ವಾಹನ ಸವಾರರೇ ಗಮನಿಸಿ | ಇನ್ನು ಮುಂದೆ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ಬದಲಿಗೆ ಬರಲಿದೆ ಹೊಸ ನಿಯಮ – ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ

ಕಾಲ ಬದಲಾದಂತೆ ಪ್ರತಿ ವಸ್ತುಗಳಲ್ಲಿ ಕೂಡ ಮಾರ್ಪಾಡು ಆಗಿ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರ ನಡೆಯುತ್ತಿವೆ. ಈ ನಡುವೆ ಟೋಲ್ ಸಂಗ್ರಹಕ್ಕಾಗಿ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾಗಳು ಎಂಬ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಅಣಿಯಾಗಿದೆ.

ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ವ್ಯವಸ್ಥೆಯಾಗಿರುವ ಫಾಸ್ಟ್‌ ಟ್ಯಾಗ್‌ (Fastag) ಜಾರಿಗೆ ಬಂದ ಬಳಿಕ ಜನರಿಗೆ ಇದರಿಂದ ಅನೇಕ ಪ್ರಯೋಜನವಾಗಿತ್ತು. ಆದರಲ್ಲಿ ಕೂಡ ಕ್ಯಾಶ್‌ (Cash Transaction) ಮಾಡುವವರಿಗೆ, ಅಲ್ಲದೆ, ಚಿಲ್ಲರೆ ಇಲ್ಲ ಎನ್ನುವ ಕಿರಿಕಿರಿ ಗಳಿಂದ ಪರಿಹಾರ ಲಭ್ಯವಾಗಿತ್ತು.

ಆದರೆ, ಬಹುತೇಕರು ಫಾಸ್ಟ್‌ ಟ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೇಲೆ ಟೋಲ್‌ ಗೇಟ್‌ ಗಳಲ್ಲಿ (Toll Gate) ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇದಕ್ಕೆ ಬದಲಿ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೌದು, ಈ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ (Central Government) ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ, ಟೋಲ್ ಸಂಗ್ರಹಕ್ಕಾಗಿ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾಗಳು ಎಂಬ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿದೆ.

ಜಿಪಿಎಸ್ ಆಧಾರಿತ ಸಿಸ್ಟಮ್ ಹೇಗೆ ಕೆಲಸ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ:

ಎಎನ್‌ಪಿಆರ್ ಅಥವಾ ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯು ನಂಬರ್‌ ಪ್ಲೇಟ್‌ ರೀಡ್‌ ಮಾಡಲಿದ್ದು, ಈ ಬಳಿಕ, ಟೋಲ್ ತೆರಿಗೆಯನ್ನು ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

ಈ ವ್ಯವಸ್ಥೆಯ ಮೂಲಕ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ ಗಳಲ್ಲಿ ಸ್ಥಾಪಿಸಲಾದ ಕ್ಯಾಮೆರಾಗಳನ್ನು ಅವಲಂಬಿಸಲ್ಪಟ್ಟಿರುತ್ತದೆ. ಈ ಕ್ಯಾಮೆರಾಗಳು ನಂಬರ್‌ ಪ್ಲೇಟ್‌ ನ ಫೋಟೋವನ್ನು ಕ್ಲಿಕ್ ಮಾಡಿಕೊಂಡು ವಾಹನ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ತೆರಿಗೆಯನ್ನು ಕಡಿತಗೊಳಿಸುತ್ತವೆ. ಹಾಗಾಗಿ ಈ ಹೊಸ ANPR ವ್ಯವಸ್ಥೆಯು ಫಾಸ್ಟ್ಯಾಗ್ ಬದಲಿಗೆ ಉತ್ತಮ ಆಯ್ಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಭಾರತೀಯ ಸಾರಿಗೆ ನಿಗಮ ಮತ್ತು ಐಐಎಂ ಕಲ್ಕತ್ತಾದ ವರದಿಯ ಪ್ರಕಾರ, ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವುದರ ಪರಿಣಾಮವಾಗಿ ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ವ್ಯರ್ಥವಾಗುತ್ತಿದೆ ಎನ್ನಲಾಗಿದೆ.

