ಜಿಯೋ, ಏರ್ಟೆಲ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಿಗ್ ಶಾಕಿಂಗ್ ನ್ಯೂಸ್!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ ಇದೆ. ಆದ್ರೆ, ಈ ಬಾರಿ ಮಾತ್ರ ಬಿಗ್ ಶಾಕಿಂಗ್ ನ್ಯೂಸ್ ನೀಡುವ ಮೂಲಕ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ದೊರಕಿದೆ.
ಹೌದು. ದೇಶದಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಟೆಲಿಕಾಂಗಳು ಸದ್ಯದ ಪ್ಲ್ಯಾನ್‌ಗಳ ಟಾರೀಫ್ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದು ಬಂದಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಪ್ರತಿ ನಾಲ್ಕನೇ ತ್ರೈಮಾಸಿಕದಲ್ಲಿ ಮೊಬೈಲ್ ಪ್ಲ್ಯಾನ್‌ಗಳ ಬೆಲೆಗಳಲ್ಲಿ ಏರಿಕೆ ಕಾಣಲಿದ್ದಾರೆ.
ಜೆಫರೀಸ್‌ನ ವಿಶ್ಲೇಷಕರ ವರದಿಯ ಪ್ರಕಾರ, ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ಟೆಲಿಕಾಂ ಆಪರೇಟರ್‌ಗಳು ಮುಂದಿನ 3 ವರ್ಷಗಳಲ್ಲಿ ಅಂದರೆ FY23, FY24 ಮತ್ತು FY25 ರ Q4 ರಲ್ಲಿ ಶುಲ್ಕದಲ್ಲಿ ಶೇ.10 ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಟೆಲಿಕಾಂ ಸಂಸ್ಥೆಗಳ ಆದಾಯ ಮತ್ತು ಮಾರ್ಜಿನ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡವು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವರದಿಯು ಸೂಚಿಸುತ್ತದೆ.
ಏರ್‌ಟೆಲ್ ಟೆಲಿಕಾಂ ಈಗಾಗಲೇ ತನ್ನ 99ರೂ.ಯ ಅಗ್ಗದ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೆಲವು ತೆಗೆದುಹಾಕಲು ಪ್ರಾರಂಭಿಸಿದ್ದು, ಕಂಪನಿಯ ಗ್ರಾಮೀಣ ವಿಸ್ತರಣೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.99ರೂ. ಏರ್‌ಟೆಲ್ ಪ್ಲಾನ್ ಬದಲಾಗಿ ಈಗ 155ರೂ. ಬೆಲೆಯಲ್ಲಿ ಲಭ್ಯವಿದೆ. ಪ್ರಿಪೇಯ್ಡ್ ಯೋಜನೆಯು 1GB ಡೇಟಾ, 100 ಸಂದೇಶಗಳು, ಏರ್‌ಟೆಲ್ ಎಕ್ಸ್‌ಟ್ರೀಮ್, ವೆಂಕ್ ಮ್ಯೂಸಿಕ್ ಮತ್ತು ಜೀ5 ಪ್ರೀಮಿಯಂ ಆಕ್ಸಸ್ ಅನ್ನು 18 ದಿನಗಳವರೆಗೆ ನೀಡುತ್ತದೆ.