300GB ಡೇಟಾ ಜೊತೆಗೆ ಫ್ರೀ ನೆಟ್‌ಫಿಕ್ಲ್ಸ್‌ ಮತ್ತು ಪ್ರೈಮ್‌ ವೀಡಿಯೋ – ಜಿಯೋದ ಈ ಪ್ಲ್ಯಾನ್‌ ಬೆಲೆ ವಿವರ ಇಲ್ಲಿದೆ

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಹಲವು ಉತ್ತಮ ಪ್ರಿಪೇಯ್ಡ್ ಯೋಜನೆ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಪ್ರಯೋಜನದ ವಿಷಯದಲ್ಲಿ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಕೂಡ ಉತ್ತಮವಾಗಿವೆ. ಹೆಚ್ಚಿನ ಡೇಟಾದ ಪ್ರಯೋಜನ ಬೇಕು ಎನ್ನುವುದಾದರೆ ನೀವು ಜಿಯೋದ ರೂ 1499 ಪೋಸ್ಟ್ಪೇಯ್ಡ್ ಯೋಜನೆಗೆ ಚಂದಾದಾರ ರಾಗಬಹುದಾಗಿದೆ.

ಈ ರಿಲಯನ್ಸ್ ಜಿಯೋ (Reliance Jio) ಯೋಜನೆಯಲ್ಲಿ ಕಂಪನಿಯು ಇಂಟರ್ನೆಟ್ ಬಳಕೆಗಾಗಿ 300 GB ಡೇಟಾವನ್ನು ನೀಡುತ್ತಿದೆ. ಈ ಯೋಜನೆಯು 500GB ವರೆಗಿನ ಡೇಟಾ ರೋಲ್ಓವರ್ ಪ್ರಯೋಜನ ಕೂಡ ದೊರೆಯಲಿದೆ.

ರಿಲಯನ್ಸ್ ಜಿಯೋ (Reliance Jio)​ ಪ್ರಿಪೇಯ್ಡ್ ಯೋಜನೆ

ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ ನೀವು ದೇಶಾದ್ಯಂತ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಂಎಸ್ ಪ್ರಯೋಜನ ಲಭ್ಯವಿದೆ

ಅಷ್ಟೆ ಅಲ್ಲದೆ, ಯೋಜನೆಯಲ್ಲಿ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಇದು Amazon Prime ಗೆ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ಕೂಡ ಒಳಗೊಂಡಿದೆ. ಇದಲ್ಲದೆ ಕಂಪನಿಯು ಈ ಯೋಜನೆಯೊಂದಿಗೆ ನೆಟ್ ಫ್ಲಿಕ್ಸ್ ಮೊಬೈಲ್ ಯೋಜನೆಗೆ ಉಚಿತ ಚಂದಾದಾರಿಕೆಯನ್ನು ಕೂಡ ಪಡೆಯಬಹುದು.

ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯ ಚಂದಾದಾರರಿಗೆ ಅಮೆಜಾನ್ ಪ್ರೈಮ್ಗೆ ಉಚಿತ ಪ್ರವೇಶವನ್ನು ಪಡೆಯುವ ಅವಕಾಶ ಲಭ್ಯವಾಗಲಿದೆ. ಈ ಯೋಜನೆಯು ಎರಡು ಹೆಚ್ಚುವರಿ ಸಿಮ್ ಕಾರ್ಡ್ಗಳೊಂದಿಗೆ ಬರುತ್ತದೆ. ಇಂಟರ್ನೆಟ್ ಅನ್ನು ಬಳಸಲು ನೀವು 200 GB ಡೇಟಾ ರೋಲ್ಓವರ್ನೊಂದಿಗೆ ಒಟ್ಟು 150 GB ಡೇಟಾವನ್ನು ಪಡೆಯಬಹುದು.

ಕಂಪನಿಯ ಈ ಯೋಜನೆಯ ಮೂಲಕ ಅನಿಯಮಿತ ಕರೆ ಮತ್ತು ಪ್ರತಿದಿನ 100 ಉಚಿತ SMS ಪಡೆಯಬಹುದಾಗಿದೆ. ಈ ಯೋಜನೆಯು ನೆಟ್ಫ್ಲಿಕ್ಸ್ (ಮೊಬೈಲ್ ಯೋಜನೆ) ಮತ್ತು ಅಮೆಜಾನ್ ಪ್ರೈಮ್ಗೆ ಉಚಿತ ಚಂದಾದಾರಿಕೆಯನ್ನು ಕೂಡ ನೀಡುತ್ತದೆ.

ಜಿಯೋ (Jio) ರೂ 999 ಯೋಜನೆಯಲ್ಲಿ Netflix ಉಚಿತ

ಈ ರಿಲಯನ್ಸ್ ಜಿಯೋ (Reliance Jio) ಪೋಸ್ಟ್ಪೇಯ್ಡ್ ಯೋಜನೆಯು 3 ಹೆಚ್ಚುವರಿ ಸಿಮ್ ಕಾರ್ಡ್ಗಳೊಂದಿಗೆ ಲಭ್ಯವಾಗಲಿದೆ. ಇಂಟರ್ನೆಟ್ ಬಳಕೆಗಾಗಿ ಯೋಜನೆಯು ಸಂಪೂರ್ಣ ಬಿಲ್ ಸೈಕಲ್ಗೆ ಒಟ್ಟು 200GB ಡೇಟಾವನ್ನು ಪಡೆಯಬಹುದು.

ಈ ಯೋಜನೆಯಲ್ಲಿ ಕಂಪನಿಯು 500 GB ವರೆಗೆ ಡೇಟಾ ರೋಲ್ಓವರ್ ಅನ್ನು ನೀಡುತ್ತಿದೆ. ಕಂಪನಿಯು ಈ ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಜೊತೆಗೆ ಅನಿಯಮಿತ ಕರೆಯ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ವೈಶಿಷ್ಟ್ಯ ನೋಡಿದರೆ ನೀವು ನೆಟ್ಫ್ಲಿಕ್ಸ್ ಮೊಬೈಲ್ ಪ್ಲಾನ್ ಅನ್ನು ಉಚಿತವಾಗಿ ಪಡೆಯಬಹುದು.

Leave A Reply

Your email address will not be published.