ಖಾಸಗಿ ನೌಕರರಿಗೆ ಸರಕಾರದಿಂದ ಬಂತು ಗುಡ್ ನ್ಯೂಸ್ !!!
ಈಗಾಗಲೇ ಖಾಸಗಿ ನೌಕರರಿಗೆ ಸರಕಾರದಿಂದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು, ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಿದೆ.
ಸದ್ಯ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನವೆಂಬರ್ 01 ರಿಂದ ನೋಂದಣಿ ಪ್ರಾರಂಭವಾಗಿದ್ದು, ನೂತನ ಮಾರ್ಗಸೂಚಿಯನ್ವಯ ಮಾಸಿಕ ರೂ.30,000/- ವರೆಗಿನ ಅಥವಾ ವಾರ್ಷಿಕ ರೂ.3,60,000/- ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಅಲ್ಲದೇ ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂ.20/- ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್‍ಸೈಟ್ https://sahakarasindhu.karnataka.gov.in
ಕಚೇರಿ ದೂರವಾಣಿ ಸಂಖ್ಯೆ: 0836-2958634 ಸಂಪರ್ಕಿಸಬಹುದೆಂದು ಧಾರವಾಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ರಂಜನಾ ಟಿ. ಪೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ಅರ್ಹ ಸದಸ್ಯರು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.