6 ವರ್ಷದ ಪ್ರೀತಿ ಒಡೆದು ಹೋಯಿತು | ಆ ʼಒಂದುʼ ಕೇಸಿನಿಂದ | ಒಬ್ಬರನ್ನೊಬ್ಬರು ಬಿಟ್ಟಿರಲಾರದ ಜೋಡಿ ತಗೊಂಡ ನಿರ್ಧಾರ ದುರಂತದಲ್ಲಿ ಅಂತ್ಯ
ಪ್ರೀತಿ ಕುರುಡು ಎಂಬ ಮಾತಿನಂತೆ ಅದೆಷ್ಟೋ ಪ್ರಣಯ ಜೋಡಿಗಳು ಪ್ರೀತಿಯ ಬಲೆಯಲ್ಲಿ ಸಿಲುಕಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿ ಸುಂದರ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ಘಟನೆಗಳು ಇವೆ. ಇದರ ನಡುವೆ ಪ್ರೀತಿ ಎಂಬ ಮೋಡಿಗೆ ಬಿದ್ದು ಜೀವ ಕಳೆದುಕೊಂಡ ಜೋಡಿಗಳ ಕಥೆಯೂ ಕೂಡ ಇದೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಎಂಬಂತೆ ಯಾರದ್ದೋ ಆಟಕ್ಕೆ ಮತ್ತಾರೋ ಬಲಿಯಾದ ದುರಂತಮಯ ಘಟನೆ ಬೆಳಕಿಗೆ ಬಂದಿದೆ.
ಪ್ರೀತಿಸಿ ಮದುವೆಯಾಗಬೇಕೆಂದು ಕನಸು ಕಂಡು ಮನೆಯವರ ಒಪ್ಪಿಗೆ ಪಡೆದ ಜೋಡಿಗೆ ಯಾರ ಕಣ್ಣು ಬಿತ್ತೋ ತಿಳಿಯದು!! ನೂರಾರು ಕನಸು ಹೊತ್ತ ಪ್ರಣಯ ಜೋಡಿಗಳು ಒಂದೇ ನೇಣಿಗೆ ಕೊರಳೊಡ್ಡಿ ಇಹಲೋಕದ ಪಯಣವನ್ನು ಮುಗಿಸಿ ದುರಂತಮಯವಾಗಿ ಸಾವಿನ ದವಡೆಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಆರು ವರ್ಷದಿಂದ ಪ್ರೀತಿಸಿದ್ದ ಜೋಡಿಯೊಂದು (Couple) ಒಂದೇ ವೇಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಇಬ್ಬರ ಪ್ರೀತಿಯ (Love) ವಿಷಯ ತಿಳಿದಿದ್ದ ಎರಡು ಕುಟುಂಬಗಳು ಕೂಡ ಮದುವೆಗೆ (Marriage) ಗ್ರೀನ್ ಸಿಗ್ನಲ್ ನೀಡಿ ಒಪ್ಪಿಗೆ ಕೂಡ ನೀಡಿದ್ದರು. ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕ ಬಳಿಕ ಈ ಪ್ರಣಯ ಜೋಡಿಗಳು ಪರಸ್ಪರ ಒಟ್ಟಿಗೆ ಎಲ್ಲೆಡೆ ಓಡಾಡುತ್ತಿದ್ದರು.
ದರ್ಶನ್ ಮತ್ತು ಪೂರ್ವಿಕಾ ಆತ್ಮಹತ್ಯೆಗೆ ಶರಣಾದ ಜೋಡಿಗಳಾಗಿದ್ದು, ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಕಲ್ಲುಗುಡ್ಡೆ ಗ್ರಾಮದ ದರ್ಶನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನ್‍ಬಾಳು ಗ್ರಾಮದ ಪೂರ್ವಿಕಾ ಆಲ್ದೂರು ಸಮೀಪದ ಗುಲ್ಲನ್‍ಪೇಟೆಯ ಸತ್ತಿಹಳ್ಳಿಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.
ಆದರೆ, ಇವರಿಬ್ಬರ ಪ್ರೀತಿಗೆ ಯಾರ ಕಣ್ಣು ಬಿತ್ತೋ ತಿಳಿಯದು!! ಆದರೆ, ಒಂದು ಪ್ರಕರಣ ಇಬ್ಬರ ನಡುವೆ ಬಿರುಕು ಮೂಡಿಸಿತ್ತು. ಒಂದು ತಿಂಗಳ ಹಿಂದೆ ಯುವಕನ ವಿರುದ್ಧ ದಾಖಲಾದ ಒಂದು ಪ್ರಕರಣ (Compliant Filed) ಇಂದು ಇಬ್ಬರ ಜೀವವನ್ನು ಬಲಿಪಡೆದು ಕೊಂಡು ಬಿಟ್ಟಿದೆ.
