Covid School Guidelines: ರುಪ್ಸಾ ಮಹತ್ವದ ನಿರ್ಧಾರ – ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ

ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿರುವುದು ಈಗಾಗಲೇ ತಿಳಿದಿರುವ ವಿಚಾರ. ಸೋಂಕು ಹರಡಿ ಅದೆಷ್ಟೋ ಮಂದಿ ಮೃತಪಟ್ಟರು, ಇನ್ನದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ನರಳಾಡಿದರು. ಇನ್ನೇನು ಕೊರೋನ ಭಯದಿಂದ ಚೇತರಿಕೆ ಕಾಣುವಷ್ಟರಲ್ಲಿ ಕೊರೋನ ದ BF.7 ಉಪತಳಿ ಕಂಡು ಬಂದಿದೆ.

ಈ ಕುರಿತಾಗಿ ಕೊರೊನಾ ತನ್ನ ಅಸ್ತಿತ್ವ ತೋರುತ್ತಿರುವ ಈ ವೇಳೆ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.
ಹಾಗಾಗಿ ಸರ್ಕಾರದ ಗೈಡ್ಸ್ ಲೈನ್ಸ್ ಬಿಡುಗಡೆಗೂ ‌ಮುನ್ನವೇ ಖಾಸಗಿ ಶಾಲೆ ರುಪ್ಸಾ ಮಹತ್ವದ ನಿರ್ಧಾರ ಕೈಗೊಂಡಿದೆ.

ರುಪ್ಸಾ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯಮಾಡಲು ಇದೀಗ ನಿರ್ಧಾರ ಕೈಗೊಳ್ಳಲಾಗಿದೆ. ಹೌದು ಕೊರೋನಾ ಕುರಿತು ‌ಪೋಷಕರಿಂದ ನಿತ್ಯ ಶಾಲಾ ಮುಖ್ಯಸ್ಥರಿಗೆ ನೂರಾರು ಕರೆಗಳು ಬರಲು ಆರಂಭವಾಗಿದ್ದು ಮುಂಜಾಗೃತಾ ಕ್ರಮ ವಹಿಸಲಾಗಿದೆ.

ಇಂದು ಖಾಸಗಿ ಶಾಲೆ ಆಡಳಿತ ಮಂಡಳಿಗಳ ಜೊತೆ ರುಪ್ಸಾ ಪದಾಧಿಕಾರಿಗಳ ಸಭೆ ನಡೆಸಲಾಗಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಪದಾಧಿಕಾರಿಗಳ ಸಭೆಯಲ್ಲಿ ಕೊರೊನಾ ಕುರಿತು ಚರ್ಚೆ ಮಾಡಿದ್ದಾರೆ.
ಸಭೆಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಮಾಡುವುದು ಹಾಗೂ ಸಾಮಾಜಿಕ ಅಂತರದ ಬಗ್ಗೆ ಚರ್ಚೆಯಾಗಿದ್ದು ಅವಶ್ಯಕತೆ ಇದ್ರೆ ಆನ್ ಲೈನ್ ಕ್ಲಾಸ್ ತರಗತಿ ನಡೆಸುವ ಬಗ್ಗೆ ಚರ್ಚೆಯಾಗಿದೆ.

ಸದ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಜಾರಿಗೆ ನಿರ್ಧಾರ ಮಾಡಲಾಗಿದ್ದು. ಈ ಮುಂಜಾಗೃತಾ ಕ್ರಮ ಸೂಕ್ತ ಆಗಿದ್ದು . ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಇದು ಉತ್ತಮವಾಗಿದೆ ಅಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಅದಲ್ಲದೆ ಸಾಮಾಜಿಕ ಅಂತರ ಪಾಲನೆ ಮಾಡಲು ಸಹ ಸೂಚನೆ ಹೊರಡಿಸಲಾಗಿದೆ.
ಅದಲ್ಲದೆ ಸದ್ಯ ನೆಗಡಿ, ಕೆಮ್ಮು, ಜ್ವರ ಅಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಟೆಸ್ಟಿಂಗ್ ‌ಮಾಡಿಸಲು ಸೂಚನೆ ನೀಡಲಾಗಿದೆ.

ಸದ್ಯ ರುಪ್ಸಾ ಸಂಘಟನೆ ಅಡಿಯಲ್ಲಿ ರಾಜ್ಯದಲ್ಲಿ 13 ಸಾವಿರ ಶಾಲೆಗಳು ನೋಂದಣಿಯಾಗಿದೆ. ನಾಳೆಯಿಂದಲೇ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧಾರ ಮಾಡಲಾಗಿದೆ. ಪಬ್ಲಿಕ್ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆ ನಡೆಸುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪೋಷಕರು ಸಹ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಮಕ್ಕಳ ಆರೋಗ್ಯ ಬಗೆಗಿನ ಶಿಕ್ಷಕರ ಜವಾಬ್ದಾರಿಗೆ ನಿರಾಳಗೊಂಡಿದ್ದಾರೆ.

Leave A Reply

Your email address will not be published.