BSNL Reacharge Plans: ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗೆ ಬಂತು ನೋಡಿ ಬಿಎಸ್‌ಎನ್‌ಎಲ್‌ನ ಹೊಸ ರೀಚಾರ್ಜ್ ಪ್ಲಾನ್ಸ್
ಬಿಎಸ್ಎನ್ಎಲ್ ನ್ನು ಬಳಸುತ್ತಿದ್ದರೆ ನಿಮಗೆ ಬಂಪರ್ ಆಫರ್ ನೀಡಲಾಗಿದೆ. ಹೌದು ಬಿಎಸ್ಎನ್ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದೆ. ಟೆಲಿಕಾಂ ಕಂಪನಿಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ಗಳನ್ನು ಜನರಿಗೆ ನೀಡುವ ಕಂಪನಿಯೆಂದರೆ ಅದು ಬಿಎಸ್ಎನ್ಎಲ್ ಮಾತ್ರ. ಅದೇ ರೀತಿ ಇದು ದೇಶದ ಹಲವೆಡೆ ಉತ್ತಮ ನೆಟ್ವರ್ಕ್ ಸೇವೆಗಳನ್ನೂ ನೀಡುತ್ತಾ ಬಂದಿದೆ.
ಸದ್ಯ ದೇಶದಲ್ಲಿ ಮತ್ತೆ ಕೊರೊನಾದ ಹಾವಳಿ ಪ್ರಾರಂಭವಾಗುವ ಮುನ್ಸೂಚನೆಯಲ್ಲಿದೆ. ಇದಕ್ಕಾಗಿ ಸರ್ಕಾರಗಳೂ ಕೂಡ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ ಇನ್ನೇನು ಕೆಲವರು ವರ್ಕ್ ಫ್ರಮ್ ಹೋಮ್ ಬರಬಹುದು. ಆ ಸಂದರ್ಭದಲ್ಲಿ ನೆಟ್ವರ್ಕ್ ಸಮಸ್ಯೆ, ಡೇಟಾ ಸಮಸ್ಯೆಗಳು ಕಂಡು ಬರುವುದು ಸಹಜ. ಆದರೆ ಈ ಎಲ್ಲಾ ತೊಂದರೆಗಳಿಗೆ ಬಿಎಸ್ಎನ್ಎಲ್ ಪರಿಹಾರವನ್ನು ತಂದಿದೆ. ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗಾಗಿ ಬಿಎಸ್ಎನ್ಎಲ್ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಬಾರೀ ಅಗ್ಗದಲ್ಲಿದ್ದು ಮನೆಯಲ್ಲಿಯೇ ಕುಳಿತು ಆಫೀಸ್ ಕೆಲಸ ಮಾಡುವವರಿಗೆ ಈ ರೀಚಾರ್ಜ್ ಪ್ಲಾನ್ ಸೂಕ್ತವಾಗಿದೆ.
ಪ್ರಸ್ತುತ ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗೆ ಸೂಕ್ತವಾಗುವಂತೆ ಎರಡು ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ಬಿಎಸ್ಎನ್ಎಲ್ ಕಂಪನಿಯು 151 ರೂಪಾಯಿ ಮತ್ತು 251 ರೂಪಾಯಿಗಳ ಎರಡು ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮನೆಯಿಂದಲೇ ಇಂಟರ್ನೆಟ್ ಬಳಕೆ ಮಾಡಿ ಕೆಲಸ ಮಾಡುವವರಿಗೆ ಇದು ಬಹಳಷ್ಟು ಸಹಕಾರಿಯಾಗಲಿದೆ.
- ಬಿಎಸ್‌ಎನ್‌ಎಲ್‌ನ 151 ರೂಪಾಯಿ ಯೋಜನೆ:
ಈ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ರೀಚಾರ್ಜ್ ಅನ್ನು ಮಾಡಿದ್ರೆ ಒಟ್ಟಾಗಿ 40ಜಿಬಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಜಿಂಗ್ ಚಂದಾದಾರಿಕೆ ಸಹ ಹೊಂದಬಹುದಾಗಿದೆ.
