Laptop : ಲ್ಯಾಪ್‌ಟಾಪ್‌ ಖರೀದಿಸುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಮೊದಲು ಈ ಕೆಲಸ ಮಾಡಿ

ಕೋರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ವರ್ಕ್ ಫ್ರಮ್ ಹೋಮ್ ಎನ್ನುವ ಕಾನ್ಸೆಪ್ಟ್ ಬಂದು ಹೆಚ್ಚಿನವರು  ಲ್ಯಾಪ್ಟಾಪ್ಗಳನ್ನು ಹಿಡಿದು ಆಫೀಸ್ ಕೆಲಸದಲ್ಲಿ ತೊಡಗಿಕೊಂಡಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಕಾರ್ಯಗಳನ್ನು ಮಾಡಬೇಕಾದರೂ ಸಹ ಲ್ಯಾಪ್​ಟಾಪ್​ಗಳು ಅವಶ್ಯಕವಾಗಿದೆ.

ಲ್ಯಾಪ್​ಟಾಪ್​  ಇಂದಿನ ಡಿಜಿಟಲ್ ಯುಗದಲ್ಲಿ ಎಲೆಕ್ಟ್ರಾನಿಕ್ಸ್​ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವಂತಹ ಸಾಧನವಾಗಿದ್ದು, ಆದರೆ, ಕೆಲವೊಂದು ಲ್ಯಾಪ್​ಟಾಪ್​ಗಳು ಅಂದುಕೊಂಡ ಹಾಗೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ,  ಖರೀದಿ ಮಾಡುವಾಗ ಫೀಚರ್ ಬಗ್ಗೆ ತಿಳಿದುಕೊಂಡು ಖರೀದಿ ಮಾಡುವುದು ಅವಶ್ಯಕ.

ಚಿಕ್ಕ ಮಕ್ಕಳಿಂದ ಹಿಡಿದು ಆಫೀಸ್​ ಕೆಲಸದವರೆಗೂ ಪ್ರತಿಯೊಬ್ಬರಿಗೂ ಲ್ಯಾಪ್ ಟಾಪ್ ಗಳ  ಅವಶ್ಯಕತೆ ತಲೆದೋರಿದ್ದು, ಇದೀಗ, ಅತ್ಯುತ್ತಮ ಲ್ಯಾಪ್​ಟಾಪ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.  ಆದರೆ ಕೆಲವೊಂದು ಲ್ಯಾಪ್​ಟಾಪ್​ಗಳು  ಕಾರಣಾಂತರಗಳಿಂದ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮತ್ತೆ  ಕೆಲವು  ಲ್ಯಾಪ್​ಟಾಪ್​ಗಳು ಉತ್ತಮ ಫೀಚರ್ಸ್ ಅನ್ನು ಒಳಗೊಂಡಿರುತ್ತದೆ. ಆದರೆ, ಇನ್ಮುಂದೆ ಲ್ಯಾಪ್ ಟಾಪ್ ಖರೀದಿ ಮಾಡುವ ಮೊದಲೇ ಸೀರಿಸ್​ ನಂಬರ್​ ಮೂಲಕ ಗ್ರಾಹಕರಿಗೆ ಮಾಹಿತಿ ದೊರೆಯಲಿದೆ.

ಈಗ ಹಲವಾರು ಕಂಪನಿಗಳು ಲ್ಯಾಪ್​ಟಾಪ್​ಗಳನ್ನು ಬಿಡುಗಡೆ ಮಾಡುವುದರಿಂದ, ಹೆಚ್ಚಿನ ಕಂಪೆನಿಗಳು ತನ್ನ ಸಾಧನವನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ಫೀಚರ್ ಗಳನ್ನು ಒಳಗೊಂಡ ಲ್ಯಾಪ್​ಟಾಪ್ಸ್​ಗಳನ್ನು ಬಿಡುಗಡೆ ಮಾಡುತ್ತವೆ. ಆದರೆ ಪ್ರತಿಯೊಂದು ಲ್ಯಾಪ್​ಟಾಪ್​ಗಳು ಬೇರೆ ಬೇರೆ ರೀತಿಯ ಫೀಚರ್ಸ್​ಗಳನ್ನು ಹೊಂದಿರುತ್ತವೆ.

ಇದೀಗ,  ಲ್ಯಾಪ್​​ಟಾಪ್​ ನಮ್ಮ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿದ್ದು,  ಆಫೀಸ್ ಕೆಲಸವಾಗಲಿ ಇಲ್ಲವೇ ವ್ಯವಹಾರದ ಕೆಲಸವಾಗಲೀ ಅಥವಾ ಶಾಲೆ, ಕಾಲೇಜಿನಲ್ಲಿ ಯಾವುದೇ ಪ್ರಾಜೆಕ್ಟ್​​ಗಳನ್ನು ಮಾಡಬೇಕಾದರೂ ಲ್ಯಾಪ್‌ಟಾಪ್‌ ಅನ್ನು ಬಳಕೆ ಮಾಡುವವರೇ ಹೆಚ್ಚು. ಆದರೆ, ನಮ್ಮ ಅಗತ್ಯಕ್ಕೆ ತಕ್ಕಂತೆ ಯಾವ ಲ್ಯಾಪ್‌ಟಾಪ್ ಖರೀದಿಸಬೇಕು ಎಂಬ ವಿಚಾರ ಅನೇಕರಿಗೆ  ತಿಳಿದಿಲ್ಲ.

ನಿಮ್ಮ ಕೆಲಸಕ್ಕೆ ಯಾವ ಲ್ಯಾಪ್‌ಟಾಪ್ ಸೂಕ್ತ ಎಂದು ತಿಳಿಯುವುದು ಹೇಗೆ? ಲ್ಯಾಪ್‌ಟಾಪ್‌ನ ಪ್ರೊಸೆಸರ್ ಅಥವಾ ಚಿಪ್​ಸೆಟ್​ ಹೇಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯಕ.

