LPG Price : LPG ಸಿಲಿಂಡರ್‌ ಬೆಲೆಯ ಕುರಿತು ಸಾರ್ವಜನಿಕರಿಗೆ ಮಹತ್ವದ ಮಾಹಿತಿ |ಹೊಸ ವರ್ಷಕ್ಕೆ ದೊರಕಲಿದೆ ಗುಡ್‌ನ್ಯೂಸ್‌

ದಿನೇ ದಿನೇ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗುತ್ತಲೇ ಇದೆ. ಜನರಿಗೆ ಬೆಲೆ ಏರಿಕೆ ಯಿಂದ ಅಸಮಾಧಾನ ಉಂಟಾಗಿದೆ. ಸದ್ಯ ಈ ‌ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿ ಸಿಗಲಿದೆ. ಹೌದು ಈ ವರ್ಷದ ಜುಲೈನಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ಇದೆ.

ಸದ್ಯ ಇದೀಗ ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂ. ಆಗಿದ್ದು , ಆದರೆ ಹೊಸ ವರ್ಷದಲ್ಲಿ, ಎಲ್‌ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾಯಿತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲದಿರುವುದು ಈಗಾಗಲೇ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತದೆ ಮತ್ತು ಇಳಿಯುತ್ತವೆ.

ಸದ್ಯ ತೈಲ ಮತ್ತು ಅನಿಲದ ಬೆಲೆಯನ್ನು ನಿಗದಿಪಡಿಸುವ ಹಕ್ಕನ್ನು ಸರ್ಕಾರವು ಸರ್ಕಾರಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೆ ನೀಡಿದೆ. ಈ ಕಂಪನಿಗಳು ಜುಲೈ 6, 2022 ರಿಂದ LPG ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದೇ ಅವಧಿಯಲ್ಲಿ ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಶೇಕಡಾ 30 ರಷ್ಟು ಕುಸಿದಿದೆ. ಅಂದರೆ ಕಂಪನಿಗಳು ತೈಲ ಮತ್ತು ಅನಿಲವನ್ನು ಅತ್ಯಂತ ಅಗ್ಗವಾಗಿ ಖರೀದಿಸಿ ಜನರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ.

ಅಕ್ಟೋಬರ್ 2022 ರಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $85 ಆಗಿತ್ತು. ಆ ಸಮಯದಲ್ಲಿ, LPG ಸಿಲಿಂಡರ್ ರೂ.899 ಕ್ಕೆ ದೇಶದಲ್ಲಿ ಲಭ್ಯವಿತ್ತು. ಅಂದಿನಿಂದ ಇಲ್ಲಿಯವರೆಗೆ ಸರ್ಕಾರ ಈ ಬೆಲೆಯನ್ನು ಸುಮಾರು 150 ರೂಪಾಯಿಗಳಷ್ಟು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಈಗ ಪ್ರತಿ ಬ್ಯಾರೆಲ್‌ಗೆ 83 ಡಾಲರ್‌ಗೆ ಇಳಿದಿದೆ. ಅಂದರೆ, ಅಕ್ಟೋಬರ್ 2021 ರಿಂದಲೂ ತೈಲ ಬೆಲೆ ಕಡಿಮೆಯಾಗಿದೆ. ಅದರಂತೆ, ಹೊಸ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 150 ರೂ.ವರೆಗೆ ಕಡಿತವನ್ನು ಸರ್ಕಾರ ಘೋಷಿಸುವ ಸಾಧ್ಯತೆಯಿದೆ.

ಬರುವ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೆಹ್ಲೋಟ್ ಸರ್ಕಾರ ದೊಡ್ಡ ಪಣತೊಟ್ಟಿದೆ. ಏಪ್ರಿಲ್ 1, 2023 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳು ರಾಜಸ್ಥಾನದ ಜನರಿಗೆ ರೂ.500 (ಎಲ್‌ಪಿಜಿ ಬೆಲೆ) ಗೆ ಲಭ್ಯವಾಗಲಿವೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. ಜೈಪುರದಲ್ಲಿ ಪ್ರಸ್ತುತ ಎಲ್‌ಪಿಜಿ ಸಿಲಿಂಡರ್ ಬೆಲೆ 1056 ರೂ. ಅದೇನೆಂದರೆ, ಗೆಹ್ಲೋಟ್ ಸರ್ಕಾರವು ಮುಂದಿನ ವರ್ಷಎಲ್‌ಪಿಜಿ ಸಿಲೆಂಡರ್‌ಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಜನರಿಗೆ ಲಭ್ಯವಾಗುವಂತೆ ಮಾಡಲಿದೆ.

ಪ್ರಸ್ತುತ ಗ್ಯಾಸ್ ಸಿಲಿಂಡರ್ ಮುಂಬೈನಲ್ಲಿ 1052.50 ರೂ., ಕೋಲ್ಕತ್ತಾದಲ್ಲಿ 1079 ರೂ., ದೆಹಲಿಯಲ್ಲಿ 1053 ರೂ., ಪಾಟ್ನಾದಲ್ಲಿ 1151 ರೂ., ಲಕ್ನೋದಲ್ಲಿ 1090 ರೂ. ಮತ್ತು ಚೆನ್ನೈನಲ್ಲಿ 1068 ರೂ.ಗೆ ಲಭ್ಯವಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದೀಗ ರಾಜಸ್ಥಾನ ಸರ್ಕಾರದ ಈ ಪಣತೊಟ್ಟು ಕೇಂದ್ರ ಸರ್ಕಾರದ ಮೇಲೆ ಎಲ್‌ಪಿಜಿ ಬೆಲೆ ಇಳಿಸುವಂತೆ ಒತ್ತಡ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಬಹುದು ಎಂಬ ಸಾಧ್ಯತೆಯಿದೆ.

Leave A Reply

Your email address will not be published.