ನಿಮ್ಮಲ್ಲಿ ಇಂತಹ ಗುಣಗಳಿದ್ದರೆ ಲಕ್ಷ್ಮೀ ದೂರ ಉಳಿಯುತ್ತಾಳೆ

ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ಹಿಂದೂ ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ. ಅದಲ್ಲದೆ ನಿಯಮ ಪ್ರಕಾರ ನಮ್ಮ ಜೀವನದ ಪ್ರತಿಯೊಂದು ಆಗು ಹೋಗುಗಳ ಬಗೆಗಿನ ಶುಭ ಅಶುಭ ಗಳನ್ನು ನಾವು ಶಾಸ್ತ್ರ ಮೂಲಕ ತಿಳಿದುಕೊಳ್ಳಬಹುದು. ಶಾಸ್ತ್ರ ಎನ್ನುವುದು ಪುರಾಣ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಹಾಗೆಯೇ ಗರುಡ ಪುರಾಣದಲ್ಲಿ ಜೀವನದ ಪ್ರಕ್ರಿಯೆಗಳಲ್ಲಿ ಶುಭ ಅಶುಭ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ.

 

ಹೌದು ಹಿಂದೂ ಧರ್ಮದಲ್ಲಿ ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣದಲ್ಲಿ ಜೀವನದ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಅದನ್ನು ಅನುಸರಿಸಿಕೊಂಡು ನಡೆದರೆ ಮನೆಯಲ್ಲಿ ಅಪಾರ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ. ಇದರೊಂದಿಗೆ, ಕೆಲವು ಅಭ್ಯಾಸಗಳನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ. ಯಾಕೆಂದರೆ ವ್ಯಕ್ತಿಯ ಈ ಕೆಟ್ಟ ಅಭ್ಯಾಸಗಳು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಲಕ್ಷ್ಮೀ ದೇವಿ ಕೋಪಗೊಂಡರೆ ಜೀವನದಲ್ಲಿ ಹಣದ ಕೊರತೆ ಎದುರಾಗಲು ಆರಂಭವಾಗುತ್ತದೆ ಎನ್ನಲಾಗಿದೆ.

ಲಕ್ಷ್ಮೀ ಮಾತೆ ಕೋಪಗೊಳ್ಳುವಂತೆ ಮಾಡುವ ಅಭ್ಯಾಸಗಳು :

  • ಸೂರ್ಯೋದಯದ ನಂತರವೂ ಮಲಗುವ ಜನರು ಜೀವನದಲ್ಲಿ ಸಂತೋಷ, ಯಶಸ್ಸು, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಆನಂದಿಸಲು ಸಾಧ್ಯವಿಲ್ಲ. ಈ ಜನರು ತಮ್ಮ ಜೀವನವನ್ನು ದುಃಖ ಮತ್ತು ಬಡತನದಲ್ಲಿ ಕಳೆಯುತ್ತಾರೆ.
  • ಸೂರ್ಯಾಸ್ತದ ಸಮಯದಲ್ಲಿ ಮಲಗುವ ಜನರ ಮೇಲೆ ಲಕ್ಷ್ಮೀ ಕೋಪಗೊಳ್ಳುತ್ತಾಳೆ. ಅಂಥವರ ಮನೆಯಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಇನ್ನು ಮುಸ್ಸಂಜೆಯ ಹೊತ್ತಿನಲ್ಲಿ ಮನೆಗೆ ಲಕ್ಷ್ಮೀ ಪ್ರವೇಶ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಯಾರು ಈ ಹೊತ್ತಿನಲ್ಲಿ ಮಲಗುತ್ತಾರೆಯೋ ಅವರ ಮೇಲೆ ಕೂಡಾ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.
  • ಇತರರೊಂದಿಗೆ ಕಟುವಾಗಿ ಮಾತನಾಡುವವರನ್ನು ಲಕ್ಷ್ಮೀ ಎಂದಿಗೂ ಇಷ್ಟಪಡುವುದಿಲ್ಲ. ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀ ಕೆಟ್ಟ ಮಾತುಗಳನ್ನು ಆಡುವ ಜನರ ಮೇಲೆ ಎಂದಿಗೂ ಕರುಣೆ ತೋರಿಸುವುದಿಲ್ಲ. ಈ ಕಾರಣದಿಂದ ಸಭ್ಯರಾಗಿರುವಂತೆ ಹೇಳಲಾಗಿದೆ.
  • ಕೊಳಕು ಬಟ್ಟೆ ಧರಿಸಿ ಕೊಳಕಾಗಿ ಬದುಕುವವರ ಮೇಲೆ ತಾಯಿ ಲಕ್ಷ್ಮೀ ಸದಾ ಕೋಪದಿಂದ ಇರುತ್ತಾಳೆ. ಅವರ ಜೀವನದಲ್ಲಿ ತಾಯಿ ಲಕ್ಷ್ಮೀ ಆಶೀರ್ವಾದ ಇರುವುದೇ ಇಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಇಲ್ಲ ಎಂದಾದರೆ ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಸುಖ, ಸಮೃದ್ಧಿ ಇರುವುದಿಲ್ಲ. ಲಕ್ಷ್ಮೀ ಇಂಥಹ ಜನರನ್ನು ಎಂದಿಗೂ ಆಶೀರ್ವದಿಸುವುದಿಲ್ಲ. ಅದಕ್ಕಾಗಿಯೇ ಪ್ರತಿದಿನ ಸ್ನಾನ ಮಾಡಬೇಕು. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಲಾಗಿದೆ.

ಈ ರೀತಿಯಾಗಿ ಗರುಡ ಪುರಾಣದಲ್ಲಿ ವ್ಯಕ್ತಿಯ ಈ ಕೆಟ್ಟ ಅಭ್ಯಾಸಗಳು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.