Holidays 2023: ಕರ್ನಾಟಕದ ಉದ್ಯೋಗಿಗಳಿಗೆ ಯಾವ ತಿಂಗಳಲ್ಲಿ ಎಷ್ಟು ರಜೆ? 2023 ರ ರಜಾ ಲಿಸ್ಟ್‌ ಇಲ್ಲಿದೆ

ಇನ್ನೇನು ಕೆಲವೇ ದಿನಗಳಲ್ಲಿ2022ನೇ ವರ್ಷ ಕಳೆದು ಕ್ರಿಸ್ಮಸ್ ಹಬ್ಬದ ಸಂಭ್ರಮ ಮುಗಿದು ಹೊಸ ಹುರುಪಿನಿಂದ ಹೊಸ ಆಲೋಚನೆಗಳ ಜೊತೆಗೆ 2023ನೇ ಹೊಸ ವರ್ಷದ ಆರಂಭಕ್ಕೆ ಮುನ್ನುಡಿ ಬರೆಯಲು ಕೆಲವೇ ದಿನಗಳು ಬಾಕಿ ಉಳಿದಿದೆ. ಇನ್ನು ಹೊಸ ವರ್ಷದ ಸಂಬಂಧ ಉದ್ಯೋಗಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.

 

ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ.

ಕರ್ನಾಟಕದ ಉದ್ಯೋಗಿಗಳಿಗೆ ಅನ್ವಯಿಸುವಂತೆ ಈ ವರ್ಷ ಒಟ್ಟು 28 ರಜೆಗಳು ದೊರೆಯಲಿದೆ. ಮುಂದಿನ ವರ್ಷ ಯಾವ ತಿಂಗಳಲ್ಲಿ, ಯಾವ ಹಬ್ಬಗಳಿಗೆ ಎಷ್ಟು ರಜೆಗಳು ಸಿಗುತ್ತವೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಜನವರಿ: ಹೊಸ ವರ್ಷದ ಹೊಸ್ತಿಲಲ್ಲಿ ಮೊದಲ ತಿಂಗಳಲ್ಲಿ ಬರುವ ಮೊದಲ ಹಬ್ಬ ಎಂದರೆ ಮಕರ ಸಂಕ್ರಾಂತಿ 15ನೇ ತಾರೀಕು ಭಾನುವಾರ ಬಂದಿರುವುದರಿಂದ ಅಂದು ವಾರದ ರಜೆಯೇ ಆಗಿದೆ. ಆದರೆ, ಜನವರಿ 26, ಗುರುವಾರದಂದು ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ರಜೆ ಇರಲಿದೆ.

ಫೆಬ್ರವರಿ: ವರ್ಷದ 2ನೇ ತಿಂಗಳಲ್ಲಿ 18ನೇ ತಾರೀಖು, ಶನಿವಾರದಂದು ಮಹಾಶಿವರಾತ್ರಿ ಹಬ್ಬದ ಪ್ರಮುಕ್ತ ರಜೆ ದೊರೆಯಲಿದೆ.

ಮಾರ್ಚ್: 3ನೇ ತಿಂಗಳಲ್ಲಿ ಉದ್ಯೋಗಿಗಳಿಗೆ ಒಟ್ಟು 3 ರಜೆಗಳು ಸಿಗಲಿದ್ದು, ಮಾರ್ಚ್ 8-ಬುಧವಾರ ಹೋಳಿ ಹಬ್ಬ, 22ನೇ ತಾರೀಖು ಬುಧವಾರ ಯುಗಾದಿ ಹಬ್ಬದ ಜೊತೆಗೆ 30ರಂದು ಗುರುವಾರ ಶ್ರೀರಾಮ ನವಮಿಯ ಹಿನ್ನೆಲೆ ರಜೆ ಇರಲಿದೆ.

ಏಪ್ರಿಲ್: ಈ ತಿಂಗಳಲ್ಲಿ 2 ದಿನಗಳ ಕಾಲ ರಜೆ ದೊರೆಯಲಿದೆ. ಏ.3 ಸೋಮವಾರದಂದು ಮಹಾವೀರ ಜಯಂತಿ ಜೊತೆಗೆ ಏ.7 ಶುಕ್ರವಾರ ಗುಡ್ ಫ್ರೈಡೇಯಂದು ರಜೆ ದೊರೆಯಲಿದೆ.

