ಪಡಿತರ ಚೀಟಿದಾರರೇ ಇತ್ತ ಗಮನಿಸಿ | ಅಕ್ಕಿ ವಿತರಣೆ ಬಗ್ಗೆ ನಿಮಗೊಂದು ಉಪಯುಕ್ತ ಮಾಹಿತಿ ಇಲ್ಲಿದೆ!!!
ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಬಹಳ ಕಷ್ಟಕರ ಆಗಿರುತ್ತದೆ ಮತ್ತು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು ಪ್ರೋತ್ಸಾಹಿಸುತ್ತಿದೆ.
ಈಗಾಗಲೇ ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು, ಇದರಲ್ಲಿ ಬಿಳಿ ಬಣ್ಣದ ಗೋಧಿ ಆಕಾರದ ಅಕ್ಕಿ ಕಂಡುಬಂದಿತ್ತು. ಹೀಗಾಗಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ ಎಂದು ಪಡಿತರ ಚೀಟಿದಾರರು ಆತಂಕ ವ್ಯಕ್ತಪಡಿಸಿದ್ದರು.
ಸತ್ಯಾ ಸತ್ಯತೆ ಏನೆಂದರೆ ಉಚಿತ ಅಕ್ಕಿಯಲ್ಲಿ ಸಿಗುತ್ತಿರುವ ಬಿಳಿ ಬಣ್ಣದ ಗೋಧಿ ಆಕಾರದ ಅಕ್ಕಿಯು ಸಾರವರ್ಧಿತ ಪೋಷಕಾಂಶ ಹೊಂದಿದ ಅಕ್ಕಿಯಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಹೌದು 1 ಕ್ವಿಂಟಾಲ್ ಗೆ ಒಂದು ಕೆಜಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ. ಈ ಸಾರವರ್ಧಿತ ಅಕ್ಕಿಯು ಗರ್ಭಿಣಿಯರು, ರಕ್ತ ಹೀನತೆಯುಳ್ಳವರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಭ್ರೂಣದಲ್ಲಿ ಮಗುವಿಗೆ ಶಕ್ತಿ ನೀಡಲು ಈ ಅಕ್ಕಿ ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ .
ಈಗಾಗಲೇ ಕಳೆದ ಒಂದೂವರೆ ವರ್ಷದಿಂದ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ವಿತರಿಸಲಾಗುತ್ತಿದ್ದು, ಇದು ಪೋಷಕಾಂಶ ಹೊಂದಿರುವ ಅಕ್ಕಿಯಾಗಿರುವ ಕಾರಣ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಜನತೆಗೆ ಭರವಸೆ ನೀಡಲಾಗಿದೆ.