ಹಾವನ್ನು ನುಂಗುತ್ತಿರುವ ಕಪ್ಪೆ, ಬಂದೇ ಬಿಡ್ತು ಬೆಕ್ಕು…ಆದರೆ ಅಲ್ಲೇ ಪಕ್ಕದಲ್ಲಿತ್ತು ಮಗು…ಮುಂದೇನಾಯ್ತು?

ಕೆಲವೊಂದು ಘಟನೆಗಳು ಊಹಿಸಲು ಸಾಧ್ಯ ಆಗದೆ ಇದ್ದರೂ ಸಹ ಪ್ರತ್ಯಕ್ಷ ನೋಡಿದ ಮೇಲೆ ನಂಬಲೇ ಬೇಕಾಗುತ್ತದೆ. ಪ್ರಕೃತಿ ಕ್ರಿಯೆ ವಿರುದ್ಧ ಕೆಲವೊಂದು ಘಟನೆ ಅಲ್ಲಿ ಇಲ್ಲಿ ನಡೆಯುತ್ತಾ ಇರುವುದು ನೋಡಿದ್ದೇವೆ ಕೇಳಿದ್ದೇವೆ. ಹಾಗೆಯೇ ಇದೀಗ ಹಾವು, ಕಪ್ಪೆ, ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಸಾಮಾನ್ಯವಾಗಿ ಹಾವುಗಳು ಮಾತ್ರ ಕಪ್ಪೆಗಳನ್ನು ಬೇಟೆಯಾಡುತ್ತವೆ. ಆದರೆ ಈ ವಿಡಿಯೋದಲ್ಲಿ ಆಟ ತಲೆಕೆಳಗಾಗಿದೆ. ಕಪ್ಪೆ ಹಾವನ್ನು ಹಿಡಿದು ಅದರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುವುದನ್ನು ನಾವು ಇಲ್ಲಿ ನೋಡಬಹುದು. ಆದರೆ ಇದರ ನಂತರ ಕಂಡದ್ದು ಇನ್ನಷ್ಟು ಬೆರಗುಗೊಳಿಸುತ್ತದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಾವನ್ನು ನೋಡಿದ ತಕ್ಷಣ ಕಪ್ಪೆ ಅದರ ಮೇಲೆ ಎರಗುತ್ತದೆ ನಂತರ ಹಾವಿನ ಬಾಲವನ್ನು ತನ್ನ ಬಾಯಿಯಲ್ಲಿ ಒತ್ತಿ ಹಿಡಿದು ಕುಳಿತುಕೊಳ್ಳುತ್ತದೆ. ಹಾವು ಅದರ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತದೆ. ಆದರೆ ನಂತರ ಬೆಕ್ಕು ಕೂಡ ಅಲ್ಲಿಗೆ ಬಂದು ಹಾವಿನ ಬಾಯಿಯನ್ನು ಹಿಡಿಯಲು ಪ್ರಾರಂಭಿಸುತ್ತದೆ. ಆದರೆ ಹಾವಿನ ಪ್ರತೀಕಾರದ ದಾಳಿಯಿಂದಾಗಿ ಬೆಕ್ಕು ಹೆದರುತ್ತದೆ. ಈ ದೃಶ್ಯವನ್ನು ಆರಾಮವಾಗಿ ಆನಂದಿಸುತ್ತಿರುವ ಮಗು ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಹಾವು ಮತ್ತು ಕಪ್ಪೆಯ ಕಾದಾಟಕ್ಕೆ ಸಂಬಂಧಿಸಿದ ಈ ವಿಡಿಯೋವನ್ನು @weirdterrifying ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಸೆಕೆಂಡುಗಳ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದಲ್ಲದೆ ಈ ದೃಶ್ಯ ನೋಡಿದಾಗ ಆಶ್ಚರ್ಯ ಅನಿಸುವುದು ಖಂಡಿತ ಎಂದು ಹಲವಾರು ಜನ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.