ಮೇ: ಮೇ ತಿಂಗಳಲ್ಲಿ 2 ರಜೆಗಳು ದೊರೆಯಲಿದೆ. 1ನೇ ತಾರೀಖಿ ಸೋಮವಾರದಂದು ಮೇ ಡೇ, ಮೇ 5 ಶುಕ್ರವಾರ ಬುದ್ಧಪೂರ್ಣಿಮಾ ಅಂಗವಾಗಿ ರಜೆ ಇರಲಿದೆ.

ಜೂನ್: ಈ ತಿಂಗಳು ಕೇವಲ ಒಂದು ರಜೆ ಇದ್ದು, 29ನೇ ತಾರೀಖು ಗುರುವಾರ ಬಕ್ರಿದ್ ಗೆ ರಜೆ ಇರಲಿದೆ.

ಜುಲೈ: 29 ಶನಿವಾರ ಮೊಹರಂ ಪ್ರಯುಕ್ತ ರಜೆ ದೊರೆಯಲಿದೆ.

ಆಗಸ್ಟ್: 15ನೇ ತಾರೀಖು ಸ್ವಾತಂತ್ರ್ಯ ದಿನ ರಜೆ ಜೊತೆಗೆ 25 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬಕ್ಕೆ ರಜೆ ಇರಲಿದೆ.

ಸೆಪ್ಟೆಂಬರ್: ಈ ತಿಂಗಳಲ್ಲಿ 2 ರಜೆಗಳಿದ್ದು, 6ನೇ ತಾರೀಖು ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿ, 28ನೇ ತಾರೀಖು ಗುರುವಾರ ಈದ್ ಮಿಲಾದ್ ಗೆ ರಜೆ ಸಿಗಲಿದೆ.

ಅಕ್ಟೋಬರ್: ಈ ತಿಂಗಳಲ್ಲಿ ಬರೋಬ್ಬರಿ 4 ದಿನಗಳು ರಜೆಗಳಿವೆ. 2ನೇ ತಾರೀಖು ಸೋಮವಾರ ಗಾಂಧಿ ಜಯಂತಿ, 14 ಶನಿವಾರ ಮಹಾಲಯ ಅಮಾವಾಸ್ಯೆ, 23 ಸೋಮವಾರ ಆಯುಧ ಪೂಜೆ ಹಾಗೂ 24 ಮಂಗಳವಾರ ವಿಜಯದಶಮಿಗೆ ರಜೆ ದೊರೆಯಲಿದೆ.

ನವೆಂಬರ್: ಈ ತಿಂಗಳಲ್ಲೂ 4 ದಿನಗಳ ರಜೆ ಸಿಗಲಿದೆ. 1ನೇ ತಾರೀಖು ಬುಧವಾರದಂತೆ ಕನ್ನಡ ರಾಜ್ಯೋತ್ಸವ, 12 ಭಾನುವಾರ ನರಕ ಚತುರ್ದಶಿ, 14 ಮಂಗಳವಾರ ಬಲಿಪಾಡ್ಯಮಿ ಹಾಗೂ 30 ಗುರುವಾರ ಕನಕ ಜಯಂತಿ ಇರಲಿದೆ.

ಡಿಸೆಂಬರ್: ಕೊನೆ ತಿಂಗಳು ಕ್ರಿಸ್ಮಸ್ ಅಂಗವಾಗಿ 25ನೇ ತಾರೀಖು ರಜೆ ಇರಲಿದೆ.

ಈ ದಿನಗಳು ರಜೆ ಇರಲಿದ್ದು ನೌಕರರು ಮನೆಯವರೊಂದಿಗೆ ಕಾಲ ಕಳೆಯಬಹುದು.ಹೀಗಾಗಿ, ರಜೆಯ ಬಗ್ಗೆ ಮೊದಲೇ ತಿಳಿದುಕೊಂಡರೆ ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಲು ನೆರವಾಗಬಹುದು.

Leave A Reply

Your email address will not be published.