ಟೋಲ್ ಪ್ಲಾಜಾದಲ್ಲಿ ಉಂಟಾಗುವ ಜಾಮ್‌ನಿಂದ ಪ್ರತಿ ವರ್ಷ ಸುಮಾರು 45 ಸಾವಿರ ಕೋಟಿ ರೂಪಾಯಿಗಳು ವ್ಯರ್ಥವಾಗುತ್ತವೆ. ಅಂದರೆ ಒಟ್ಟಾರೆ ಟೋಲ್ ನಾಕಾಗಳಿಂದ ದೇಶಕ್ಕೆ 1 ಲಕ್ಷದ 45 ಸಾವಿರ ಕೋಟಿ ನಷ್ಟ ಸಂಭವಿಸುತ್ತಿದೆ.

ಹೀಗಾಗಿ, ಶೀಘ್ರದಲ್ಲೇ ಜಿಪಿಎಸ್ ವ್ಯವಸ್ಥೆ ಜಾರಿಗೆ ತರುವ ಕುರಿತಾಗಿ ಚಿಂತನೆ ನಡೆಸುತ್ತಿದೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಹಣವನ್ನು ಉಳಿಸುವ ಜೊತೆಗೆ ದೇಶದ ಆರ್ಥಿಕ ನಷ್ಟವನ್ನು ಕೂಡ ಉಳಿಸಲು ಜಿಪಿಎಸ್ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಈ ನಡುವೆ ವಾಹನದ ನಂಬರ್ ಪ್ಲೇಟ್ ಕೂಡ ಬದಲಾಗಬಹುದು ಎನ್ನಲಾಗುತ್ತಿದೆ. ವಾಹನದ ನಂಬರ್ ಪ್ಲೇಟ್‌ನಲ್ಲೂ ಸರ್ಕಾರ ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗ ಹೊಸ ನಂಬರ್ ಪ್ಲೇಟ್‌ನಲ್ಲಿ ಜಿಪಿಎಸ್ ಇರಲಿದೆ. ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯ ಹೊಸ ವಾಹನಗಳಲ್ಲಿ ಜಿಪಿಎಸ್ ನಂಬರ್ ಪ್ಲೇಟ್ ಅಳವಡಿಸಲು ಆದೇಶ ಹೊರಡಿಸಿದೆ ಎನ್ನಲಾಗಿದೆ.

ಹೊಸ ವಾಹನಗಳ ಜೊತೆಗೆ ಈಗ ಹಳೆಯ ವಾಹನಗಳಿಗೂ ಹೊಸ ನಂಬರ್ ಪ್ಲೇಟ್ ಅಳವಡಿಸಬೇಕಾಗುತ್ತದೆ. ಅದರ ನಂಬರ್ ಪ್ಲೇಟ್ ಗೆ ಜಿಪಿಎಸ್ ವ್ಯವಸ್ಥೆ ಜೋಡಿಸಲಾಗುತ್ತದೆ. ಈ ಹೊಸ ನಂಬರ್ ಪ್ಲೇಟ್‌ಗಳಲ್ಲಿ ಹೊಸ ಜಿಪಿಎಸ್ ಕೂಡ ಅಳವಡಿಸಲಾಗುವುದು. ಇದರೊಂದಿಗೆ, ಟೋಲ್ ಪ್ಲಾಜಾದಲ್ಲಿ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗುತ್ತದೆ.

ಇದರಿಂದಾಗಿ ವಾಹನವು ಹೊರಟು ಹೋದ ಕೂಡಲೇ ನಿಮ್ಮ ಖಾತೆಯಿಂದ ಟೋಲ್ ತೆರಿಗೆ ಹಣವನ್ನು ಕಡಿತಗೊಳಿಸಲಾಗುತ್ತದೆ. ತಂತ್ರಜ್ಞಾನಗಳಿಂದ ಜನರ ಅತ್ಯಮೂಲ್ಯ ಸಮಯದ ಜೊತೆಗೆ ಹಣ ಕೂಡ ಉಳಿತಾಯವಾಗುತ್ತದೆ ಅಲ್ಲದೇ ಟೋಲ್‌ ಗಳಲ್ಲಿ ಉಂಟಾಗುತ್ತಿದ್ದ ಜಾಮ್‌ ನಿಂದಾಗಿ ಮಾನಸಿಕ ಕಿರಿಕಿರಿಯೂ ತಪ್ಪಲಿದೆ.

Leave A Reply

Your email address will not be published.