ಮಂಗಳೂರಿಗೆ ಹೋಗಿ ಬರುತ್ತಿದ್ದ ದರ್ಶನ್ಗೆ ಅಲ್ಲಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ನಡುವೆ ಸ್ನೇಹವಾಗಿ ಈ ಬಳಿಕ, ಇಬ್ಬರ ಸ್ನೇಹವೆಂಬ ಬಂಧ ಪ್ರೀತಿಗೆ ಮುನ್ನುಡಿ ಬರೆದು ಪ್ರೇಮಾಂಕುರವಾಗಿತ್ತು.ಈ ವಿಷಯ ಮನೆಯವರಿಗೆ ತಿಳಿದು ಅವರು ಕೂಡ ಗ್ರೀನ್ ಸಿಗ್ನಲ್ ನೀಡಿ 5 ವರ್ಷದ ಬಳಿಕ ಮದುವೆ ಮಾಡುವ ಭರವಸೆ ನೀಡಿದ್ದರು.
ಒಂದು ತಿಂಗಳ ಹಿಂದೆ ದರ್ಶನ್ ವಿರುದ್ಧ ಚಿಕ್ಕಮಗಳೂರಿನ ಮಲ್ಲಂದೂರು ಠಾಣೆಯಲ್ಲಿ ದಾಖಲಾದ ಅದೊಂದು ಕೇಸ್ ಪ್ರೇಮಿಗಳ ಮಧ್ಯೆ ಬಿರುಕು ಮೂಡಿಸಿತ್ತು ಎನ್ನಲಾಗಿದ್ದು, ದರ್ಶನ್ನಿಂದ ತನಗೆ ಮೋಸ ಆಗಿದ್ದು, ಅವನಿಂದಲೇ ನಾನು ಗರ್ಭಿಣಿಯಾಗಿದ್ದೇನೆ ಎಂದು ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.
ಈ ವಿಚಾರ ಪೂರ್ವಿಕಾಳ ಗಮನಕ್ಕೆ ಬರುತ್ತಿದ್ದಂತೆ ಗೆಳೆಯ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ. ಆಗ, ಈ ಪ್ರಕರಣದಲ್ಲಿ ತನ್ನ ಯಾವುದೇ ತಪ್ಪಿಲ್ಲ ಜೊತೆಗೆ ಡಿಎನ್ಎ ಟೆಸ್ಟ್ ಮಾಡಿಸಿ ಎಂದು ದರ್ಶನ್ ಹೇಳಿಕೊಂಡಿದ್ದಾನೆ.
ಮೂರು ದಿನದ ಹಿಂದೆ ಪೂರ್ವಿಕಾ ದರ್ಶನ್ನನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಏನು ಚರ್ಚೆ ನಡೆದಿದೆ ಎಂಬ ಬಗ್ಗೆ ಬಹಿರಂಗವಾಗಿಲ್ಲ. ಆದರೆ, ಅಪ್ಪ-ಅಮ್ಮನಿಗೆ ಕ್ಷಮಿಸಿ, ಅವನನ್ನ ಬಿಟ್ಟು ಇರೋಕೆ ಆಗ್ತಿಲ್ಲ ಎಂದು ವಾಯ್ಸ್ ಮೆಸೇಜ್ ಕಳಿಸಿ ಪೂರ್ವಿಕಾ ತನ್ನ ಪ್ರೇಮಿ ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನಲಾಗಿದೆ.
ದರ್ಶನ್ನಿಗೆ ದೂರು ನೀಡಿದ ಯುವತಿಯನ್ನೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು,ಈ ನಡುವೆ ಪೂರ್ವಿಕಾಗೆ ಪ್ರೀತಿಸಿದ ಹುಡುಗನನ್ನು ಬಿಟ್ಟು ಬದುಕಲು ಸಾದ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿಯೇ ಮಂಗಳೂರಿನಿಂದ ದರ್ಶನ್ನನ್ನು ಭೇಟಿಯಾಗಲು ಪೂರ್ವಿಕಾ ಬಂದಿದ್ದಳು ಎನ್ನಲಾಗಿದೆ.
ಪ್ರೇಮ ಹಕ್ಕಿಗಳು ಆಲ್ದೂರು ಪ್ರದೇಶದ ಕಡೆಗೆ ಬಂದಿದ್ದು, ಇಬ್ಬರು ಮಧ್ಯೆ ಏನು ಮಾತು ನಡೆದಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ. ದರ್ಶನ್ ಬದುಕಿದರೆ, ದೂರು ನೀಡಿದ ಹುಡುಗಿಯನ್ನೇ ಮದುವೆ ಆಗಬೇಕು ಎಂದು ತಿಳಿದ ದರ್ಶನ್ ಗೆಳತಿ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ದೂರು ದಾಖಲಿಸಿದ್ದ ಯುವತಿ ಆರೋಪ ನಿಜವೇ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ದೂರು ದಾಖಲಾದ ಬಳಿಕ ದರ್ಶನ್ ಪೋಷಕರು ಅದೇ ಯುವತಿ ಜೊತೆ ಮದುವೆ ಮಾಡಿಸಲು ಮುಂದಾಗಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿ, ಜೋಡಿಗಳಿಬ್ಬರು ನೇಣಿಗೆ ಕೊರಳು ಒಡ್ಡಿದರೆ ಎಂಬ ಅನುಮಾನ ವ್ಯಕ್ತವಾಗಿದೆ.