ತಲೆ ಕೂದಲಿಗೆ ಇದೊಂದು ಹಾಕಿ ನೋಡಿ, ಚಿಂತೆ ಮಾಡೋ ಅವಶ್ಯಕತೆನೇ ಇಲ್ಲ!

ಪ್ರತಿಯೊಬ್ಬರು ತಮ್ಮ ಕೇಶರಾಶಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಜನರ ಜೀವನ ಶೈಲಿ, ವಾತಾವರಣ ಮುಂತಾದ ಸಮಸ್ಯೆಗಳಿಂದ ಹೆಚ್ಚಿನವರು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಒಂದು ಸುಲಭವಾದ ಪರಿಹಾರ ವಿದೆ. ಅದು ನೈಸರ್ಗಿಕ ರೂಪದಲ್ಲೇ ಇರುವುದರಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ. ಯಾರು ಬೇಕಾದರೂ ಇದನ್ನು ಟ್ರೈ ಮಾಡಬಹುದು.

ತಲೆ ಕೂದಲನ್ನು ಸೊಂಪಾಗಿ ಆರೋಗ್ಯಕರವಾಗಿ ಬೆಳೆಸುವ ಶಕ್ತಿ ನಾವು ದಿನನಿತ್ಯ ಆಹಾರ ಪದಾರ್ಥಗಳಾಗಿ ಉಪಯೋಗಿಸುವ ಹಲವು ವಿಧಗಳಲ್ಲಿ ಸಿಗುತ್ತದೆ. ಅದರಲ್ಲಿ ಕರಿಬೇವಿನ ಸೊಪ್ಪು ಕೂಡ ಒಂದು. ಪರಿಮಳವನ್ನು ಹೊಂದಿರುವ ಸುಗಂಧಭರಿತ ಕರಿಬೇವಿನ ಎಲೆಗಳು ಕೂದಲಿನ ಆರೈಕೆ ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕರಿಬೇವಿನ ಸೊಪ್ಪು ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿಯೋ ಅದೇ ರೀತಿ ನಮ್ಮ ತಲೆ ಕೂದಲಿಗೂ ತುಂಬಾ ಲಾಭಕಾರಿ ಎಂದೇ ಹೇಳಬಹುದು. ಆರೋಗ್ಯಕರವಾದ ಮತ್ತು ಹೊಳಪಿನ ತಲೆಕೂದಲನ್ನು ಪಡೆಯಲು, ಬೇರುಗಳಿಗೆ ಸದೃಢತೆಯನ್ನು ಕೊಡುವಲ್ಲಿ ಇದರ ಪಾತ್ರ ಮಹತ್ವವಾದದ್ದು.

ಕರಿಬೇವಿನ ಎಲೆಗಳಲ್ಲಿರುವ ಸಮೃದ್ಧ ಪೋಷಕಾಂಶಗಳು ಕೂದಲು ತೆಳುವಾಗುವುದನ್ನು ಅಥವಾ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ನೆತ್ತಿಯ ಭಾಗದಲ್ಲಿ ತೇವಾಂಶವನ್ನು ಹಾಗೆ ಹಿಡಿದು ತಲೆ ಹೊಟ್ಟು ಬರದಂತೆ ಕಾಪಾಡುತ್ತದೆ. ಕರಿಬೇವಿನ ಎಲೆಗಳಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಪ್ರೋಟೀನ್ ಇರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಅಡ್ಡಿಪಡಿಸುವ, ಸತ್ತ ಕೂದಲು ಕಿರುಚೀಲಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ತಲೆ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.

ಕರಿಬೇವಿನ ಸೊಪ್ಪು ಮತ್ತು ತೆಂಗಿನ ಎಣ್ಣೆ ಎರಡರ ಸಂಯೋಜನೆಯಿಂದಾಗಿ ಬಿಳಿ ಕೂದಲಿನ ಸಮಸ್ಯೆ ಜೊತೆಗೆ ತಲಿಕೂದಲು ಉದುರುವ ಸಮಸ್ಯೆ ಮಾಯವಾಗುತ್ತದೆ. ಹಾಗಾಗಿ ಇವೆರಡರ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಅನೇಕ ಲಾಭಗಳಿವೆ. ತಲೆ ಕೂದಲಿನ ಸಮೃದ್ಧವಾದ ಬೆಳವಣಿಗೆಯ ಜೊತೆಗೆ ನೈಸರ್ಗಿಕ ವಾದ ತಲೆ ಕೂದಲಿನ ಬಣ್ಣ ಸಿಗುವಂತೆ ಮಾಡುವಲ್ಲಿ ಈ ಟಿಪ್ಸ್ ತುಂಬಾ ಅನುಕೂಲಕರವಾಗಿದೆ.

ಕರಿಬೇವು ಮತ್ತು ತೆಂಗಿನ ಎಣ್ಣೆಯನ್ನು ತಯಾರಿಸುವ ವಿಧಾನ:-
ಮೊದಲಿಗೆ 100 ಗ್ರಾಂ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಒಣಗಿಸಿ ಮತ್ತು ಕಡ್ಡಿಗಳಿಂದ ಬೇರ್ಪಡಿಸಿಕೊಳ್ಳಿ. ಈಗ ಇದಕ್ಕೆ ನಿಮ್ಮ ಬಳಕೆಗೆ ಬೇಕಾಗುವಷ್ಟು ತೆಂಗಿನ ಎಣ್ಣೆ ಸೇರಿಸಿ. ಒಂದು ಮೆಟಲ್ ಪಾತ್ರೆಯಲ್ಲಿ ಬಿಸಿ ಮಾಡಲು ಸ್ಟವ್ ಮೇಲೆ ಇರಿಸಿ. ಈಗ ಕಡಿಮೆ ಉರಿಯಲ್ಲಿ ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹಾಗೆ ಇರಿ. ಈಗ ಈ ಮಿಕ್ಸ್ಚರ್ ತಣ್ಣಗಾಗುವವರೆಗೆ ಇದ್ದು, ಒಂದು ಬಟ್ಟೆಯಲ್ಲಿ ಸೋಸಿಕೊಳ್ಳಿ. ಇದನ್ನು ಒಂದು ಗಾಜಿನ ಬಾಟಲಿನಲ್ಲಿ ಹಾಕಿ ಮುಂದಿನ ಬಳಕೆಗಾಗಿ ಶೇಖರಣೆ ಮಾಡಿ.

ನಿಮ್ಮ ನೆತ್ತಿಯ ಭಾಗಕ್ಕೆ ಈ ಎಣ್ಣೆಯನ್ನು ಹಚ್ಚುವುದರಿಂದ ಮತ್ತು ಮಸಾಜ್ ಮಾಡುವುದರಿಂದ ಅದ್ಭುತ ಪರಿಣಾಮಕಾರಿಯಾದ ಲಾಭಗಳನ್ನು ನೀವು ಕಾಣಬಹುದು.

Leave A Reply

Your email address will not be published.