ವಿಚಿತ್ರ ಆದ್ರೂ ಸತ್ಯ | ಈ ದೇಶಗಳಲ್ಲಿ ರಾತ್ರಿ ಎಂಬುವುದೇ ಇಲ್ಲ | ಕಾರಣವೇನು ಗೊತ್ತೇ?

ಸೂರ್ಯ ಬೆಳಿಗ್ಗೆ ಉದಯಿಸುತ್ತಾನೆ ಮತ್ತು ಸಂಜೆ ಅಸ್ತಮಿಸುತ್ತಾನೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಲವಾರು ಜನರು ಸೂರ್ಯನ ಉದಯ, ಅಸ್ತದ ಸುಂದರ ಕ್ಷಣವನ್ನು ನೋಡಲೆಂದು ಕಾದು ಕುಳಿತವರೂ ಇದ್ದಾರೆ. ಆದರೆ ಸೂರ್ಯಾಸ್ತವನ್ನು ಎಂದಿಗೂ ನೋಡದ ಕೆಲವು ಸ್ಥಳಗಳಿವೆ. ಈ ದೇಶದಲ್ಲಿ ರಾತ್ರಿ ಆಗೋದೇ ಇಲ್ಲವಂತೆ!! ಹಾಗಿದ್ರೆ ಆ ದೇಶಗಳು ಯಾವುದಿರಬಹುದು? ಎಂದು ನೋಡೋಣ.

ಐಸ್ಲ್ಯಾಂಡ್ : ಆಶ್ಚರ್ಯವೆಂದರೆ ಇಲ್ಲಿ ಸೂರ್ಯಾಸ್ತ ಮಾತ್ರವಲ್ಲ , ಒಂದು ಸೊಳ್ಳೆ ಕೂಡ ಇಲ್ಲ. ಇಲ್ಲಿ ಜೂನ್ ತಿಂಗಳಲ್ಲಿ ಸೂರ್ಯ ಮುಳುಗುವುದಿಲ್ಲ. ಆದರೆ ಬೇಸಿಗೆಯ ದಿನಗಳಲ್ಲಿ ಸೂರ್ಯನ ಬೆಳಕು ಇರುತ್ತದೆ. ಹಾಗೇ ಇಲ್ಲಿನ ಗ್ರಿಮ್ಸೆ ದ್ವೀಪ ಮತ್ತು ಅಕುರೆರಿ ನಗರಗಳಲ್ಲಿ ಮಧ್ಯರಾತ್ರಿ ಸೂರ್ಯನನ್ನು ನೋಡಬಹುದಾಗಿದೆ.

ನುನಾವುತ್ : ಉತ್ತರ ಅಮೇರಿಕಾ ಖಂಡದ ಕೆನಡಾದಲ್ಲಿರುವ ಈ ನುನಾವುತ್ ಕೇವಲ 3000 ಜನರನ್ನು ಒಳಗೊಂಡ ನಗರವಾಗಿದೆ.
ಈ ಸ್ಥಳದಲ್ಲಿ ಒಂದು ವರ್ಷದಲ್ಲಿ ಸುಮಾರು ಎರಡು ತಿಂಗಳುಗಳ‌ ಕಾಲ ಸೂರ್ಯಾಸ್ತ ಆಗುವುದಿಲ್ಲ. ಆದರೆ ಚಳಿಗಾಲದಲ್ಲಿ 30 ದಿನಗಳವರೆಗೆ ಸೂರ್ಯಾಸ್ತವೇ ಇರುತ್ತದೆ. ಹಾಗಾಗಿ ಈ ಸ್ಥಳ ನಿರಂತರವಾಗಿ ಕತ್ತಲಿನಿಂದ ಕೂಡಿರುತ್ತದೆ.

ನಾರ್ವೆ: ಈ ದೇಶವನ್ನು ಲ್ಯಾಂಡ್ ಆಫ್ ಮಿಡ್ನೈಟ್ ಸನ್ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ವರ್ಷದಲ್ಲಿ ಸುಮಾರು 76 ದಿನಗಳ ಕಾಲ ಸೂರ್ಯಾಸ್ತ ಆಗುವುದಿಲ್ಲ. ನಾರ್ವೆ ಆರ್ಕ್ಟಿಕ್ ವೃತ್ತದಲ್ಲಿ ನೆಲೆಗೊಂಡಿರುವುದರಿಂದ ಸೂರ್ಯಾಸ್ತವನ್ನು ನೋಡದ ಸಂಪೂರ್ಣ ದೇಶವಾಗಿದೆ.

ಸ್ವೀಡನ್ : ಈ ಸ್ಥಳದಲ್ಲಿ 6 ತಿಂಗಳವರೆಗೆ ಬೆಳಕು ಇರುತ್ತದೆ. ಮೇ ತಿಂಗಳ ಆರಂಭದಿಂದ ಆಗಸ್ಟ್ ಅಂತ್ಯದವರೆಗೂ ಇಲ್ಲಿ ಸೂರ್ಯ ಮಧ್ಯರಾತ್ರಿಯಲ್ಲಿ ಅಸ್ತಮಿಸುತ್ತಾನೆ ಮತ್ತು ಬೆಳಿಗ್ಗೆ 4 ಗಂಟೆಗೆ ಮತ್ತೆ ಉದಯಿಸುತ್ತಾನೆ. ಈ ತಾಣಕ್ಕೆ ಭೇಟಿ ನೀಡಲು ಇದು ಅತ್ಯಂತ ಸುಂದರ ಸಮಯವಾಗಿದೆ. ಈ ಸ್ಥಳದಲ್ಲಿ ಮತ್ತೊಂದು ಆಕರ್ಷಣೆಯೆಂದರೆ ಆರ್ಟ್ ನೌವೀವ್ ಚರ್ಚ್ ಆಫ್ ಕಿರುನಾ ಇದು ವಿಶ್ವದ ಚರ್ಚ್‌ಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ.

ಬಾರೋ, ಅಲಾಸ್ಕಾ : ಈ ಸ್ಥಳದಲ್ಲಿ ಮೇ ತಿಂಗಳಿನಿಂದ ಜುಲೈ ವರೆಗೆ ಸೂರ್ಯನು ಬೆಳಗುತ್ತದೆ. ಆದರೆ ನವೆಂಬರ್ ತಿಂಗಳ ಆರಂಭದಲ್ಲಿ ಸೂರ್ಯ ಅಸ್ತಮಿಸುತ್ತದೆ. ಈ ತಿಂಗಳಲ್ಲಿ ಸುಮಾರು 30 ದಿನಗಳವರೆಗೆ ಸೂರ್ಯನು ಉದಯಿಸುವುದಿಲ್ಲ. ಇದನ್ನು ಪೋಲಾರ್ ನೈಟ್ ಎಂದೂ ಕರೆಯುತ್ತಾರೆ.

Leave A Reply

Your email address will not be published.