ʼಕಾಂಡೋಮ್‌ʼ ಸೆಕ್ಸ್‌ಗೆ ಮಾತ್ರವಲ್ಲ, ಇಲ್ನೋಡಿ ಹೀಗೂ ಬಳಸಬಹುದು…

ಕೆಲವೊಂದು ಹೊಸತನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದಾದರೆ ಅಂತಹ ಹೊಸತನ ಒಳ್ಳೆಯದು ಅನಿಸುತ್ತೆ. ಹೌದು ಆಶ್ಚರ್ಯ ಆದರೂ ಸಹ ಇದು ಸತ್ಯ. ಆಧುನಿಕ ಯುಗದಲ್ಲಿ ಯಾವ ವಿಚಾರಕ್ಕು ಮುಜುಗರ ಇಲ್ಲದಂತೆ ಆಗಿದೆ. ಆದರೆ ಕೆಲವೊಂದು ವಿಚಾರದಲ್ಲಿ ಮುಜುಗರ ಇದೆ. ಸದ್ಯ ನಾವು ಇಲ್ಲಿ ಕಾಂಡೋಮ್ ಮುಜುಗರ ಬಗ್ಗೆ ಹೇಳುತ್ತಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕಾಂಡೋಮ್‌ಗಳಿಂದಲೇ ಡಿಸೈನ್‌ ಮಾಡಿರುವ ಕೆಫೆ ಇದೆಯಂತೆ. ಹೌದು ಈ ಕೆಫೆಯಲ್ಲಿ ಎಲ್ಲಿ ನೋಡಿದ್ರೂ ನಿಮಗೆ ಕಣ್ಣಿಗೆ ಕಾಂಡೋಮ್‌ ಬಿಟ್ರೆ ಮತ್ತೇನು ಕಾಣಲ್ಲ.

ಇತ್ತೀಚಿನ ಕೆಫೆಗಳ ಥೀಮ್‌ ವಿಚಾರಕ್ಕೆ ಬಂದ್ರೆ ತುಂಬಾ ಚಿತ್ರ ವಿಚಿತ್ರವಾಗಿರುತ್ತವೆ. ಭಾರತ ಅಷ್ಟೇ ಅಲ್ಲ ವಿವಿಧ ದೇಶಗಳಲ್ಲಿನ ವಿಚಿತ್ರ ಕೆಫೆಗಳ ಐಡಿಯಾ ನೋಡಿ ತಲೆ ತಿರುಗುವಂತಿರುತ್ತವೆ. ಆದ್ರೆ ಈಗಿನ ಯುವಕರಿಗೆ ಈ ತರ ಡಿಫರೆಂಟ್ ಥೀಮ್‌ ಇರೋ ಹೊಟೇಲ್‌ಗಳಂದ್ರೆ ತುಂಬಾ ಇಷ್ಟವಾಗುತ್ತವೆ. ಅದೇ ತರ ಥಾಯ್ಲೆಂಡ್‌ನ ಕೆಫೆಯೊಂದು ಸಂಪೂರ್ಣವಾಗಿ ಕಾಂಡೋಮ್‌ ಮಯವಾಗಿದ್ದು, ಅಲ್ಲಿರುವ ಪ್ರತಿಯೊಂದು ವಸ್ತುವನ್ನು ನಿರೋಧಗಳಿಂದಲೇ ಡಿಸೈನ್‌ ಮಾಡಿದ್ದು, ನೋಡೋಕೆ ಕುತೂಹಲಕಾರಿಯಾಗಿದೆ.

ಈ ಕುರಿತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸೋಹಮ್ ಸಿನ್ಹಾ, ಕಾಂಡೋಮ್‌ ಕೆಫೆಯ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಫೆಯಲ್ಲಿರುವ ಪ್ರತಿಮೆಯ ಉಡುಗೆ, ಸಾಂಟಾ ಕ್ಲಾಸ್ ಗಡ್ಡ, ಕ್ರಿಸ್ಮಸ್ ಮರ, ನೇತಾಡುವ ದೀಪಗಳು ಸೇರಿದಂತೆ ಎಲ್ಲವನ್ನೂ ಸಹ ಕಾಂಡೋಮ್‌ಗಳಿಂದ ಅಲಂಕಾರ ಮಾಡಲಾಗಿದೆ. ಅಲ್ಲದೆ, ಹೂವುಗಳ ಬದಲು ಕಲರ್‌ ಕಲರ್‌ ಕಾಂಡೋಮ್‌ ಬಳಿಸಿ ಹೂವಿನಂತೆ ಆಕೃತಿ ಸಿದ್ಧಪಡಿಸಿ ಟೇಬಲ್‌ ಮೇಲೆ ಇಡಲಾಗಿದೆ.

ಕೆಫೆ ಮಾಲಿಕರ ಉದ್ದೇಶ ಇಷ್ಟೇ ಕಾಂಡೋಮ್ ಬಳಕೆ ಮತ್ತು ಜನ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ಅತಿಥಿಗಳಿಗೆ ಅರಿವು ಮೂಡಿಸುವುದಾಗಿದೆ’ ಎಂದು ಸೋಹಮ್‌ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.

https://www.instagram.com/reel/CmTDgJuqdHs/?utm_source=ig_web_copy_link

ಅಲ್ಲದೆ, ಡಿಸೆಂಬರ್ 19 ರಂದು ಪೋಸ್ಟ್ ಮಾಡಲಾದ ಈ ವೀಡಿಯೊಗೆ ಸುಮಾರು 5ಲಕ್ಷಕ್ಕೂ ಹೆಚ್ಚು ವೀವ್ಸ್ ಮತ್ತು ಲಕ್ಷಾಂತರ ಕಾಮೆಂಟ್‌ಗಳು ಬಂದಿವೆ. ಅನೇಕ ಇನ್‌ಸ್ಟಾಗ್ರಾಮ್‌ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಕೆಫೆ ಒಮ್ಮೆ ಭೇಟಿ ಮಾಡಲೇ ಬೇಕು ಅಂತಾ ಜನರು ಹಾತೊರೆಯುತ್ತಿದ್ದಾರೆ.

Leave A Reply

Your email address will not be published.