ಲ್ಯಾಪ್‌ಟಾಪ್ ಪ್ಯಾಕಿಂಗ್ ಅನ್ನು ತೆರೆಯದೆಯೇ ಪ್ರೊಸೆಸರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನಾವು ತಿಳಿಯಬಹುದಾಗಿದೆ. ಇಂಟೆಲ್‌ನ 12 ನೇ ಚಿಪ್ ಸೆಟ್ ಮೂಲಕ ಲ್ಯಾಪ್‌ಟಾಪ್‌ನ ಕಾರ್ಯ ನಿರ್ವಹಿಸುವ ಬಗ್ಗೆ ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.

ಪ್ರತಿಯೊಂದು ಲ್ಯಾಪ್‌ಟಾಪ್ ಪ್ಯಾಕೆಟ್ ಚಿಪ್‌ಸೆಟ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಈ ಮೂಲಕ ಲ್ಯಾಪ್​ಟಾಪ್​ ಹೇಗಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಆ ಸಂಖ್ಯೆಯ ಕೊನೆಯಲ್ಲಿ ನೀವು ಆಲ್ಫಾ H, P ಅಥವಾ U ಎಂದು ಅಕ್ಷರಗಳನ್ನು ಗಮನಿಸಬಹುದಾಗಿದ್ದು, ಇದು ನೀವು ಖರೀದಿಸುವಂತಹ ಲ್ಯಾಪ್ ಟಾಪ್ ನ  ಗುಣಮಟ್ಟವನ್ನು ತಿಳಿಸುತ್ತದೆ.

ಲ್ಯಾಪ್​ಟಾಪ್​ನಲ್ಲಿ ನೀಡಿರುವಂತಹ ಸಂಖ್ಯೆಗಳನ್ನು ಸೀರಿಸ್​ ನಂಬರ್​ ಎನ್ನಲಾಗುತ್ತದೆ. ಈ ನಂಬರ್​ನ ಕೊನೆಯಲ್ಲಿ ಬರೆಯಲಾದ H ಅನ್ನು ಹೊಂದಿರುವ ಸೀರಿಸ್​ ಸಂಖ್ಯೆಯು ಉನ್ನತ-ಶ್ರೇಣಿಯ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ.  ಈ ಲ್ಯಾಪ್​ಟಾಪ್​ನ ಕಾರ್ಯವೈಖರಿಯ ವೇಗ ಜೊತೆಗೆ  ಗ್ರಾಫಿಕ್ಸ್ ಎಲ್ಲವೂ ಉನ್ನತ ಮಟ್ಟದಲ್ಲಿವೆ ಎಂಬುದನ್ನು ಸೂಚಿಸುತ್ತದೆ. ಇದಲ್ಲದೆ  ಗೇಮಿಂಗ್ ಹಾಗೂ ಬಹುತೇಕ ಎಲ್ಲಾ ಅಗತ್ಯ ಕೆಲಸಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಲ್ಯಾಪ್‌ಟಾಪ್ ಅದರ ಚಿಪ್‌ಸೆಟ್‌ನ ಕೊನೆಯಲ್ಲಿ U ಎಂದು ಬರೆದಿದ್ದರೆ, ಅಂತಹ ಲ್ಯಾಪ್‌ಟಾಪ್ ಉತ್ತಮ ಬ್ಯಾಟರಿಯನ್ನು ಒಳಗೊಂಡಿದ್ದು, ಇತರೆ ಫೀಚರ್ ಗಳು ಕೂಡ  ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಆದರೆ, ಪ್ರೊಸೆಸರ್ ಅಷ್ಟೊಂದು ಶಕ್ತಿಯುತವಾಗಿಲ್ಲ ಎಂಬುದನ್ನು ಗಮನಿಸಬೇಕು.  ಅಂದರೆ, ನೀವು ಎಡಿಟಿಂಗ್​  ರೀತಿಯ ಕೆಲಸಗಳನ್ನು ಮಾಡಲು ಕಷ್ಟ ಎನ್ನಬಹುದು. ಶಾಲೆಯ ಪ್ರಾಜೆಕ್ಟ್ ವರ್ಕ್, ಆನ್‌ಲೈನ್ ತರಗತಿಗಳನ್ನು ಮಾಡಲು ಈ ಲ್ಯಾಪ್​ಟಾಪ್​ ನೆರವಾಗಲಿದೆ.

ಒಂದು ವೇಳೆ ಸೀರಿಸ್​ ನಂಬರ್​​ನ ಕೊನೆಯಲ್ಲಿ P ಎಂದು ಬರೆದಿದ್ದರೆ, ಈ ಲ್ಯಾಪ್​ಟಾಪ್​ನ ಚಿಪ್​​ಸೆಟ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಜೊತೆಗೆ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿರುತ್ತದೆ. ಆದರೆ ಇದರ ಗ್ರಾಫಿಕ್ಸ್ ಅಷ್ಟು ಉತ್ತಮವಾಗಿವುದಿಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದ ಈ ಲ್ಯಾಪ್‌ಟಾಪ್ ಗೇಮರ್ಸ್​​ಗಳಿಗೆ ಪ್ರಯೋಜನಕ್ಕೆ ಬಾರದು. ಆದರೆ ಇದು ಆಫೀಸ್​ ಕೆಲಸಗಳಿಗೆ ಉಪಯುಕ್ತವಾಗಿದೆ ಎಂಬುದನ್ನು ಗಮನಿಸಬೇಕು.

Leave A Reply

Your email address will not be published.