- ಬಿಎಸ್‌ಎನ್‌ಎಲ್‌ನ 251 ರೂಪಾಯಿ ಯೋಜನೆ:
ಬಿಎಸ್‌ಎನ್‌ಎಲ್‌ನ 251 ರೂಪಾಯ ಗಳ ಯೋಜನೆಯಲ್ಲಿ ಬಳಕೆದಾರರು ಒಟ್ಟು 70ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ಇದರಲ್ಲೂ ಸಹ ಜಿಂಗ್ ಚಂದಾದಾರಿಕೆ ಆಫರ್ ಅನ್ನು ನೀಡಲಾಗಿದೆ. ಇನ್ನು ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವಂತಹ ಎರಡೂ ಯೋಜನೆಗಳು 28 ದಿನಗಳವರೆಗಿನ ವ್ಯಾಲಿಡಿಯನ್ನು ಮಾತ್ರ ಹೊಂದಿರುತ್ತದೆ. ಯಾಕೆಂದರೆ ಇದಕ್ಕಿಂತ ಹೆಚ್ಚಿನ ಅವಧಿಯನ್ನು ಇದಕ್ಕೆ ನೀಡಲಾಗಿಲ್ಲ. ಏಕೆಂದರೆ ವರ್ಕ್ ಫ್ರಮ್ ಹೋಮ್ನಲ್ಲಿರುವವರು ಕಡಿಮೆ ದಿನದಲ್ಲಿ ಹೆಚ್ಚು ಡೇಟಾವನ್ನು ಬಳಸುತ್ತಾರೆ. ಹಾಗಿರುವಾಗ ಅವರಿಗೆ 28 ದಿನಗಳ ವ್ಯಾಲಿಡಿಟಿ ಸಾಕಾಗುತ್ತದೆ.
ಹೆಚ್ಚಿನ ಡೇಟಾ ರೀಚಾರ್ಜ್ ಪ್ಲಾನ್ ಗಳು ಈ ಕೆಳಗಿವೆ :
- 198 ರೂಪಾಯಿಗಳಷ್ಟು ರೀಚಾರ್ಜ್ ಮಾಡಿದರೆ ಇದರಲ್ಲಿ ದಿನವೂ 2GB ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಈ ಯೋಜನೆ 40 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
- ಬಿಎಸ್‌ಎನ್‌ಎಲ್‌ನ 485 ರೂಪಾಯಿಗಳ ಯೋಜನೆಯಲ್ಲಿ ಗ್ರಾಹಕರು ದಿನವೂ 1.5 ಜಿಬಿ ಡೇಟಾ ಪಡೆಯಬಹುದು. ಇದರೊಂದಿಗೆ ಅನ್ಲಿಮಿಟೆಡ್ ಕಾಲ್ ಹಾಗೂ ದಿನವೂ 100 ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಈ ಯೋಜನೆ ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
- ಬಿಎಸ್‌ಎನ್‌ಎಲ್‌ನ 499 ರೂಪಾಯಿಗಳ ಯೋಜನೆಯಲ್ಲಿ ದಿನವೂ 2 ಜಿಬಿ ಡೇಟಾ ಬಳಸಬಹುದಾಗಿದೆ. ಹಾಗೆಯೇ ಅನ್ಲಿಮಿಟೆಡ್ ಕಾಲ್ ಸೌಲಭ್ಯದ ಜೊತೆಗೆ ದಿನವೂ 100 ಎಸ್‌ಎಮ್‌ಎಸ್ ಮಾಡಬಹುದಾಗಿದೆ. ವಿಶೇಷವಾಗಿ ಈ ಪ್ಲಾನ್ 80 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ
ಹೀಗೆ ಬಿಎಸ್ಎನ್ಎಲ್ ವತಿಯಿಂದ ಹಲವಾರು ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸಲಾಗಿದೆ. ಇದರಿಂದಾಗಿ ವರ್ಕ್ ಫ್ರಮ್ ಹೋಮ್ನಲ್ಲಿ ಇರುವವರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ.