ್ಷದಿಂದ, ಪೇಗನ್ ಮರವನ್ನು ಬಳಕೆ ಮಾಡಲು ಆರಂಭಿಸಲಾಗಿದ್ದು, ಇದನ್ನು ಕ್ರಿಶ್ಚಿಯನ್ ಧರ್ಮದ ಸಂಕೇತವೆಂದು ಪರಿಗಣಿಸಲಾಗಿದೆ. ಕ್ರಿಸ್ಮಸ್ ಮರವು ತ್ರಿಕೋನಾಕಾರದಲ್ಲಿರುವುದರಿಂದ ಮನೆಯಲ್ಲಿ ಸಂಪತ್ತು ಹಾಗೂ ನೆಮ್ಮದಿ ಹೆಚ್ಚಾಗುತ್ತದೆ ಎಂಬ ಪ್ರತೀತಿ ಕೂಡ ಇದೆ.

ಸಾಂಪ್ರದಾಯಿಕವಾಗಿ ಆರಂಭಿಕ ದಿನಗಳಲ್ಲಿ ಮರವನ್ನು ಸೇಬುಗಳು, ಬೀಜಗಳು ಮತ್ತು ಇತರ ಆಹಾರಗಳಿಂದ ಅಲಂಕರಿಸಲಾಗುತ್ತಿತ್ತು. ಇದನ್ನು 18 ನೇ ಶತಮಾನದಲ್ಲಿ ಮೇಣದಬತ್ತಿಗಳು ಮತ್ತು ನಂತರ ಕ್ರಿಸ್ಮಸ್ ದೀಪಗಳಿಂದ ಬದಲಾಯಿಸಲಾಯಿತು.

ಇಂದು, ದೀಪಗಳ ಜೊತೆಗೆ ತರಹೇವಾರಿ ಆಯ್ಕೆಯ ಅನೇಕ ಅಲಂಕಾರಿಕ ವಸ್ತುಗಳು ಲಭ್ಯವಾಗುತ್ತಿವೆ. ಕ್ರಿಸ್ಮಸ್ ಮರಗಳ ಜಾಗದಲ್ಲಿ ಉತ್ತರ ಯುರೋಪಿನ ಅನೇಕ ಭಾಗಗಳಲ್ಲಿ, ಚೆರ್ರಿ ಅಥವಾ ಹಾಥಾರ್ನ್ ಸಸ್ಯಗಳನ್ನು ಬಳಕೆ ಮಾಡಲಾಗುತ್ತದೆ.

Leave A Reply

Your email address will not be published.