ಅರೇ! ಅಭಿಷೇಕ್ ಅಂಬರೀಷ್ ಮದುವೆಯಾಗುವ ಅವಿವಾ ಬಿದ್ದಪ್ಪಗೆ ಇದು ಎರಡನೇ ಮದುವೆನಾ?
ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡ ಅಭಿಷೇಕ್ ಅಂಬರೀಷ್ ಅವರ ಭಾವಿ ಪತ್ನಿ ಅವಿವಾ ಬಿದ್ದಪ್ಪ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು! ಅವಿವಾ ದೊಡ್ಡ ಉದ್ಯಮಿಯಾದ ಪ್ರಸಾದ್ ಬಿದ್ದಪ್ಪರ ಮಗಳಂತೆ, ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿ, ಉದ್ಯಮಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರಂತೆ. ಅಷ್ಟೇ ಅಲ್ಲದೆ ಭಾರತದ ಹಲವಾರು ದೂರ ದರ್ಶನದ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸಿದ್ದಾರಂತೆ ಎಂಬುದಾಗಿ ಹಲವಾರು ವಿಚಾರಗಳು ಇಂದು ಚರ್ಚೆಯಾಗುತ್ತಿವೆ. ಅಭಿಷೇಕ್ ಅವಿವಾ ಅವರೊಂದಿಗೆ ಎಂಗೇಜ್ಮೆಂಟ್ ಆದಾಗಿನಿಂದಲೂ ಅವಿವಾ ಕುರಿತು ಇಂತಹ ವಿಚಾರಗಳು ಟ್ರೆಂಡಿಂಗ್ ಆಗಿವೆ.
ಇದರೊಂದಿಗೆ ಇನ್ನು ಮುಖ್ಯವಾಗಿ ಎಲ್ಲರ ಗಮನ ಸೆಳೆದ ವಿಷಯವೇನೆಂದರೆ ಅವಿವಾ ಬಿದ್ದಪ್ಪ ಅವರಿಗೆ ಇದು ಎರಡನೇ ಮದುವೆ ಅನ್ನೋ ವಿಚಾರ!. ಹೌದು, ಅವಿವಾ ಕೆಲವು ವರ್ಷಗಳ ಹಿಂದೆಯೇ ವಿಕ್ರಂ ಮೆಹತಾ ಎಂಬುವವರನ್ನು ಮದುವೆ ಆಗಿದ್ದರು. ಅವರು ಕೂಡ ತುಂಬಾ ದೊಡ್ಡ ಉದ್ಯಮಿಯಾಗಿದ್ದರು. ನಂತರ 2016 ರಲ್ಲಿ ಇವರಿಬ್ಬರ ನಡುವೆ ಕೆಲವು ವಿಚಾರಗಳಿಂದ ಭಿನ್ನಾಭಿಪ್ರಾಯಗಳಾಗಿ ವಿಚ್ಛೇದನ ಪಡೆದುಕೊಂಡು ದೂರವಾದರು. ಇದೀಗ ಅವಿವಾ ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಮಗ ಅಭಿಷೇಕ್ ರನ್ನು ಮದುವೆಯಾಗಲಿದ್ದಾರೆ.
ಅಷ್ಟೇ ಅಲ್ಲದೆ, ಅವಿವಾ ಅವರು ಅಭಿಷೇಕ್ ಅವರಿಗಿಂತ ಬರೋಬ್ಬರಿ 11 ವರುಷ ದೊಡ್ಡವರಿದ್ದಾರೆ. ಅಂದರೆ ಅಭಿಷೇಕ್ ಗೆ ಪ್ರಸ್ತುತ 29 ವರ್ಷವಾದರೆ, ಅವಿವಾಗೆ ಇದೀಗ ಸುಮಾರು 40 ವರುಷ ವಯಸ್ಸಾಗಿದೆ. ಅವಿವಾ ಅವರು ಮಾಡೆಲ್ ಆಗಿಯೂ ತಮ್ಮನ್ನು ಗುರುತಿಸಿಕೊಂಡ ಕಾರಣ ಯುವತಿಯರು ನಾಚುವಂತಹ ಮೈಮಾಟವನ್ನು ಹೊಂದಿದ್ದಾರೆ. ಆದರೂ ತಮಗಿಂತ ಹತ್ತು ಪರ್ಸೆಂಟ್ ಗಿಂತಲೂ ಅಧಿಕ ವಯಸ್ಸಿನ ಹೆಣ್ಣನ್ನು ಅಂಬಿ ಮಗ ಅಭಿಷೇಕ್ ಯಾಕಾಗಿ ಮದುವೆ ಆಗುತ್ತಿರುವುದು ? ಇದು ಪ್ರೇಮ ವಿವಾಹವೇ ? ಅಥವಾ ಅರೇಂಜ್ ಮ್ಯಾರೇಜ್ ನಾ ? ಈ ಬಗ್ಗೆ ಅಭಿಷೇಕ್ ಅಂಬರೀಷ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಬಂಡ ಮಾಹಿತಿಯ ಪ್ರಕಾರ ಅವರಿಬ್ಬರದು ಅರೇಂಜ್ಡ್ ಮ್ಯಾರೇಜ್ ಎಂದು ತಿಳಿದು ಬಂದಿದೆ.
ವಿಶ್ವದೆಲ್ಲೆಡೆ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಅವಿವಾ ಅವರು ಹಲವಾರು ಬ್ರಾಂಡ್ ಗಳನ್ನು ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಜ್ಯುವೆಲ್ಲರಿ ಬ್ರಾಂಡಿನ ಮಾಲಿಕರೂ ಆಗಿದ್ದಾರೆ. ಆಕೆ ನೂರಾರು ಕೋಟಿಯ ಒಡತಿ ಕೂಡಾ. ಅವಿವಾ ತಂದೆ ಪ್ರಸಾದ್ ಬಿದ್ದಪ್ಪ ವಿವಾದಾತ್ಮಕ ಫ್ಯಾಶನ್ ಗುರು. ಭಾರತದ ಬಹುದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿದ್ದು ಕರ್ನಾಟಕದ ಕೊಡಗಿನವರಾಗಿದ್ದಾರೆ. ಅವರ ತಾಯಿ ಜುಡಿತ ಬಿದ್ದಪ್ಪ ಅವರು ಮೂಲತಃ ಇಂಗ್ಲೇಂಡಿನವರಾಗಿದ್ದು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಆಡಂ ಎಂಬ ತಮ್ಮ ಇದ್ದಾರೆ.